ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ

0
17

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘ ಹಾಗೂ ಬಣಗಾರ ಫೌಂಡೇಷನ್ ಸಹಯೋಗದಲ್ಲಿ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಬಯಲು ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಮಹಾಸ್ವಾಮೀಜಿ ಮಾತನಾಡಿ, ಗ್ರಾಮದಲ್ಲಿ ಬಯಲು ಗ್ರಂಥಾಲಯ ಆರಂಭಿಸಿರುವುದು ಉತ್ತಮ ಕಾರ್ಯವಾಗಿದ್ದು ಹಿರಿಯರು, ಯುವಕರು, ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವಲ್ಲಿ ಬಯಲು ಗ್ರಂಥಾಲಯ ತುಂಬಾ ಮಹತ್ವದ ಪಾತ್ರ ವಹಿಸಲಿದೆ. ಇಂದಿನ ಆಧುನಿಕ ತಂತ್ರಜ್ಞಾನ ಫಲವಾಗಿ ಮೊಬೈಲ್‍ಗಳ ಬಳಕೆ, ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ಜನರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದ ಅವರು, ನಾವು ಮಾಡುವ ಯಾವುದೇ ಸಾಮಾಜಿಕ ಕಾರ್ಯವು ನಿಸ್ವಾರ್ಥವಾಗಿದ್ದರೆ ಬಹು ಎತ್ತರಕ್ಕೆ ಬೆಳೆಯುತ್ತದೆ ಇದಕ್ಕೆ ಹಿರಿಯ ಪತ್ರಕರ್ತ ಸುಭಾಸ ಬಣಗಾರ ಅವರು ಆರಂಭಿಸಿದ ಬಯಲು ಗ್ರಂಥಾಲಯವೇ ಸಾಕ್ಷಿಯಾಗಿದ್ದು ಅವರು ಆರಂಭಿಸಿದ ಬಯಲು ಗ್ರಂಥಾಲಯ ಇಂದು ಕೇವಲ ಕಲಬುರಗಿ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಹೆಸರುವಾಸಿಯಾಗಿದೆ ಈ ಮೂಲಕ ಜ್ಞಾನ ದಾಸೋಹ ನಡೆಯುತ್ತಿದೆ ಎಂದರು.

Contact Your\'s Advertisement; 9902492681

ಕೆವೈ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಿಸಿಸಿ ಬ್ಯಾಂಕ್ ಮೂಲಕ ನೂರಾರು ಮಹಿಳಾ ಸಂಘಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲಾಗಿದೆ ಮುಂದಿನ ದಿನಗಳಲ್ಲಿ ಹೆಚ್ಚು ಸಂಘ ಸಂಸ್ಥೆಗಳಿಗೆ ಸೌಲಭ್ಯ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ನಿವೃತ್ತ ಎಸ್.ಪಿ. ಸಿ.ಎನ್.ಭಂಡಾರೆ ಅಧ್ಯಕ್ಷ ವಹಿಸಿ ಮಾತನಾಡಿ ಬಯಲು ಗ್ರಂಥಾಲಯದ
ಸದುಪಯೋಗಪಡೆದುಕೊಳ್ಳುವ ಮೂಲಕ ಪುಸ್ತಕಗಳನ್ನು ಓದಿ ಗ್ರಾಮದ ಯುವಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜ್ಞಾನವನ್ನು ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವ ಮೂಲಕ ಉನ್ನತ ಹುದ್ದೆಗೆ ಪಡೆದುಕೊಳ್ಳುವಂತಾಗಬೇಕು ಎಂದರು.

ಬಯಲು ಗ್ರಂಥಾಲಯದ ರೂವಾರಿ ಸುಭಾಸ ಬಣಗಾರ ಮಾತನಾಡಿ ರಾಜ್ಯದ ಎಲ್ಲಾ ಕಡೆ ಬಯಲು ಗ್ರಂಥಾಲಯ ಆರಂಭವಾಗುತ್ತಿದೆ ಪ್ರಚಲಿ ತ ವಿದ್ಯಾಮಾನಗಳ ಬಗ್ಗೆ ಮಕ್ಕಳಲ್ಲಿ ಅರಿವು ಹೊಂದಲು 20ಕೋಟಿ ರೂ ಅನುದಾನದಲ್ಲಿ ರಾಜ್ಯದ 23,347 ಶಾಲೆಗಳಲ್ಲಿ ರೀಡಿಂಗ್ ಕಾರ್ನರ್ (ಬಯಲು ಗ್ರಂಥಾಲಯ) ಆರಂಭಿಸಲು ನಿರ್ಧರಿಸಿರುವುದು ಉತ್ತಮ ಕಾರ್ಯವಾಗಿದ್ದು ವಿದ್ಯಾರ್ಥಿಗಳಿಗೆ ಇದರ ಲಾಭ ಪಡೆಯಲು ಸಮಯ ನಿಗದಿಪಡಿಸಬೇಕು ಹಾಗೂ ಮೇಲ್ವಿಚಾರಣೆಗೆ ಸಮಿತಿ ರಚಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಊರಿನ ಮುಖಂಡ ಹನುಮಗೌಡ ಪೋಲಿಸ್‍ಪಾಟೀಲ ದಳಪತಿ ಮಾತನಾಡಿ ಮೊಬೈಲ್ ಹಾವಳಿಯಿಂದಾಗಿ ಸಾಹಿತ್ಯ ಕ್ಷೇತ್ರಕ್ಕೆ ಹಿನ್ನೆಡೆಯಾಗುತ್ತಿದ್ದು ಪ್ರಮುಖ ಸಾಹಿತಿಗಳ ಅತ್ಯುತ್ತಮ ಕೃತಿಗಳನ್ನು ಓದುವವರಿಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸುತ್ತಾ ದೇವಸ್ಥಾನದಲ್ಲಿ ಆರಂಭಿಸಿರುವ ಬಯಲು ಗ್ರಂಥಾಲಯ ಜ್ಞಾನದ ದೀವಿಗೆಯಾಗಿ ದೇವಸ್ಥಾನದಲ್ಲಿ ಕುಳಿತು ಜನರು ಹರಟೆ ಹೊಡೆಯದೇ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುವ ಮೂಲಕ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು.

ಉದ್ದಿಮೆದಾರರಾದ ಕಿಶೋರಚಂದ ಜೈನ, ನ್ಯಾಯವಾದಿ ಜಯಲಲಿತಾ ಪಾಟೀಲ ಮಾತನಾಡಿದರು ತಾಪಂ ಮಾಜಿ ಸದಸ್ಯ ಸುರೇಂದ್ರನಾಯಕ, ಪಿಡಿಓ ಸಂಗೀತಾ ಸಜ್ಜನ್, ಬಣಗೌಡ ಫೌಂಡೇಷನ್‍ನ ವಸಂತಕುಮಾರ ಬಣಗಾರ ವೇದಿಕೆಯಲ್ಲಿದ್ದರು. ಮಂಜುನಾಥ ಚೆಟ್ಟಿ ಸ್ವಾಗತಿಸಿದರು ಈರಪ್ಪ ಸಿಂಪಿ ಪ್ರಾರ್ಥಿಸಿದರು ಅಮರೇಶ ಚಿಲ್ಲಾಳ ನಿರೂಪಿಸಿ ವಂದಿಸಿದರು.

ಶಂಕ್ರಪ್ಪ ಬಣಗಾರ, ಆನಂದ ಗೋಗಿ, ಚನ್ನಪ್ಪ ಹೂಗಾರ, ಕೊಟ್ಟಯ್ಯಸ್ವಾಮಿ ಬಳ್ಳುಂಡಗಿಮಠ, ಉಮಾಕಾಂತ, ದೇವಿಂದ್ರ ಯಾಳಗಿ, ಶರಣಯ್ಯ ಮಠಪತಿ, ಶಿವಕುಮಾರ ಪರಚಂಡಿ, ನಾಗರಾಜ, ಬಸವರಾಜ, ಶಿವಕುಮಾರ, ಪ್ರದೀಪ ಬಣಗಾರ, ಮಹೇಂದ್ರ ಅಂಗಡಿ, ನಂದರೆಡ್ಡಿ, ಗುರಪ್ಪ ಕುಂಬಾರ, ವೀರಭದ್ರ ಕುದುರಿ, ಬಸವರಾಜ ದೋರನಹಳ್ಳಿ, ಭಾಗನಾಥ ಗುತ್ತೇದಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here