ಸಭೆಗೆ ಸದಸ್ಯರು ಯಾಕೆ ಬರುತ್ತಿಲ್ಲ ಎಂದು ಗೊತ್ತಾಗುತ್ತಿಲ್ಲ |ಎರಡನೇ ದಿನವೂ ಬಜೆಟ್ ಮಂಡನೆ ಮುಂದೂಡಿಕೆ

0
20

ಸುರಪುರ: ಇಲ್ಲಿಯ ನಗರಸಭೆಗೆ ಆಯ-ವ್ಯಯ(ಬಜೆಟ್) ಮಂಡನೆಗಾಗಿ ಕರೆದಿರುವ ಸಾಮಾನ್ಯ ಸಭೆಗೆ ಎರಡನೇ ದಿನವೂ ಯಾವುದೇ ಸದಸ್ಯರು ಸಭೆಗೆ ಬಾರದೆ ದೂರ ಉಳಿಯುವ ಮೂಲಕ ಸಭೆಗೆ ಗೈರಾಗಿದ್ದಾರೆ.

ಬುಧವಾರ ಮುಂಜಾನೆ 11 ಗಂಟೆಗೆ ನಿಗದಿಯಾಗಿದ್ದ ಸಭೆಗೆ ಆಡಳಿತರೂಢ ಸೇರಿ ವಿರೋಧ ಪಕ್ಷದ ಯಾವುದೇ ಸದಸ್ಯರು ಬಾರದೆ ವಿವಿಧ ಕಾರಣಗಳನ್ನು ನೀಡಿ ಗೈರಾಗಿದ್ದರು,ಇದರಿಂದ ಬಜೆಟ್ ಸಭೆಯನ್ನು ಗುರುವಾರಕ್ಕೆ ಮುಂದೂಡಲಾಗಿತ್ತು.ಆದರೆ ಗುರುವಾರ 11 ಗಂಟೆಗೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ನಾಯಕ ಜೇವರ್ಗಿಯವರು ಆಗಮಿಸಿದರು,ಆದರೆ ಅಧ್ಯಕ್ಷರನ್ನು ಹೊರತು ಪಡಿಸಿ ಇನ್ನುಳಿದ ಆಡಳಿತ ಮತ್ತು ವಿರೋಧ ಪಕ್ಷದ 30 ಜನ ಸದಸ್ಯರಲ್ಲಿ ಯಾರೊಬ್ಬರು ನಗರಸಭೆಯತ್ತ ಸುಳಿಯಲಿಲ್ಲ.

Contact Your\'s Advertisement; 9902492681

ಇದರ ಕುರಿತು ವರದಿಗಾರರು ಕೇಳಿದ ಸ್ಪಷ್ಟನೆಗೆ ವಿವಿರಣೆ ನೀಡಿದ ಅಧ್ಯಕ್ಷರು,ನಿನ್ನೆಯ ದಿನ ಮದುವೆ,ಸಾವು ಸೇರಿದಂತೆ ಅನೇಕ ಕಾರಣಗಳಿಂದ ಸದಸ್ಯರು ಬಂದಿರಲಿಲ್ಲ,ಆದರೆ ಇಂದು ಯಾವೊಬ್ಬ ಸದಸ್ಯರು ಬಂದಿಲ್ಲ,ಯಾಕೆ ಎಂದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇದರ ಕುರಿತು ನಗರಸಭೆಗೆ ಪೌರಾಯುಕ್ತರು ಮಾಹಿತಿಯನ್ನು ಪಡೆಯುತ್ತಿದ್ದಾರೆ ಎಂದರು.

ಇದರ ಮದ್ಯೆ ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು,ನಂತರ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದ್ದು,ಇಂತಹ ಸಂದರ್ಭದಲ್ಲಿ ನಗರಸಭೆಯ ಸದಸ್ಯರು ಬಜೆಟ್ ಸಭೆಯಿಂದ ದೂರ ಉಳಿಯುವ ಮೂಲಕ ನಗರದ ಅಭಿವೃಧ್ಧಿಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ.

ಸಭೆಯಲ್ಲಿ ಭಾಗವಹಿಸಿ ತಮ್ಮ ಏನೆ ಅಭಿಪ್ರಾಯವಿದ್ದಲ್ಲಿ ತಿಳಿಸಬೇಕು,ಆದರೆ ಸಭೆಯಿಂದ ದೂರ ಉಳಿದಲ್ಲಿ ಚುನಾವಣೆ ನೀತಿ ಸಂಹಿತೆ ಏನಾದರು ಜಾರಿಗೊಂಡು ಬಜೆಟ್ ಮಂಡನೆಯಾಗದಿದ್ದಲ್ಲಿ ನಗರದ ಅಭಿವೃಧ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ,ಅದರ ಕಳಂಕ ನಗರಸಭೆ ಸದಸ್ಯರಿಗೆ ತಗುಲಲಿದೆ ಎಂದು ನಗರದ ಅನೇಕ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here