ಕಲಬುರಗಿ: ನಾಡಿನ ಜೈನ ಧರ್ಮಿಯರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶ್ರವಣಬೆಳಗೊಳದ ಜೈನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಭಟ್ಟಾರಕ ಶಿರೋಮಣಿ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರು ಇಂದು ನಮ್ಮನ್ನೆಲ್ಲ ಬಿಟ್ಟು ಅಗಲಿರುವುದು ಜೈನ ಸಮಾಜವೂ ಸೇರಿದಂತೆ ನಾಡಿನ ಜನತೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲಾ ಜೈನ ಸಮಾಜ ವತಿಯಿಂದ ಕಲಬುರಗಿ ಮಹಾನಗರದ ಮಹಾವೀರ ವೃತ್ತದಲ್ಲಿ ಆಯೋಜಿಸಿದ ನುಡಿ ನಮನ ಸಮಾರಂಭದಲ್ಲಿ ಮಾತನಾಡಿದ ಗಣ್ಯರು ಪರಮಪೂಜ್ಯ ಸ್ವಾಮೀಜಿಯವರ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳನ್ನು ಸ್ಮರಣೆ ಮಾಡಿಕೊಂಡರು.
ಸ್ವಾಮಿತ್ವದ ಬದುಕು ಸಮಾಜಕ್ಕಾಗಿ ಮೀಸಲಿಟ್ಟಿದ್ದ ಸದಾ ಸಮಾಜದ ಕುರಿತು ಆಲೋಚಿಸುತ್ತಿದ್ದ ಪರಮಪೂಜ್ಯರು ಕಾವಿ ಕುಲದ ಶ್ರೇಷ್ಠ ಯತಿರಣ್ಯರೆಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ರಾಜ್ಯ ನಿರ್ದೇಶಕರಾದ ಸುರೇಶ ತಂಗಾ ನುಡಿದರು.
ಶ್ರವಣಬೆಳಗೊಳವನ್ನು ರಾಷ್ಟ್ರ ಮಟ್ಟಕ್ಕೆ, ಅಂತರಾಷ್ಟ್ರ ಮಟ್ಟಕ್ಕೆ ಜೈನ ಧರ್ಮದ ತತ್ವ ಸಿದ್ಧಾಂತಗಳನ್ನು ಮನುಕುಲದ ಮನೆ ಮನಗಳಿಗೆ ತಲುಪಿಸಿದ ಕೀರ್ತಿ ಪೂಜ್ಯ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳಿಗೆ ಸಲ್ಲುತ್ತದೆ ಎಂದು ಸ್ಮರಣೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡರಾದ ನಾಗನಾಥ ಚಿಂದೆ, ಸುಭಾಷ ಪಾಟೀಲ, ಧನ್ಯಕುಮಾರ ಕುಣಚಗಿ, ರಮೇಶ ಗಡಗಡೆ, ಪ್ರಕಾಶ ಜೈನ, ದೀಪಕ ಪಂಡಿತ, ವಿಜಯಕುಮಾರ ಪಾಂಡ್ರೆ, ಶ್ರೇಣಿಕ ಡೊಳ್ಳೆ, ಪಾಶ್ರ್ವನಾಥ ಚಿಂದೆ, ವಜ್ರಕುಮಾರ ಪಾಟೀಲ, ಭರಮ ಜಗಶೆಟ್ಟಿ, ವಿನೋದಕುಮಾರ ಪಾಟೀಲ, ಬಿ.ಕೆ.ಪಾಟೀಲ, ಜೀತು ಚಿಂದೆ, ಮಹಾವೀರ ಬಪ್ಪಣಕರ, ವಿನೋದಕುಮಾರ ಬಬಲಾದಕರ, ವೈಭವ ವನಕುದರೆ, ಬಂಡುಕುಮಾರ ವನಕುದರೆ, ರಾಜೇಂದ್ರ ಕುಣಚಗಿ, ನಾಗಲಿಂಗಯ್ಯ ಮಠಪತಿ, ಶ್ರೇಣಿಕ ಪಾಟೀಲ, ಕಿರಣ ಪಂಡಿತ, ರಾಹುಲ ಕುಂಬಾರೆ, ಮಹಿಳಾ ಮುಖಂಡರಾದ ಶೀತಲ ಕುಲಕರ್ಣಿ, ಶಿಲ್ಪಾ ಕುಲಕರ್ಣಿ, ಭಾರತಿ ಚಿಂದೆ, ಓರಾ, ಪದ್ಮಶ್ರೀ ಚಿಂದೆ, ದೀಪಾ ಪಾಟೀಲ, ಭಾರತೀ ವಿಭೂತೆ, ಸೇರಿದಂತೆ ಸಮಾಜ ಬಾಂಧವರು, ಸದ್ಭಾಕ್ತಾದಿಗಳು ಉಪಸ್ಥಿತರಿದ್ದರು.