ಹಸನಾಪುರ ಕ್ಯಾಂಪ್ ಕಾಡಾ ಕಚೇರಿ ಸ್ಥಳಾಂತರಿಸದಂತೆ ಪ್ರತಿಭಟನೆ

0
15

ಸುರಪುರ:ನಗರದ ಹಸನಾಪುರ ಕ್ಯಾಂಪ್‍ಲ್ಲಿನ ಕೆಬಿಜೆಎನ್‍ಎಲ್ ಕಾಡಾ ಕಚೇರಿ ಸಂಖ್ಯೆ 2ನ್ನು ಸರಕಾರ ಬಾಗಲಕೋಟೆಗೆ ಸ್ಥಳಾಂತರಿಸುತ್ತಿದೆ ಎಂದು ಆರೋಪಿಸಿ ವಿವಿಧ ಸಾಮೂಹಿಕ ಸಂಘಟನೆಗಳು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಗುರುವಾರ ಹಸನಾಪುರ ಕ್ಯಾಂಪ್‍ಲ್ಲಿನ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಸೇರಿದಂತೆ ಅನೇಕ ಮುಖಂಡರು ಮಾತನಾಡಿ,ಈಗಾಗಲೇ ಕೃಷ್ಣಾ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಬರುತ್ತಿಲ್ಲ ಎಂದು ನಿತ್ಯವು ರೈತರು ಹಿಡಿಶಾಪ ಹಾಕುವಂತ ಸ್ಥಿತಿ ಇದೆ.ಜಮೀನುಗಳಿಗೆ ನೆಪಕ್ಕೆ ಕಾಲುವೆಗಳ ನಿರ್ಮಿಸಲಾಗಿದೆ,ಆದರೆ ನೀರು ಬಾರದೆ ಸಮಸ್ಯೆ ಪಡುವಂತಾಗಿದೆ.

Contact Your\'s Advertisement; 9902492681

ರೈತರು ತಮಗೆ ಇರುವ ಸಮಸ್ಯೆಯನ್ನು ಹೇಳಿಕೊಳ್ಳಲು ಇರುವ ಕಚೇರಿ ಇದು ಹಸನಾಪುರ ಕ್ಯಾಂಪ್‍ಲ್ಲಿನ ಕಾಡಾ ಕಚೇರಿ.ಆದರೆ ಈ ಕಚೇರಿಯನ್ನು ಈಗ ಸರಕಾರ ಬಾಗಲಕೋಟೆಗೆ ಸ್ಥಳಾಂತರಿಸುವ ಮೂಲಕ ತಾಲೂಕಿನ ರೈತರ ಬದುಕಿನ ಜೊತೆಗೆ ಚಲ್ಲಾಟವಾಡಲು ಮುಂದಾಗಿದೆ.ಇದನ್ನು ಜಿಲ್ಲೆಯ ಹಾಗೂ ತಾಲೂಕಿನ ಎಲ್ಲ ಸಂಘಟನೆಗಳು ಖಂಡಿಸುತ್ತವೆ.ಕೂಡಲೇ ಸರಕಾರ ಮಾಡಿರುವ ಆದೇಶವನ್ನು ರದ್ದುಗೊಳಿಸಿ ಕಚೇರಿ ಇಲ್ಲಿಯೇ ಮುಂದುವರೆಸಬೇಕು,ಇಲ್ಲವಾದಲ್ಲಿ ಮುಂದೆ ನಡೆಯುವ ಪ್ರತಿಭಟನೆಗಳು ಯಾವ ಸ್ವರೂಪವನ್ನಾದರು ಪಡೆಯಲಿವೆ,ಅದಕ್ಕೆ ನೇರವಾಗಿ ಸರಕಾರವೇ ಹೊಣೆಯಾಗಲಿದೆ.ಆದ್ದರಿಂದ ಕೂಡಲೇ ಕಚೇರಿ ಸ್ಥಳಾಂತರ ಆದೇಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ಅಲ್ಲದೆ ಈಗಾಗಲೇ ಕಾಡಾ ಕಚೇರಿ ಸ್ಥಳಾಂತರದ ಕುರಿತು ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.ಇಂದಿನ ಹೋರಾಟದ ಮೂಲಕ ತಾಲೂಕಿನ ಎಲ್ಲಾ ಸಾಮೂಹಿಕ ಸಂಘಟನೆಗಳು ಆಗ್ರಹಿಸುತ್ತಿದ್ದೇವೆ,ಒಂದು ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ನಿರಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ನಂತರ ಮನವಿಯನ್ನು ಸ್ವೀಕರಿಸಲು ಕಚೇರಿಯ ಅಧಿಕಾರಿಗಳು ಆಗಮಿಸಿದಾಗ ಮನವಿ ಸಲ್ಲಿಸಲು ನಿರಾಕರಿಸಿದ ಪ್ರತಿಭಟನಾಕಾರರು ಮನವಿ ಸ್ವೀಕರಿಸಲು ಭಿಮರಾಯನಗುಡಿ ಕಚೇರಿಯ ಆಡಳಿತಾಧಿಕಾರಿಗಳೆ ಬರಬೇಕೆಂದು ಪಟ್ಟುಹಿಡಿದರು.ನಂತರ ಭೀಮರಾಯನಗುಡಿ ಕಾಡಾ ಕಚೇರಿ ಆಡಳಿತಾಧಿಕಾರಿಗಳು ಆಗಮಿಸಿ ಮನವಿ ಸ್ವೀಕರಿಸಿ,ನಿಮ್ಮ ಬೇಡಿಕೆಯಂತೆ ನಾನು ಕೂಡ ಈ ಕಚೇರಿಯನ್ನು ಸ್ಥಳಾಂತರಿಸದಂತೆ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಲ್ಲಯ್ಯ ಕಮತಗಿ,ಮಲ್ಲಿಕಾರ್ಜುನ ಕ್ರಾಂತಿ,ದೇವಿಂದ್ರಪ್ಪ ಪತ್ತಾರ,ಅಹ್ಮದ ಪಠಾಣ್,ವೆಂಕೋಬದೊರೆ ಬೊಮ್ಮನಹಳ್ಳಿ,ರಾಜಾ ವಿಜಯಕುಮಾರ ನಾಯಕ, ಧರ್ಮಣ್ಣ ದೊರೆ,ವೆಂಕಟೇಶ ಬೇಟೆಗಾರ,ರಮೇಶ ದೊರೆ ಅಲ್ದಾಳ, ಬುಚ್ಚಪ್ಪ ನಾಯಕ,ಮಾಳಪ್ಪ ಕಿರದಳ್ಳಿ,ಶಿವಲಿಂಗ ಹಸನಾಪುರ,ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ,ಉಸ್ತಾದ ವಜಾಹತ್ ಹುಸೇನ್,ಮಾನಪ್ಪ ಬಿಜಾಸಪುರ,ಯಲ್ಲಪ್ಪ ಚಿನ್ನಾಕಾರ,ಮಲ್ಲಯ್ಯ ವಗ್ಗಾ,ಅಸ್ಲಾಂ ಮಾಸ್ಟರ್,ಬಸಪ್ಪ ದೊಡ್ಮನಿ,ವೆಂಕಟೇಶ ಕುಪಗಲ್,ಮರಿಯಪ್ಪ ಕಾಂಗ್ರೇಸ್,ಹನುಮಗೌಡ ನಾರಾಯಣಪುರ,ಸಾಹೇಬಗೌಡ ಮದಲಿಂಗನಾಳ ಸೇರಿದಂತೆ ಅನೇಕ ಜನ ರೈತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here