ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಿಲ್ಲ; ನಿರ್ಮಲಾ ಸೀತಾರಾಮನ

0
8

ಕಲಬುರಗಿ: ಕಾಂಗ್ರೆಸ್ ತನ್ನ ಆಳ್ವಿಕೆ ಇರುವ ರಾಜ್ಯಗಳಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ ಇಂದಿಲ್ಲಿ ಹೇಳಿದರು.

ಆಳಂದ ಪಟ್ಟಣದ ಎ.ವಿ. ಪಾಟೀಲ ಮಂಗಲ ಕಾರ್ಯಾಲಯದಲ್ಲಿ ಬುಧವಾಋ ಬಿಜೆಪಿ ಹಮ್ಮಿಕೊಂಡಿದ್ದ ಅಭ್ಯರ್ಥಿ ಸುಭಾಷ ಗುತ್ತೇದಾರ ಪರ ಚುನಾವಣೆ ಪ್ರಚಾರದ ಬೃಹತ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಕೇಂದ್ರ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ. ಪ್ರಸ್ತುತ ಬಜೆಟ್‍ನಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅವುಗಳಿಗೆ ಸಹಾಯಧನ ನೀಡಿ ಅವುಗಳು ಉತ್ಪನ್ನ ಮಾಡುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಭರವಸೆ ನೀಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಅನೇಕ ಲಾಭಗಳಾಗಿವೆ ಅಲ್ಲದೇ ಅಡುಗೆ ಮನೆಗಳನ್ನು ಹೊಗೆ ರಹಿತ ಅಡುಗೆ ಮನೆಗಳನ್ನಾಗಿ ಮಾಡಿದ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷವು ಕೇವಲ ಭರವಸೆ ನೀಡುತ್ತದೆ ಅವುಗಳ ಅನುಷ್ಠಾನಕ್ಕೆ ಗಮನಹರಿಸಲ್ಲ ಎಂದು ನುಡಿದರು.

ಆಳಂದ ಮತಕ್ಷೇತ್ರದಲ್ಲಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ನಾಲ್ಕು ಬಾರಿ ಶಾಸಕರಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ ಈಗ ಅವರು 5ನೇ ಬಾರಿ ಸ್ಪರ್ಧಿಸಿದ್ದು ಅವರಿಗೆ ಮತ್ತೊಮ್ಮೆ ತಮ್ಮ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನ ನರೇಂದ್ರ ಮೋದಿಯವರು ಪ್ರತಿ ಯೋಜನೆಗಳನ್ನು ತಯಾರಿಸುವಾಗ ಇದರಿಂದ ಮಹಿಳೆಯರಿಗೆ ಏನು ಲಾಭವಿದೆ ಎಂದು ಪ್ರಶ್ನೆ ಮಾಡಿ ಅದರಿಂದ ಮಹಿಳಾ ಸಮುದಾಯಕ್ಕೆ ಎಷ್ಟು ಅನೂಕೂಲವಾಗುತ್ತದೆ ಎಂದು ಖಾತರಿಪಡಿಸಿಕೊಂಡು ಯೋಜನೆ ತಯಾರಿಸುತ್ತಾರೆ ಇದು ಅವರ ಮಹಿಳಾ ಪರ ನಿಲುವುನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ಜಾಗತಿಕವಾಗಿ ಬೆಳೆಯುತ್ತಿರುವ ಸ್ಟಾರ್ಟ ಅಪ್ ಉದ್ಯಮದಲ್ಲಿ ಮಹಿಳೆಯರಿಗೆ ಶೇ 70ರಷ್ಟು ಸಿಂಹಪಾಲ ದೊರಕಿದೆ. ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಮುದ್ರಾ ಯೋಜನೆಯ ಮೂಲಕ ಧನಸಹಾಯ ನೀಡಿದೆ ಇದರಿಂದ ದೇಶದ ಕೋಟ್ಯಾಂತರ ಮಹಿಳೆಯರ ಬಾಳಲ್ಲಿ ಸಂತಸ ಮೂಡಿದೆ. ಅಲ್ಲದೆ, ಗ್ರಾಮೀಣ ಭಾರತದಲ್ಲಿ ಶೌಚಾಲಯ ನಿರ್ಮಾಣ ಮಾಡಿ ಬಯಲು ಶೌಚ ಮುಕ್ತ ಭಾರತ ಮಾಡಲು ಯತ್ನಿಸಲಾಗುತ್ತಿದೆ. ಮನೆಯಿಲ್ಲದವರಿಗೆ ಪ್ರಧಾನಮಂತ್ರಿ ಆವಾಸ ಮನೆ ಕಲ್ಪಿಸಿ ಸೂರು ಕಲ್ಪಿಸಲಾಗಿದೆ ಎಂದು ಹೇಳಿದರು.

ಭಾರತದಲ್ಲಿ ಪುರುಷರಷ್ಟೇ ಸ್ಥಾನಮಾನಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಭಾರತೀಯ ಜನತಾ ಪಕ್ಷವು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಿ ಅವರು ಸಮಾಜದಲ್ಲಿ ತಲೆ ಎತ್ತಿ ಬಾಳುವಂತೆ ಮಾಡಿದೆ ಹೀಗಾಗಿ ಮಹಿಳೆಯರು ಈ ಬಾರಿ ಗೌರವದ ಬದುಕಿಗಾಗಿ ಮತ್ತೆ ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಗುತ್ತೇದಾರ ಅವರು ಜೀವದ ಹಂಗು ತೊರೆದು ಆಳಂದ ಪಟ್ಟಣದ ರಾಘವ ಚೈತನ್ಯ ಶಿಲಿಂಗದ ಪೂಜೆ ಕೈಗೊಂಡು ಧರ್ಮ ಕಾಯುವ ಕಾರ್ಯ ಮಾಡಿದ್ದಾರೆ ಅವರಿಗೆ ಈ ಬಾರಿ ಭಾರೀ ಬಹುಮತದಿಂದ ಚುನಾಯಿಸಬೇಕಾಗಿ ಎಂದು ಕರೆ ನೀಡಿದರು.

ಶಾಸಕ ಸುಭಾಷ್ ಆರ್ ಗುತ್ತೇದಾರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನತೆಯ ಒಳಿತಿಗಾಗಿ ಕಾರ್ಯಗಳನ್ನು ಮಾಡಿವೆ. ತಾವು ಕೂಡ ಕ್ಷೇತ್ರದ ಯಾವ ಗ್ರಾಮಗಳನ್ನು ಬಿಡದೇ ಅಭಿವೃದ್ಧಿ ಮಾಡಿ ತೋರಿಸಿದ್ದೇನೆ. ನಾನು ಮಾಡಿರುವ ಕಾಮಗಾರಿಗಳಿಗೂ ಎದುರಾಳಿ ಮಾಡಿರುವ ಕಾಮಗಾರಿಗಳನ್ನು ತುಲನೆ ಮಾಡಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ಜಾಖರ್ಂಡ್ ಶಾಸಕ ಬಿರಂಜಿ ನಾರಾಯಣ್, ಶಾಸಕಿ ಮೀರಾ ಯಾದವ, ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಕಲಬುರ್ಗಿ ಬಿಜೆಪಿ ಗ್ರಾಮಾಂತರ ಕಾರ್ಯಾಧ್ಯಕ್ಷ ಅಶೋಕ್ ಬಗಲಿ, ಮಂಡಲ ಅಧ್ಯಕ್ಷ ಆನಂದ ಪಾಟೀಲ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚೆಂದಮ್ಮ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಶಿಕಲಾ ಟೆಂಗಳಿ, ಮಹಿಳಾ ಗ್ರಾಮಾಂತರ ಅಧ್ಯಕ್ಷ ಭಾರತಿ ಗುನ್ನಾಪುರ ಚಲನಚಿತ್ರ ನಿರ್ದೇಶಕಿ ಹಾಗೂ ನಿರ್ಮಾಪಕಿ ರೂಪಾ ಅಯ್ಯರ್, ಸುಹಾಸನಿ ಎಸ್. ಗುತ್ತೇದಾರ, ಶೋಭಾ ಆನಂದ ಗುತ್ತೇದಾರ, ಮೋರ್ಚಾ ಅಧ್ಯಕ್ಷೆ ಸುನಿತಾ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಗೌರಿ ಚಿಚಕೋಟಿ, ಜಿಲ್ಲಾ ಉಪಾಧ್ಯಕ್ಷೆ ಸುಜ್ಞಾನಿ ಪೋದ್ದಾರ, ಅಪರ್ಣಾ ಹೊದಲೂರಕರ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here