ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಂತರ್ಜಲಮಟ್ಟ ಹಾಗೂ ರೈತರ ಸಾವಿರಾರು ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾವಿರಾರು ಕೋಟಿ ರೂ. ಕೇಂದ್ರ ಮತ್ತು ರಾಜ್ಯದಿಂದ ಮಂಜೂರು ಮಾಡಿಸಿದ ಅದ್ಭುತ ನೀರಾವರಿ ತಜ್ಞೆ ಸಿ ಮ್ರುತ್ಶುಂಜಯ ಸ್ವಾಮಿಯವರಾಗಿದ್ದಾರೆ ಎಂದು ಎಇಇ ನರೇಂದ್ರ ಕುಮಾರ ಅಭಿಪ್ರಾಯಪಟ್ಟರು.
ನಗರದ ಸಣ್ಣ ನೀರಾವರಿ ಇಲಾಖೆ ಕಟ್ಟಡದ ಭೀಮಾ – ಕಾಗಿಣಾ ವೇದಿಕೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕರ್ನಾಟಕ ಸರಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ವಿಭಾಗದ ಕಾರ್ಯದರ್ಶಿಗಳಾದ ಸಿ. ಮ್ರುತ್ಯುಂಜಯ ಸ್ವಾಮಿ ಅವರ ವಯೋನಿವ್ರತ್ತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಾಗೆ ಹರಿದುಹೋಗುತ್ತಿರುವ ನೀರನ್ನು ತಡೆಯಬೇಕು ಎನ್ನುವ ನಿಟ್ಟಿನಲ್ಲಿ ಮ್ರುತ್ಯುಂಜಯ ಸ್ವಾಮಿಯವರು ಇಡೀ ರಾಜ್ಯದಲ್ಲಿ ಮಾದರಿಯಾಗಿದ್ದಾರೆ. ನೀರು ಸಂಗ್ರಹಣೆಗಾಗಿ ನೂತನ ಕೆರೆ ನಿರ್ಮಾಣˌ ಚಕ್ ಡ್ಯಾಂˌ ಬ್ರಿಡ್ಜ್ ಕಂ ಬ್ಯಾರೆಜ್ˌ ಬ್ರಿಡ್ಜ್ ಗಳು ಸೇರಿದಂತೆ ಹಲವು ಮಹತ್ವದ ಕಾಮಗಾರಿಗಳಿಗೆ ಸಾವಿರಾರು ರೂ. ನೀಡಿದ್ದಾರೆ.
ಕಲಬುರಗಿ-ಯಾದಗಿರಿ ಜಿಲ್ಲೆಗಳಿಗೆ ಕೇಂದ್ರದಿಂದ 443 ಕೋಟಿ ರೂ. ಅನುದಾನ ತಂದು ಕಾಮಗಾರಿಗಳು ನಡೆಸಲಾಗುತ್ತದೆ. ಇನ್ನು 300 ಕೋಟಿ ರೂ. ಅನುಮೋದನೆಯ ಹಂತದಲ್ಲಿವೆ. ನಿಷ್ಟೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದ ಕಾರಣದಿಂದ ಈ ಭಾಗಕ್ಕೆ ಇಷ್ಟೊಂದು ಅನುದಾನ ಬಂದಿದೆ.
ಹಿಂದುಳಿದ ಪ್ರದೇಶದ ನೀರಾವರಿಗೆ ಇಷ್ಟೊಂದು ಅನುದಾನವನ್ನು ನೀಡಿದ ಸರ್ಕಾರದ ಕಾರ್ಯದರ್ಶಿ ಮ್ರುತ್ಯುಂಜಯಸ್ವಾಮಿಯವರ ನಿವ್ರತ್ತಿ ಜೀವನ ಸುಖ ಶಾಂತಿಯಿಂದ ಕೂಡಿರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಜಾಕೀರ ಹುಸೇನ ಮಮದಾಪುರˌ ಮುಖ್ಯ ಎಂಜಿನಿಯರ್ ಪ್ರಕಾಶ ಶ್ರೀಹರಿˌ ಅಧಿಕ್ಷಕ ಅಭಿಯಂತರ ಸುರೇಶ ಶರ್ಮಾˌ ಕಾರ್ಯನಿರ್ವಾಹಕ ಅಭಿಯಂತರರಾದ ನರೇಂದ್ರ ಕುಮಾರˌ ಪಂಚಾಯತ್ ರಾಜ್ ಇಲಾಖೆಯ ಎಇಇ ಕೆ.ಮೋನಪ್ಪ ಎಂಜಿನಿಯರರಾದ ಮಹಾಂತಪ್ಪˌ ಮಧುಸೂದನˌ ಅವಿನಾಶˌ ಮೇರಾಜ್ˌ ಶ್ರೀಪಾದˌ ಸಂತೋಷ ಇಂಗಳಗಿ ಸೇರಿದಂತೆ ಇತರರು ಇದ್ಡರು.