ಕೋಲಿ ಕಬ್ಬಲಿಗ ಪ್ರತಿಭಟನೆಗೆ ಬೆಂಬಲ

0
21

ಕಲಬುರಗಿ: ಕೋಲಿ ಕಬ್ಬಲಿಗ ಸಮುದಾಯದವರು ನಮ್ಮನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಇದೇ 20 ರಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಹೋರಾಟಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎಂದು ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಮಹಾಂತೇಶ ಎಸ್.ಕೌಲಗಿ ತಿಳಿಸಿದರು.

2018ರ ವಿಧಾನ ಸಭೆ ಚುನಾವಣೆಯಲ್ಲಿ ಹಾಗೂ ಚಿಂಚೋಳಿ, ಬಸವಕಲ್ಯಾಣ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಕೋಲಿ, ಕಬ್ಬಲಿಗ ಸಮಾಜದ ಜನರು ಮತ ನೀಡಿ ಗೆಲುವಿಗೆ ಕಾರಣರಾಗಿದ್ದಾರೆ. ಆಗೆಲ್ಲ ಸಿಎಂ ಬೊಮ್ಮಾಯಿ ಅವರು ಎಸ್.ಟಿಗೆ ಸೇರಿಸಲಾಗುವುದು ಎಂದು ಭರವಸೆ ನೀಡಿ ಈಗ ಮಾತಿಗೆ ತಪ್ಪಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಅದರ ಕುರಿತಂತೆ ಕೋಲಿ ಸಮಾಜದ ಮುಖಂಡರು ಬೃಹತ್ ಅರೆಬೆತ್ತೆಲೆ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಸಹ ಯಾವುದೇ ರೀತಿಯಾದ ಪ್ರಯೋಜನವಾಗಿಲ್ಲ. ಇವರಿಗೆ ಚುನಾವಣೆ ಸಂದರ್ಭದಲ್ಲಿ ಮತಗಳಿಗೋಸ್ಕರ ಜನರನ್ನು ಬಳಸಿಕೊಳ್ಳುತ್ತಾರೆ. ವಿಧಾನ ಸೌಧದ ಕಟ್ಟೆ ಏರಿದರೆ ಸಾಕು ಮತ ನೀಡಿದ ಜನರ ಮುಖ ಸಹ ತಿರುಗಿ
ನೋಡುವುದಿಲ್ಲ ಎಂದು ಟೀಕಿಸಿದರು.

ಅಲ್ಲದೇ ಕಳೆದ ಜನೆವರಿಯಲ್ಲಿ ಗಾಣಗಾಪೂರದಲ್ಲಿ ದಿ.ವಿಠ್ಠಲ್ ಹೇರೂರ ಅವರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೊಮ್ಮಾಯಿ ಅವರು ಒಂದು ನಿಯೋಗದ ಜೊತೆಗೆ ದೆಹಲಿಗೆ ತೆರಳಿ ಕೋಲಿ, ಕಬ್ಬಲಿಗ ಸಮುದಾಯವನ್ನು ಎಸ್.ಟಿಗೆ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.

ಆದರೆ ಹೇಳಿಕೆ ನೀಡಿ ಎರಡು ತಿಂಗಳಾದರೂ ಬೊಮ್ಮಾಯಿ ಅವರಿಗೆ ತಾವು ಹೇಳಿದ ಮಾತು ನೆನಪಿನಲ್ಲಿಲ್ಲ. ಅಲ್ಲದೇ ಕುರುಬ ಸಮಾಜದ ಪರ್ಯಾಯ ಪದಗಳನ್ನು ಎಸ್.ಟಿಗೆ ಸೇರಿಸಬೇಕು ಎಂದು ಹೋರಾಟ ನಡೆಸಿತ್ತಾದರೂ ಸಹ ಸರ್ಕಾರ ಸ್ಪಂದಿಸಿಲ್ಲ ಎಂದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪೂಜಾರಿ, ಬೀಮಶಾ ಖನ್ನಾ, ಹಣಮಯ್ಯ ಅಲೂರ, ಗೌತಮ ಉಪಾಧ್ಯ, ರೇವಣಸಿದ್ಧಪ್ಪ ಮುಗಟಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here