- ಹುತಾತ್ಮ ಸ್ಥಳದಿಂದ ಮೊಳಗಿದ ದೇಶಭಕ್ತಿ: ದೇಶದ ಐಕ್ಯತೆ ಬಲಿಷ್ಠತೆಗೆ ಕರೆ
ಪಂಜಾಬ: ದೇಶದ ಜನರಲ್ಲಿ ದೇಶಭಕ್ತಿ ಮೂಡಿಸುವ, ಅದರಲ್ಲೂ ಒಗ್ಗಟ್ಟು ಬಲಪಡಿಸುವ ಏಕೈಕ ಉದ್ದೇಶ ಹೊಂದಿ ಪರಮ ಪೂಜ್ಯ ಹವಾ ಮಲ್ಲಿನಾಥ್ ಮಹಾರಾಜ್ ನಿರಗುಡಿ ಅವರು ಸ್ಥಾಪಿತ ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿ ವತಿಯಿಂದ ಪಂಜಾಬ್ ರಾಜ್ಯದ ಖಟ್ಕರ್ ಕಲಾ ಮೈದಾನ ಮತ್ತು ಶಹೀದ್ ಇ ಅಝಾಮ ಭಗತ್‍ಸಿಂಗ್ ಮ್ಯೂಜಿಯಂ ಹತ್ತಿರ ಇರುವ ರಾಜ್ ಫ್ಯಾಲೆಸ್ ದಲ್ಲಿ ನಡೆದ ಸ್ವಾತಂತ್ರ್ಯ ಯೋಧರ ಅಮರ ಬಲಿದಾನ ದಿವಸದಲ್ಲಿ ದೇಶಭಕ್ತಿ ಮೊಳಗಿತು.
ದಕ್ಷಿಣ ಭಾರತದ ಕರ್ನಾಟಕದಿಂದ ಸುಮಾರು 5 ಸಾವಿರ ಕೀ.ಮೀ ಸಹಸ್ರಾರು ದೇಶಭಕ್ತರೊಂದಿಗೆ ಯಾತ್ರೆ ಮೂಲಕ ಪಂಜಾಬ್‍ಗೆ ಆಗಮಿಸಿ ಅಮರ ಬಲಿದಾನ ದಿವಸ ಆಚರಣೆ ಮೂಲಕ ದೇಶಭಕ್ತಿ ಹೆಚ್ಚಿಸುವ ಕಾರ್ಯಕ್ರಮ ರಾಷ್ಟ್ರಕ್ಕೆ ಮಾದರಿ ಹಾಗೂ ಹೆಮ್ಮೆಯಾಗಿದೆ ಎಂದು ಅಭಿಮಾನಪಡಲಾಯಿತು.
ಕಾರ್ಯಕ್ರಮಕ್ಕಿಂತ ಮುಂಚೆ ದೇಶದ ಅಪ್ರತಿಮ ಸ್ವಾತಂತ್ರ ಹೋರಾಟಗಾರರಾದ ಶಹೀದ್ ಭಗತ್ ಸಿಂಗ್ ಪ್ರತಿಮೆಗೆ ಪೂಜ್ಯ ಹವಾ ಮಲ್ಲಿನಾಥ್ ಮಹಾರಾಜ್ ನಿರಗುಡಿ ಅವರು ಪುಷ್ಪ ನಮನ ಸಲ್ಲಿಸಿದರು.
ತದನಂತರ ಭಗತ ಸಿಂಗ, ಸುಖದೇವ್, ರಾಜಗುರು ರವರ ಹೆಸರಿನಲ್ಲಿ ಪ್ರಾರಂಭ ಮಾಡಲಾದ ನೂತನ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿರುವ ಸ್ವಾತಂತ್ರ ಸೇನಾನಿಗಳ ಪ್ರತಿಮೆಗಳಿಗೆ ಹೂ ಮಾಲೆ ಹಾಕಿ ಗೌರವ ಸಲ್ಲಿಸಿದರು. ತದನಂತರ ಭಗತ್‍ಸಿಂಗ್ ಮ್ಯೂಜಿಯಂ ಹತ್ತಿರ ಇರುವ ರಾಜ್ ಫ್ಯಾಲೆಸ್ ದಲ್ಲಿ ನಡೆದ ಸ್ವಾತಂತ್ರ್ಯ ಯೋಧರ ಅಮರ ಬಲಿದಾನ ದಿವಸದಲ್ಲಿ ಪೂಜ್ಯ ಹವಾ ಮಲ್ಲಿನಾಥ್ ಮಹಾರಾಜರು
ಸ್ವಾತಂತ್ರ್ಯ ಹೋರಾಟಗಾರರಾದ ಶಹೀದ್ ಭಗತ್ ಸಿಂಗ್, ಸುಖದೇವ, ರಾಜಗುರು, ಸುಭಾಷಚಂದ್ರ ಭೋಸ್, ಚಂದ್ರಶೇಖರ ಆಜಾದ, ಅಷ್ಪಾಖುಲ್ಲಾ ಖಾನ್, ರಾಮಪ್ರಸಾದ್ ಬಿಸ್ಮಿಲ್ಲಾ, ವೀರ ಸಾವರ್ಕರ್, ಉದ್ದಮಸಿಂಗ್, ವಾಸುದೇವ ಬಲವಂತರಾವ್ ಫಡ್ಕೆ ಸೇರಿದಂತೆ ಮುಂತಾದ ಸ್ವಾತಂತ್ರ್ಯ ಯೋಧರ ಕುಟುಂಬ ವರ್ಗದವರಿಗೆ ಸತ್ಕರಿಸಿದರು.
ಈ ಸಂದರ್ಭದಲ್ಲಿಮಾತನಾಡಿದ ಶಹೀದ್‍ಭಗತಸಿಂಗ್ ಸಿಂಗ್ ಪರಿವಾರದ ಕುಡಿ ಯದವಿಂದರ್‍ಸಿಂಗ್ ಸಂಧು, ದಕ್ಷಿಣ ಭಾರತದ ಸಂತ ಹವಾ ಮಲ್ಲಿನಾಥ್ ಮಹಾರಾಜ್ ನಿರಗುಡಿ ಮುತ್ಯಾ ಅವರು 5 ಸಾವಿರ ಕೀ.ಮೀ ದೂರದಿಂದ ಸಹಸ್ರಾರು ಭಕ್ತರೊಂದಿಗೆ ಆಗಮಿಸಿ ಅಮರ ದಿವಸ ಆಚರಿಸುವ ಮೂಲಕ ದೇಶಭಕ್ತಿ ಕಿಡಿ ಹೆಚ್ಚಿಸಿರುವುದು ನಿಜಕ್ಕೂ ಮಾದರಿಯಾಗಿದೆ. ಈ ಕೆಲಸ ಸಣ್ಣದಲ್ಲ ಎಂದು ಹೇಳಿದರು.
ದೇಶಭಕ್ತಿ ಗಟ್ಟಿಗೊಳಿಸುವ ಹಾಗೂ ವ್ಯಾಪಕಗೊಳಿಸುವ ನಿಟ್ಟಿನಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿ ನಿರಂತರವಾಗಿ ದೇಶ ಭಕ್ತಿ ಕಾರ್ಯಕ್ರಮಗಳು ನಡೆಸುತ್ತಾ ಬರುತ್ತಿದ್ದು, ಈ ಹಿಂದೆ ಮಾರ್ಚ 23ರ 2021ರಲ್ಲಿಬೆಂಗಳೂರಿನ ಅರಮನೆ ಮೈದಾನದಲ್ಲಿ
ಹಾಗೂ ಮಾರ್ಚ್ 23ರ 2022ರಲ್ಲಿ ನವದೆಹಲಿಯ ತಾಲಕೋಟರ್ ಮೈದಾನದಲ್ಲಿ ಅಮರ ಬಲಿದಾನ ಆಚರಿಸಿರುವುದು. ಈಗ ಪಂಜಾಬ್‍ದಲ್ಲಿನ ಆಚರಣೆ ನಿಜಕ್ಕೂ ಸುವರ್ಣಾಕ್ಷರದಿಂದ ಬರೆದಿಡುವಂತಾಗಿದೆ.
ದೇಶಭಕ್ತಿ ಬಗ್ಗೆ ಹಲವರು ಮಾತನಾಡುತ್ತಿರುತ್ತಾರೆ. ಆದರೆ ವಾಸ್ತವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡೋದಿಲ್ಲ. ಆದರೆ ಹವಾ ಮಲ್ಲಿನಾಥ್ ಮಹಾರಾಜ್‍ರು ದೇಶದ ಐಕ್ಯತೆ ಬಲಗೊಳಿಸುವ ಹಾಗೂ ಸಂವಿಧಾನ ಕರ್ತವ್ಯಗಳನ್ನು ಜಾಗೃತಿಗೊಳಿಸುತ್ತಿರುವುದನ್ನು ನಾವು ಕಾರ್ಯರೂಪಕ್ಕೆ ತರುವ ಮುಖಾಂತರ ಪೂಜ್ಯರ ಹಾದಿಯಲ್ಲಿ ಮುನ್ನಡೆಯೋಣ ಎಂದು ಸ್ವಾತಂತ್ರ್ಯ ಯೋಧ ಕುಟುಂಬದ ಸದಸ್ಯರು ಸನ್ಮಾನಿತಗೊಂಡು ಮಾತನಾಡಿ ಹೇಳಿದರು.
ಸ್ವಾತಂತ್ರ ಯೋಧ ಹುತಾತ್ಮರಾದ ಚಂದ್ರಶೇಖರ ಆಜಾದ್ ಕುಟುಂಬದ ಸದಸ್ಯ ಅಮಿತ ಅಝಾದ್ ತಿವಾರಿ, ಶಹೀದ್‍ಭಗತಸಿಂಗ್ ಸಿಂಗ್ ಪರಿವಾರದ ಕುಡಿ ಯದವಿಂದರ್‍ಸಿಂಗ್ ಸಂಧು, ಶಹೀದ್, ರಾಜಗುರು ಕುಟುಂಬದ ಸದಸ್ಯ ಸತ್ಯಶೀಲ್ ರಾಜಗುರು, ಶಹೀದ್ ಆಷ್ಫಖುಲ್ಲಾ ಖಾನ್ ಕುಟುಂಬದ ಸದಸ್ಯರಾದ ಆಲಾಖ್ ಉಲ್ಲಾ ಖಾನ್, ಶಹೀದ್ ಉದ್ದಮ ಸಿಂಗ್ ಪರಿವಾರದ ಹರ್ಪಲ್ ಸಿಂಗ್ ಸುನಮ್, ಸುಖದೇವ್ ಕುಟುಂಬದ ಆಶೋಕ್ ಥಾಪರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪೂಜ್ಯ ಹವಾ ಮಲ್ಲಿನಾಥ್ ಮಹಾರಾಜ್ ನಿರಗುಡಿ ಅವರು ಸಹ ಆಶೀರ್ವಚನ ನೀಡಿದರು. ಮಹಾರಾಷ್ಟ್ರ ನಾಂದೇಡದ ಗುರುದ್ವಾರದ ಪ್ರಮುಖರಾದ ಸರದಾರ ಪರಮಜ್ಯೋತಸಿಂಗ ಚತಾಲ್, ಹಜೂರ ಸಾಹೇಬ, ರಣಜೀತಸಿಂಗ ಚಿರಾಗಿಯಾ, ರಣಜೀತಸಿಂಗ, ಹಜೂರ ಸಾಹೇಬ ನಾಂದೇಡ, ಸರದಾರ ನವಲಸಿಂಗ ಜಾಹಗೀರದಾರಮ ಔರಂಗಾಬಾದ್ ದಿಂದ ಆಗಮಿಸಿದ್ದ ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷರಾಗಿರುವ ಡಾ. ತಸನೀಮಾ ಪಟೇಲ್ ಸೇರಿದಂತೆ ಇತರರು ಮಾತನಾಡಿ, ದೇಶದ ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ದ ಹೋರಾಟ ಮಾಡಿ ತಮ್ಮಪ್ರಾಣಗಳನ್ನೇ ಬಲಿದಾನ ಮಾಡಿದ ಅಮರ ವೀರರ ತ್ಯಾಗ, ಬಲಿದಾನ ಎಷ್ಟು ಸ್ಮರಿಸಿದರೂ ಕಡಿಮೆ ಎಂದು ಹೇಳಿದರು.
ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟೀಯ ವಕ್ತಾರರಾದ ವೈಜನಾಥ್ ಝಳಕಿ,ದಾಸರಾವ್ ಹಂಬಡೆ9, ಗುರುಸಿದ್ದಪ್ಪ ಬೆನಕನಹಳ್ಳಿ, ಜೇಮ್ಸ್ ಕೊಳಾರ, ಪ್ರಕಾಶ್ ಕೊಳಾರ, ಬಸವರಾಜ ಕೊಳಾರ, ಸಂದೇಶ ಪವಾರ ರಾಜಶೇಖರ ರೆಡ್ಡಿ ಸೇಡಂ, ಮಲ್ಲಿಕಾರ್ಜುನ ಸಾರವಾಡ, ಶಂಕರ ಕಜಾಗರ, ಪಪ್ಪು ಪಾಟೀಲ, ಕಾಂತೂ ಪಾಟೀಲ ಯಡ್ರಾಮಿ, ಸುಭಾಷ್ ಚಂದ್ರ ರಾಯಚೂರು, ಶಿವರಾಜ ವಾರದ, ಬಸವರಾಜ ಮಣ್ಣೂರು, ಮಾಹಾದೇವಪ್ಪಾ ಹೊನ್ನಕಸ್ತೂರಿ, ರೇವಪ್ಪ ಮಮದಾಪೂರ,ಮಂಜುನಾಥ ಬಿರಾದಾರ, ಸಿದ್ಧಾರ್ಥ ತಲವಾರೆ ನಾಂದೇಡ, ಸಂತೋಷ ಹಳ್ಳೆ, ಗುಂಡೇರಾವ ಮಾಲಾಜಿ, ಪುಷ್ಪಕ ಸೇರಿದಂತೆ ಮುಂತಾದವರಿದ್ದರು.
ಸ್ವಾತಂತ್ರ್ಯ ಹೋರಾಟಗರರ ಜಯಂತಿ ಹಾಗೂ ಪುಣ್ಯಸ್ಮರಣೆ ಸಮಸ್ತ ಭಾರತೀಯರೆಲ್ಲರೂ ಮಾಡುವುದರೊಂದಿಗೆ ಆ ಮಹಾನ್ ನಾಯಕರು ದೇಶಕ್ಕಾಗಿ ನೀಡಿರುವ ಅಮೂಲ್ಯವಾದ ಅವರ ತ್ಯಾಗ, ಬಲಿದಾನ ಯುವ ಪೀಳಿಗೆಗೆ ತಿಳಿ ಹೇಳುವ ಕೆಲಸ ಮಾಡಬೇಕಿದೆ. ದೇಶಭಕ್ತಿ ಅಭಿಮಾನ ಕಾರ್ಯಾಚರಣೆಯಲ್ಲಿ ಬರಬೇಕು. ಹೀಗಾದಲ್ಲಿ ದೇಶ ಮತ್ತಷ್ಟು ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ. -ಪರಮಪೂಜ್ಯ ಹವಾ ಮಲ್ಲಿನಾಥ ಮಹಾರಾಜ, ನಿರಗುಡಿ, ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು, ಜೈ ಭಾರತ ಮಾತಾ ಸೇವಾ ಸಮಿತಿ, ನವದೆಹಲಿ.
ಪಂಜಾಬ ಪ್ರತ್ಯೇಕತೆ ಕೂಗಿ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಪೂಜ್ಯ ಹವಾ ಮಲ್ಲಿನಾಥ ಮಹಾರಾಜರು ನಡೆಸಿರುವ ಅಮರ ಬಲಿದಾನ ದಿವಸ ದೇಶದ ಐಕ್ಯತೆ ಗಟ್ಟಿಗೊಳಿಸುವ ಹಾಗೂ ದೇಶ ಭಕ್ತಿ ಒಮ್ಮಡಿಗೊಳಿಸುವುದಕ್ಕೆ ಭದ್ರ ಬುನಾದಿ ಹಾಕಿದೆ ಎಂದರೆ ತಪ್ಪಾಗಲಾರದು. ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಹಾಗೂ ಕೈ ಜೋಡಿಸಿದ ಪಂಜಾಬ್‍ದ ಎಲ್ಲ ಪೆÇಲೀಸ್ ಅಧಿಕಾರಿಗಳಿಗೆ, ಪ್ರಮುಖರೆಲ್ಲರಿಗೂ ಅಭಿನಂದನೆ ಸಲ್ಲಿಸುವೆ. – ವೈಜನಾಥ ಝಳಕಿ, ನ್ಯಾಯವಾದಿಗಳು ಹಾಗೂ ರಾಷ್ಟ್ರೀಯ, ವಕ್ತಾರರು, ಜೈ ಭಾರತ ಮಾತಾ ಸೇವಾ ಸಮಿತಿ, ನವದೆಹಲಿ.