ಶಹಾಬಾದ: ರಾಜ್ಯ ಕುಂಬಾರ ಸಮಾಜದ ಅಭಿವೃಧ್ಧಿಗಾಗಿ ರಾಜ್ಯ ಕುಂಬಾರ ಸಮುದಾಯ ಅಭಿವೃಧ್ಧಿ ನಿಗಮ ಸ್ಥಾಪನೆ ಮಾಡಿ ರಾಜ್ಯ ಸರಕಾರ ಶನಿವಾರ ಅಧೀಕೃತ ಆದೇಶ ಹೊರಡಿಸಿದಕ್ಕೆ ರಾಜ್ಯ ಮುಖ್ಯಮಂತ್ರಿಗಳಾಜ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಸರ್ಕಾರಕ್ಕೆ ನಮ್ಮ ಕುಂಬಾರ ಸಮಾಜದ ಬಾಂಧವರು ಯಾವತ್ತೂ ನಿಮಗೆ ಚಿರ ಋಣಿಯಾಗಿರುತ್ತೇವೆ ಎಂದು ಕುಂಬಾರ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಕುಂಬಾರ ತಿಳಿಸಿದ್ದಾರೆ.
ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ,ಕುಂಬಾರ ಸಮಾಜವು ಸಮಾಜಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ.ರಾಜ್ಯದಲ್ಲಿ 25 ಲಕ್ಷ ಜನಸಂಖ್ಯೆ ಇರುವ ಸಮುದಾಯವರು ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಬಾರಿ ಪ್ರತಿಭಟನೆ ಮಾಡಲಾಗಿತ್ತು.
ಇತ್ತಿಚ್ಚಿಗಷ್ಟೇ ತೆಲಸಂಗ ಕುಂಬಾರ ಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ,ಚಿತ್ರದುರ್ಗದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಕುಂಬಾರ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ ಮಾಡಲಾಗಿತ್ತು.
ನಮ್ಮ ಧ್ವನಿಗೆ ಸ್ಪಂಧಿಸಿ ಕುಂಬಾರ ಸಮುದಾಯ ಅಭಿವೃಧ್ಧಿ ನಿಗಮವನ್ನು ಸ್ಥಾಪಿಸಿ ಸರಕಾರ ಆದೇಶ ಹೊರಡಿಸಿದ್ದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಮತ್ತು ಶಾಸಕ ಬಸವರಾಜ ಮತ್ತಿಮಡು ಹಾಗೂ ಸತತ ಪ್ರಯತ್ನ ಮಾಡಿದ ಕುಂಬಾರ ಸಮಾಜದ ಸ್ವಾಮೀಜಿಗಳಿಗೆ ಸಮಸ್ತ ಕುಂಬಾರ ಸಮಾಜದ ಪ್ರಮುಖರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.