ಕಲಬುರಗಿ: ಮಹಾನಗರ ಪಾಲಿಕೆ ಮಹಾಪೌರರ ಮತ್ತು ಉಪ ಮಹಾಪೌರರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನಿಷ್ಠೆ, ಪ್ರಾಮಾಣಿಕ ಕಾರ್ಯಕರ್ತ ಪಾಲಿಕೆ ಮಹಾಪೌರರಾಗಿ ವಿಶಾಲ ಧರ್ಗಿಗೆ ಮತ್ತು ಉಪ ಮಹಾಪೌರರಾಗಿ ಶಿವನಂದ ಪಿಸ್ತಿ ಆಯ್ಕೆ ಮಾಡುವ ಮೂಲಕವಾಗಿ ದಲಿತರ ಮತ್ತು ಸರ್ವ ಜನಾಂಗದ ನ್ಯಾಯ ನೀಡುವ ಬಿಜೆಪಿಯಿಂದ ಸಾಮಾಜಿಕ ನ್ಯಾಯ ನೀಡಲಾಗಿದೆ ಎಂದು ಭಾರತೀಯ ಜನತಾ ಪಕ್ಷ ಕಲಬುರಗಿ ದಕ್ಷಿಣ ಮಂಡಳದ ವಕ್ತಾರರಾದ ಮಂಜುನಾಥ ನಾಲವಾರಕರ್ ತಿಳಿಸಿದ್ದಾರೆ.
ದಿ. ಚಂದ್ರಶೇಖರ ಪಾಟೀಲ ರೇವೂರ ದಲಿತ ಮಹಿಳೆಗೆ ಮಹಾಪೌರರಾಗಿ ಆಯ್ಕೆ ಮಾಡಿದ ಮೇಲೆ ಸುಮಾರು 12 ವರ್ಷಗಳ ನಂತರ ಅವರ ಪುತ್ರ ಶಾಸಕರಾದ ದತ್ತಾತ್ರೇಯ ಸಿ,ಪಾಟೀಲ ರೇವೂರ ಅವರ ನೇತೃತ್ವದಲ್ಲಿ ಮತ್ತೊಂದು ಬಾರಿ ದಲಿತರ ಬಿಜೆಪಿ ಇದೆ ಎಂದು ತೋರಿಸುವ ಮೂಲಕ ವಿಶಾಲ ಧರ್ಗಿಗೆ ಮಹಾಪೌರರಾಗಿ ಆಯ್ಕೆ ಮಾಡಿ ಅಭಿವೃದ್ಧಿಗಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.