ಕಲಬುರಗಿ: ಪ್ರಜ್ಞಾ ದಿ ಇನ್ಸ್ ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್, ಕನ್ನಡ ರತ್ನ ಡಿ ಕರಿಯರ್ ಅಕಾಡೆಮಿ ಇವರ ಸಹಯೋಗದಲ್ಲಿ, “ಕೌನ ಬನೇಗಾ ಜ್ಞಾನಪತಿ” ವಿಭಿನ್ನ ರಸಪ್ರಶ್ನೆ ಕಾರ್ಯಕ್ರಮವನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಯುವಕರಿಗಾಗಿ ೧೮ ಬೆಳೆಗ್ಗೆ ೧೦ಕ್ಕೆ ಕನ್ನಡ ರತ್ನ ಡಿ ಕರಿಯರ್ ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಕನ್ನಡ ರತ್ನ ಡಿ ಕರಿಯರ್ ಅಕಾಡೆಮಿಯ ನಿರ್ದೇಶಕರಾದ ಢಾಕಪ್ಪ ಎಮ್. ರಾಠೋಡ್ ಉದ್ಘಾಟಿಸಲಿದ್ದಾರೆ. ಉಪನ್ಯಾಸಕರಾದ ಪ್ರಭಾಕರ್ ಖೊಂಬಿನ್, ಲಿಂಗರಾಜ್ ಪಂಡಿತ್ ಬಿ.ಕೆ. ಗುಜ್ಜಮ್ಮ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು.
ಈ ಕಾರ್ಯಕ್ರಮದ ಪ್ರವೇಶ ಉಚಿತವಾಗಿದ್ದು, ಕರ್ನಾಟಕದ ಸ್ಪಾರ್ಧಾತ್ಮಕ ಲೋಕದಲ್ಲಿ ಇದೊಂದು ವಿಭಿನ್ನ ವಿಶಿಷ್ಠ ಪ್ರಯತ್ನವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಸ್ಪರ್ಧಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. ಸ್ಪರ್ಧಾರ್ಥಿಗಳು ಭಾಗವಹಿಸಿ, ಸದೂಪಯೋಗ ಪಡೆದುಕೊಳ್ಳಿ ಎಂದು “ಕೌನ ಬನೇಗಾ ಜ್ಞಾನಪತಿ” ರಸಪ್ರಶ್ನೆ ಕಾರ್ಯಕ್ರಮದ ನಿರೂಪಕರು ಹಾಗೂ ನಿರ್ದೇಶಕರು ಪ್ರಜ್ಞಾ ಸಂಸ್ಥೆ ಕೆ.ಎಂ.ವಿಶ್ವನಾಥ ಮರತೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.