ಶ್ರೀ ದೇವರ ದಾಸಿಮಯ್ಯ ನವರ 1044 ನೆಯ ಜಯಂತಿ ಉತ್ಸವ ಸಮಿತಿ ರಚನೆ

0
55

ಕಲಬುರಗಿ: ಗೋಧೂಳಿ ಸಮಯದಲ್ಲಿ ಹಮ್ಮಿಕೊಂಡ ಜಯಂತೋತ್ಸವ ಸಮಿತಿ ಆಯ್ಕೆ ಪೂರ್ವ ಭಾವಿ ಸಭೆಯಲ್ಲಿ ಸಪ್ತ ನೇಕಾರರಲ್ಲಿ ಪಂಚ ಸಮಾಜದ (ಹಟಗಾರ, ಕುರಹಿನಶೆಟ್ಟಿ, ದೇವಾಂಗ, ಸ್ವಕುಳ ಸಾಲಿ, ತೋಗಟವೀರ ಕ್ಷತ್ರಿಯ)  ಗಣ್ಯ ಮಾನ್ಯ ವ್ಯಕ್ತಿಗಳು ಸೇರಿ, ಸೂಕ್ತ ರೀತಿಯಲ್ಲಿ ಅದ್ಧುರಿ ಜಯಂತಿ ಆಚರಣೆ ಮಾಡುವ ನಿಟ್ಟಿನಲ್ಲಿ ಚರ್ಚಿಸಿ, ಸರ್ವ ಸಮ್ಮತವಾಗಿ ಪಧಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಮಕ್ತಪೂರ್ ನಲ್ಲಿರುವ ದೇವರ ದಾಸಿಮಯ್ಯ ದೇವಸ್ಥಾನದಲ್ಲಿ ಪಟ್ಟಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ  ಶ್ರೀ ಮಡಿವಾಳಪ್ಪ ಹತ್ತೂರೆ ಅವರ ನೇತೃತ್ವದಲ್ಲಿ ಸೇರಿದ ಸಭೆಯಲ್ಲಿ ಶ್ರೀ. ರೇವಣ್ಣಸಿದ್ದಪ್ಪಾ.ಎಸ್. ಗಡ್ಡದ ರವರನ್ನು 1044 ನೇ ಜಯಂತೋತ್ಸವ ಸಮಿತಿಯ ಅಧ್ಯಕ್ಷ ರೆಂದು ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

ಸಭೆಯಲ್ಲಿ ಹಿರಿಯ ವಕೀಲರಾದ ಪ್ರಕಾಶ ಡಿಗ್ಗಿ, ಅಣ್ಣರಾಯ ಕುಣಕೇರಿ, ಚನ್ನಮಲ್ಲಪ್ಪ ನಿಂಬೆಣಿ, ಲೇಖಕ ಸೂರ್ಯಕಾಂತ ಸೊನ್ನದ, ಶರಣಪ್ಪ ಲಖಮಣ, ಶ್ರೀನಿವಾಸ ಬಲಪುರ್, ಮ್ಯಾಳಗಿ ಚಂದ್ರಶೇಖರ, ಕುಶಾಲ ಯಾಡವಳ್ಳಿ ಉಪಸ್ಥಿತರಿದ್ದರು, ಕೊನೆಯಲ್ಲಿ ದೇವರ ದಾಸಿಮಯ್ಯ ಉತ್ಸವ ಸಮಿತಿ ಯ ಅಧ್ಯಕ್ಷ ರಾಗಿ ಆಯ್ಕೆ ಗೊಂಡ ರೇವಣ್ಣಸಿದ್ದಪ್ಪ ಗಡ್ಡದ ರವರಿಗೆ ಜವಳಿ ಇಲಾಖೆ ಯ ಯೋಜನಾ ಅಡಳಿತಾಧಿಕಾರಿ ಜವಹಾರ ಹುಬ್ಬಳ್ಳಿ ಯವರು ಸನ್ಮಾನಿಸಿ ಎಂದು ಶುಭಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here