ಹವಮಾನ ಮತ್ತು ಪರಿಸರ ಶಿಕ್ಷಣ ಕುರಿತಾದ ಕಾರ್ಯಾಗಾರ

0
64

ಜೇವರ್ಗಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿ ಹಾಗೂ ಸಿ.ಇ.ಇ ಮತ್ತು ಯುನಿಸೆಫ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಹವಮಾನ ಮತ್ತು ಪರಿಸರ ಶಿಕ್ಷಣ ಕುರಿತಾದ ಕಾರ್ಯಾಗಾರವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಡಾ. ಬಾಬು, ಡಾ. ಪ್ರಕಾಶ್ ಹಾಗೂ ಡಾ. ನಿತಿನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಸಂಯೋಜಕರಾಗಿ ದಿಲೀಪ್ ಶರ್ಮ ಯೂನಿಸಿಫ್ ಕನ್ಸಲ್ಟೆಂಟ್, ಡಾ. ಶೃತಿ, CEE ಬೆಂಗಳೂರು ಹಾಗೂ ಮಿಸ್. ಅಂಜಲಿ CEE ಬೆಂಗಳೂರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಗುಳೇಶ್ವರ್ ವಹಿಸಿದ್ದರು.

Contact Your\'s Advertisement; 9902492681

ಅಲ್ಲದೆ ತಾಲೂಕಿನ ವಿವಿಧ ಪದವಿ ಕಾಲೇಜುಗಳಾದ ಮಹಾಲಕ್ಷ್ಮಿ ಪದವಿ ಕಾಲೇಜು, ಸಿದ್ದಲಿಂಗ ಪದವಿ ಕಾಲೇಜು, ಹಾಗೂ ಬಸವಶ್ರೀ ಪದವಿ ಕಾಲೇಜು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಉದ್ಘಾಟನೆಯ ನಂತರ ಎಲ್ಲಾ ವಿದ್ಯಾರ್ಥಿಗಳನ್ನು ಮೂರು ವಿಭಾಗಗಳನ್ನಾಗಿ ಮೂರು ಹಾಲ್ಗಳಲ್ಲಿ ಕೂಡಿಸುವ ಮೂಲಕ ಪ್ರತ್ಯೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕೇಂದ್ರೀಯ ವಿಶ್ವವಿದ್ಯಾಲಯದ ಡಾ. ಬಾಬು ಡಾ. ಪ್ರಕಾಶ್ ಹಾಗೂ ಡಾ. ನಿತೀನ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿನಿಯರಿಗೆ ಹವಮಾನ ಮತ್ತು ಪರಿಸರ ಶಿಕ್ಷಣದ ವಿಷಯವಾಗಿ ವಿಶೇಷವಾಗಿರುವ ಉಪನ್ಯಾಸವನ್ನು ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here