ಕಲಬುರಗಿ: ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ದಕ್ಷಿಣ ಮಂಡಳ ವತಿಯಿಂದ ಭಾರತೀಯ ಜನತಾ ಪಕ್ಷದ ಸರ್ಕಾರದ ಸಾಧನೆಗಳ ಬಗ್ಗೆ ಅಭಿವೃದ್ಧಿಯ ಪ್ರಗತಿ ರಥಯಾತ್ರೆಯನ್ನು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಮಂಡಳಿಯ ಅಧ್ಯಕ್ಷ ವಿದ್ಯಾಸಾಗರ್ ಶಾಬಾದಿ ನೇತೃತ್ವದಲ್ಲಿ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವ ಬೆಳಮಗಿ, ದಕ್ಷಿಣ ಮಂಡಲದ ಅಧ್ಯಕ್ಷ ರಾಮಚಂದ್ರ ಗುಮ್ಮಟ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಸಾಲಿಮಠ, ಭಾರತೀಯ ಜನತಾ ಪಕ್ಷದ ಕಾರ್ಯಾಲಯದ ಕಾರ್ಯದರ್ಶಿ ಶರಣು ಸಜ್ಜನ, ಜೈ ಭೀಮ್ ದಕ್ಷಿಣ ಮಂಡಳದ ಯುವ ಮೋರ್ಚಾ ಅಧ್ಯಕ್ಷ ಸುನಿಲ್ ಮಹಾಗವಕರ್, ಪಕ್ಷದ ಯುವ ಮುಖಂಡರಾದ ದಯಾನಂದ ಪಾಟೀಲ್, ಸಚಿನ್ ಬನ್ನಿ, ಪರಮೇಶ್ವರ, ಪೀರಶೇಟ್ಟಿ ಸೋಮಾ, ಮಹೇಶ ಚವ್ಹಾಣ, ಹರೀಶ ರೆಡ್ಡಿ, ಮಹಾಂತೇಶ ಆಲೂರ, ಸಿದ್ದು ಭೀಮಳ್ಳಿ, ಪ್ರೇಮ ಹಿಪ್ಪರಗಿ, ರಂಜಿತ್ ಮೂಲಿಮನಿ ಇದ್ದರು.