ಅಲೆಮಾರಿ ಸಮುದಾಯಕ್ಕೆ ವಿಶೇಷ ಮಿಸಲಾತಿ ಕಲ್ಪಿಸಬೇಕು

0
55

ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ/ಅರೆ-ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳ ಮಹಾ ಒಕ್ಕೂಟ, ಬೆಂಗಳೂರು ಇದರ ಅಡಿಯಲ್ಲಿ ಕಲಬುರಗಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭವನ್ನು ಶನಿವಾರ ನಗರದ ರಾಮ ಮಂದಿರದ ಹಿಂದುಗಡೆ ಇರುವ ಶ್ರೀ ಶಿವಶರಣ ಹರಳಯ್ಯ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕೃಷ್ಣಾರೆಡ್ಡಿ ಹಾಗೂ ಅಭಿಷೇಕ್ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿದರು. ಅಲೆಮಾರಿ ಸಮುದಾಯಗಳಲ್ಲಿ ಸಂಘಟಿತ ಮನೋಭಾವ ಮೂಡಿ ರಾಜಕೀಯ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡಾಗ ಮಾತ್ರ ಪ್ರಜಾಪ್ರಭುತ್ವದಲ್ಲಿ ಪಾಲ್ಗೊಂಡು ಸಂವಿಧಾನದ ಆಶಯದಂತೆ ಅಲೆಮಾರಿಗಳಿಗೂ ಸಹ ಸಾಮಾಜಿಕ ಸ್ಥಾನ ಮಾನಗಳು ಸಂವಿಧಾನಬದ್ದ ಹಕ್ಕು ಮತ್ತು ಅವಕಾಶಗಳು ದಕ್ಕುತ್ತವೆ ಆ ಮೂಲಕ ಮೂಕರಂತೆ ಇರುವ ಅಲೆಮಾರಿಗಳಿಗೆ ಧ್ವನಿ ಮೂಡುತ್ತದೆ. ಅಲೆಮಾರಿ ಸಮುದಾಯಗಳ ಬಡತನ ಹೋಗಲಾಡಿಸಲು ಎಲ್ಲರೂ ಶಿಕ್ಷಿತರಾಗಬೇಕು ಎಂದು ಮಹಾ ಒಕ್ಕೂಟದ ಕಾರ್ಯದರ್ಶಿ ಸುನೀಲ್ ಹೆಳವರ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಘಟಕದ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರವೀಂದ್ರ ಉದನೂರ, ಗೌರವಾದ್ಯಕ್ಷರಾಗಿ ಮಹಾದೇವ ಶಿಂದೆ, ಉಪಾಧ್ಯಕ್ಷರಾಗಿ ಜಗತಸಿಂಗ್, ಅಂಬಣ್ಣ, ಮಹಾದೇವಿ ಹೆಳವರ, ಗೌರವ ಸಲಹೆಗಾರರಾಗಿ ಮಲ್ಲಿಕಾರ್ಜುನ ಬಿ.ಹೆಚ್ ಹೆಳವರ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಹೆಳವರ ಹೆಬ್ಬಾಳ, ಸಹಕಾರ್ಯದರ್ಶಿಯಾಗಿ ಕಲ್ಲಪ್ಪ ಯಾದವ, ರೇಣುಕಾ ಚವ್ಹಾಣ, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದರಾಮ ಹೆಳವರ ಬೈರಾಮಡಗಿ, ಸೂರ್ಯಕಾಂತ ಕೊಂಡಿರಾಮ, ಜಂಟಿ ಕಾರ್ಯದರ್ಶಿ ಮಹಿಬೂಬ ಶಾ, ಖಜಾಂಚಿಯಾಗಿ ಅರುಣಕುಮಾರ ಕಟ್ಟಿಮನಿ ನೇಮಿಸಲಾಯಿತು.

ಸಮಾರಂಭದ ಮುಖ್ಯಅತಿಥಿಗಳಾಗಿ ಭೀಮಣ್ಣ ಬೋನಾಳ, ಮಹಾಂತೇಶ ಕೌಲಗಿ, ಗೋಪಾಲಕೃಷ್ಣ, ಸಂತೋಷ ಶಿಂದೆ, ಶ್ರೀಮಂತ ಸೌಂದರ್ಗಿ, ಮಲ್ಲಿಕಾರ್ಜುನ ಬಿ.ಎಚ್ ಹಾಗೂ ಅಲೆಮಾರಿ ಸಮುದಾಯದಲ್ಲಿ ಬರುವ ಎಲ್ಲಾ ಜಾತಿಗಳ ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು.

ಬಸವರಾಜ ಹೆಳವರ ಯಾಳಗಿ ನಿರೂಪಿಸಿದರು, ಮಲ್ಲಿಕಾರ್ಜುನ ಹೆಳವರ ಹೆಬ್ಬಾಳ ಸ್ವಾಗತಿಸಿದರು, ಸಾಹೆಬಣ್ಣ ಹೆಳವರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here