ಕಲಬುರಗಿ: 371ನೇ ಜೇ ಕಲಂ ಸೌಲತ್ತುಗಳ ಬಗ್ಗೆ ಡಾ. ಲಕ್ಷ್ಮಣ ದಸ್ತಿಯವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅಂಜುಮನ್ ಸಂಸ್ಥೆಯಿಂದ ಅ.6. ರಂದು ರವಿವಾರ ಬೆಳಗ್ಗೆ 11.30 ಗಂಟೆಗೆ ಸರಿಯಾಗಿ ಕೆ.ಬಿ.ಎನ್.ಆಸ್ಪತ್ರೆ ಮುಂಬಾಗದಲ್ಲಿ ಬರುವ ಅಂಜುಮನ್ ತರಖ್ಖಿ.ಎ.ಉರ್ದು. ಹಿಂದ್ ಸಭಾಂಗಣದಲ್ಲಿ ಅಂಜುಮನ್ ತರಖ್ಖಿ -ಎ-ಉರ್ದು ಹಿಂದ್ ವತಿಯಿಂದ 371ನೇ ಜೇ ಕಲಂ ಸೌಲತ್ತುಗಳ ಕುರಿತು ಹಿರಿಯ ಹೋರಾಟಗಾರರಾದ ಡಾ.ಲಕ್ಷ್ಮಣ ದಸ್ತಿಯವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಮಹತ್ವದ ಉಪನ್ಯಾಸ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಉರ್ದು ಅಕಾಡೆಮಿ ಅಧ್ಯಕ್ಷರಾದ ಡಾ.ವಹಾಬ್ ಅಂದಲಿಬ್, ನ್ಯಾಷನಲ್ ಕಾಲೇಜಿನ ನಿವೃತ್ತ್ ಪ್ರಾಚಾರ್ಯರಾದ ಶ್ರೀ ಅಮ್ಜದ್ ಜಾವೇದ್ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಡಾ.ಅಕ್ರಮ್ ನಕ್ಕಾಶ ವಹಿಸಲಿದ್ದಾರೆ. ಪ್ರಾಸ್ತಾವಿಕ ಭಾಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಮಾಜಿದ್ ದಾಗಿ ಮಾಡುವರು.
ನಮ್ಮ ಪ್ರದೇಶದ ನೌಕರಿಗಳ, ಶೈಕ್ಷಣಿಕ ಮೀಸಲಾತಿ ಸೌಲಭ್ಯಗಳ ಬಗ್ಗೆ ಮತ್ತು ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದ ಈ ಮಹತ್ವದ ಕಾರ್ಯಮಕ್ಕೆ ಬುದ್ಧಿಜೀವಿಗಳು, ಚಿಂತಕರು,ಆಯಾ ಕ್ಷೇತ್ರದ ಗಣ್ಯರು, ಸಾಮಾಜಿಕ ಕಾರ್ಯಕರ್ತರು, ವಿಧ್ಯಾರ್ಥಿಗಳು, ನಿರುದ್ಯೋಗಿಗಳು ಮತ್ತು ಆಯಾ ಕ್ಷೇತ್ರದ ನಾಗರಿಕರು ಭಾಗವಹಿಸಲು ಅಂಜುಮನ್ ತರಖ್ಖಿ -ಎ-ಉರ್ದು ಹಿಂದ್ ಕಲಬುರಗಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಮಾಜೀದ್ ದಾಗಿ ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.