ಸ್ತ್ರೀ ಸಬಲೀಕರಣಕ್ಕೆ ಬಸವಾದಿ ಶರಣರು ಒತ್ತು

0
73

ಕಲಬುರಗಿ : 12 ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ವಚನ ಸಾಹಿತ್ಯದಲ್ಲಿ ಮಹಿಳೆಯರ ಬೆಳವಣಿಗೆಗೆ ಹೆಚ್ಚು ಒತ್ತು ಕೊಟ್ಟಿದ್ದರು ಎಂದು ಗುಲಬಗಾ ೯ ವಿಶ್ವವಿದ್ಯಾಲಯದ ಗಳಂಗಪ್ಪಾ ಪಾಟೀಲ ಬಸವಾದಿ ಶರಣರ ಸಾಹಿತ್ಯ ಕೇಂದ್ರದ ನಿರ್ದೇಶಕರ ಮತ್ತು ಪ್ರಾಧ್ಯಾಪಕ ಡಾ.ಎಸ್.ಎಂ.ಹನಗೋಡಿಮಠ ಅಭಿಪ್ರಾಯ ಪಟ್ಟರು.

ನಗರ ಗೋದುತಾಯಿ ದೊಡ್ಡಪ್ಪ ಮಹಿಳಾ ಮಹಾವಿದ್ಯಾಲಯದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಮತ್ತು ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ವಚನ ಸಾಹಿತ್ಯದಲ್ಲಿ ಸ್ತ್ರೀ ಸಬಲೀಕರಣ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಮಹಿಳೆಯರು ಪುರುಷರ ಸರಿ ಸಮಾನವಾಗಿ ನಿಂತಿದ್ದಾಳೆ. ಈ ಭಾಗದ ಮಹಿಳೆಯರು ಉನ್ನತ ಸ್ಥಾನಗಳಿಗೆ ಹೋಗಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಜಗತ್ತು ಕಂಡ ಅಪೂರ್ವ ಸಾಧಕಿ, ಶರಣ ಚಳುವಳಿಯ ಸ್ತ್ರೀ ಸ್ವಾಭಿಮಾನದ ಪ್ರತೀಕಳಾಗಿ ಅಧಿಕಾರ ಮತ್ತು ಅರಸೋತ್ತಿಗೆಯನ್ನು ದಾಟಿ ಬಂದ ಅಕ್ಕಮಹಾದೇವಿಗೆ ಅಂದಿ‌ನ ಶರಣರು ಸರಿಸಮಾನವಾದ ಸ್ಥಾನಮಾನ ನೀಡಿದ್ದರು.ಅನೇಕ ವಚನಕಾರ್ತಿಯರು ವಚನಗಳ ಮೂಲಕ ಪ್ರಸಿದ್ದಿಪಡೆದರು.ಮಹಿಳಾ ಸ್ವಾತಂತ್ಯ್ರ ಮತ್ತು ಅಸ್ಪೃಶ್ಯ ನಿರ್ಮೂಲನೆ ಮತ್ತು ಸಮತಾವಾದದ ಸಮಾಜ ನಿರ್ಮಾಣದ ಗುರಿಯಾಗಿತ್ತು.ಶರಣರು ಮಹಿಳೆಗೆ ದುಡಿದು ತಿನ್ನುವ ಹಕ್ಕನ್ನು ಕಲ್ಪಿಸಿ ಸಮಾಜದಲ್ಲಿ ಸಮಾನತೆಯನ್ನು ನೀಡಿದರು. ಸಾವಿರಾರು ವರ್ಷಗಳಿಂದ ಹಾಕಲ್ಪಟ್ಟ ಬಂಧನಗಳ ಸಂಕೋಲೆಯನ್ನು ಶರಣರು ಕಿತ್ತೆಸೆದರು. ಹೆಣ್ಣು-ಗಂಡು ಎಂಬ ಭೇದವನ್ನು ಮುಕ್ತವಾದ ಸಮಾಜ ನಿರ್ಮಾಣವಾಯಿತು ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಹಾವಿದ್ಯಾಲಯ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸೂರ್ ಮಾತನಾಡಿ, ಅನೇಕ ವಚನಗಳು ಮಹಿಳಾ ಸಬಲೀಕರಣಕ್ಕೆ ದಾರಿ ಮಾಡಿಕೊಟ್ಟಿವೆ. ವಚನ ಚಳವಳಿಯ ಮೂಲ ಉದ್ದೇಶವೇ ಸ್ತ್ರೀ ಸಮಾನತೆ, ಸ್ತ್ರೀ ಕೂಡ ಪುರುಷರಂತೆ ಸಶಕ್ತಳು. ಸ್ತ್ರೀಯರಿಗೆ ಅನುಭವ ಮಂಟಪದ ವೇದಿಕೆಯನ್ನು ಬಸವಾದಿ ಶರಣರು ನೀಡಿದ್ದರು ಎಂದರು.

ಶರಣಬಸವೇಶ್ವರ ದೇವಸ್ಥಾನದ ಆವರಣದ ಶಾಲಾ, ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ ಪ್ರಾಸ್ತಾವಿಕ ಮಾತನಾಡಿ, ಜಗತ್ತಿನಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಹಿಳೆಗೆ, ಸಾಮಾಜಿಕ ಆರ್ಥಿಕ, ಧಾರ್ಮಿಕ ವೈಚಾರಿಕ ಸ್ವಾತಂತ್ಯ್ರವನ್ನು ನೀಡಿ ಗೌರವಿಸಿದ ಕೀರ್ತಿ ಬಸವಣ್ಣನವರಿಗೆ ಹಾಗೂ ಇತರ ಶರಣರಿಗೆ ಸಲ್ಲುತ್ತದೆ. ಸ್ತ್ರೀ ಶಕ್ತಿಯು ಸಮಾಜದಲ್ಲಿ ಸಮಾನವೆಂದು ಮೊದಲು ತಿಳಿದುಕೊಂಡಿದ್ದು ಶರಣ ಸಂಸ್ಕೃತಿ. ಎಂದು ಹೇಳಿದರು.

ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ಕಲ್ಪನಾ ಭೀಮಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕರಾದ ಶ್ರೀಮತಿ ಸುಧಾರಾಣಿ ಬಿ.ಬಿ. ವಂದಿಸಿದರು, ಶ್ರೀಮತಿ ಲಕ್ಷ್ಮೀ ಕಲಬುರಗಿ ನಿರೂಪಿಸದರೆ, ಶ್ರೀಮತಿ ಸೌಮ್ಯಲತಾ ಪ್ರಾರ್ಥಿಸಿದರು, ಮಹಾವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here