ಕಲಬುರಗಿ; ಸಪ್ತ ನೇಕಾರರ ಸೇವಾ ಸಂಘ ಮತ್ತು ಬಿಜೆಪಿಯ ನೇಕಾರರ ಪ್ರಕೋಷ್ಠ ದ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರ ಕಲಬುರಗಿಯಲ್ಲಿ ಮೆಗಾ ಜವಳಿ ಪಾರ್ಕ್ ಯೋಜನೆ ಘೋಷಿಸಿದ್ದು, ರಾಜ್ಯ ಸರ್ಕಾರ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಸೋಮವಾರ ಆದೇಶ ಮಾಡಿದರುವ ಹಿನ್ನೆಲೆಯಲ್ಲಿ ನೇಕಾರ ಸೇವಾ ಸಂಘದಿಂದ ಮಂಗಳವಾರ ಸರ್ದಾರ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಹಿ ಹಂಚುವ ಮೂಲಕ ಅಭಿನಂದನೆ ವ್ಯಕ್ತಪಡಿಸಿದರು.
ಹೊಸ ವರ್ಷದಲ್ಲಿ ನೇಕಾರರ ಅಭಿವೃದ್ಧಿ ಹೊಂದಲು ಮುನ್ನಡಿ ಬರೆದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸಿದರು ಸಂಘದ ಅಧ್ಯಕ್ಷರಾದ ಶಿವಲಿಂಗಪ್ಪಾ ಅಷ್ಟಗಿ ಸ್ವಾಗತಿಸಿದರು.
2023ರ ದೇವರ ದಾಸಿಮಯ್ಯಜಯಂತೋತ್ಸವ ಸಮಿತಿಯ ನೇಕಾರ ಅಧ್ಯಕ್ಷ ರೇವಣ್ಣ ಸಿದ್ದಪ್ಪಾ ಗಡ್ಡದ ಮಾತನಾಡಿ, ಎರಡು ಸರಕಾರಗಳಿಗೆ ನೇಕಾರರ ಪರವಾಗಿ ಪುನರುತ್ಥಾನಕ್ಕೆ ಚಾಲನೆ ನೀಡಿದ್ದಕ್ಕೆ ಅಭಿನಂದನೆ ವ್ಯಕ್ತಪಡಿಸಿದರು. ಈ ಓ ಅಧ್ಯಕ್ಷ ರಂಗನ್ನಾಥ ಬಾಬು ಚನ್ನ, ಸ್ವಕುಳ ಸಾಲಿ ಭಂಡಾರಿ ರಾಜಗೋಪಾಲ, ಮಹಿಳಾ ಸದಸ್ಯರಾದ ಸುಜಾತಾ ಅಕ್ಕಾ, ಶೋಭರಾಣಿ ಕೊರವಾರ, ಗೀತಾಂಜಲಿ ಶಿವಶರಣಪ್ಪಾ ಮೈನಾಳೆ, ಮಲ್ಲಿನಾಥ್ ಬಡ್ಡುರ್, ಕುಂಟೋಜಿ, ತೊಗಟ ವೀರ ಸಮಾಜದ ಅಧ್ಯಕ್ಷ ಶ್ರೀನಿವಾಸ ಬಲಪುರ್, ಸಂತೋಷ್ ಬಾಬುರಾವ್ ಲಕಮಣ, ಬಸವರಾಜ ಶಿವರಾಯ ಚನ್ನಾ, ಮಲ್ಲಿನಾಥ ನಾಗಪ್ಪಾ ಬಡ್ಡೂರ, ಬಸವರಾಜ ವಡಗಾ ಇತರರು ಉಪಸ್ಥಿತರಿದ್ದರು.