ಮಹಿಳೆಯರಿಗೆ ಸಮಾನತೆ ಕಲ್ಪಿಸಿದ ಬಸವಣ್ಣ; ಪ್ರೊ. ವಿಜಯಾದೇವಿ

0
13

ಕಲಬುರಗಿ: ಮಹಾಮಾನವತಾವಾದಿ ಬಸವಣ್ಣನವರ ದೂರದೃಷ್ಟಿಯ ಫಲವಾಗಿ ಸಮಾನತೆ ಅದರಲ್ಲೂ ಸ್ತ್ರೀ ಸಮಾನತೆ ಕಲ್ಪಿಸಿದ್ದು ಬಸವ ಚಳವಳಿಯ ಸಾಧನೆ ಅಪೂರ್ವ ಎಂದು ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್. ಅಪ್ಪ ಅವರು ಅಭಿಪ್ರಾಯಪಟ್ಟರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಬಸವಪರ ಸಂಘಟನೆಗಳು ಹಾಗೂ ಕಾಯಕ ಶರಣರ ಒಕ್ಕೂಟದ ವತಿಯಿಂದ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಬುಧವಾರ ಆಯೋಜಿಸಿದ್ದ 890ನೇ ಬಸವ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ನೆಲೆ, ಬೆಲೆ ತಂದುಕೊಟ್ಟರು ಎಂದು ತಿಳಿಸಿದರು.

Contact Your\'s Advertisement; 9902492681

ಬಸವಣ್ಣನ ದಾರಿಯಲ್ಲಿ ನಡೆದ ಶರಣಬಸವೇಶ್ವರರು ಕಲಬುರಗಿಯನ್ನು ಕಲ್ಯಾಣದ ಹೆಬ್ಬಾಗಿಲನ್ನಾಗಿ ಪರಿವರ್ತಿಸಿದ ಕೀರ್ತಿ ಸಲ್ಲುತ್ತದೆ. ವಚನಗಳಿಗಿರುವ ಕಾವು ಜಗತ್ತಿನ ಯಾವ ಸಾಹಿತ್ಯಕ್ಕೂ ಇಲ್ಲ ಎಂದು ಡಾ. ಶರಣಬಸವಪ್ಪ ಅಪ್ಪ ಅವರು ಇಂದಿಗೂ ಸ್ಮರಿಸುತ್ತಾರೆ ಎಂದರು.

ಬಸವಣ್ಣ, ಮಹಿಳೆ ಹಾಗೂ ಸಂವಿಧಾನಾತ್ಮಕ ಚಿಂತನೆಗಳು ವಿಷಯ ಕುರಿತು ವಿಶೇಷ ಅನುಭಾವ ನೀಡಿದ ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಎಮಿರಿಟಸ್ ಪ್ರೊ.‌ ವಿಜಯಾದೇವಿ, ಪ್ರಗತಿಪರ ಚಿಂತನೆಗಳ ಮೂಲಕ ತ್ರಿಕಾಲದಲ್ಲೂ ಆರಾಧಕರಾದ ಬಸವಣ್ಣನವರು ಮೊಟ್ಟ ಮೊದಲು ಮಹಿಳೆಯರಿಗೆ ಗೌರವ ತಂದುಕೊಟ್ಡಾಟರು. ಡಾ. ಬಿ.ಅರ್. ಅಂಬೇಡ್ಕರ್ ಅಧಿಕೃತ ಸಂವಿಧಾನವಾದರೆ ಇದಕ್ಕಿಂತ ಮುಂಚೆ 12ನೇ ಶತಮಾನದಲ್ಲಿ ಬಸವಣ್ಣನವರು ಅನಧಿಕೃತ ಸಂವಿಧಾನ ರಚಿಸಿದ್ದಾರೆ ಎಂದು ತಿಳಿಸಿದರು.

ಮಹಿಳೆಯರಿಗೆ ಬಸವಣ್ಣನವರು ಮುಕ್ತ ಸ್ವಾತಂತ್ರ್ಯ ಒದಗಿಸಿದರು. ಅದರಂತೆ ಅಂಬೇಡ್ಕರ್ ಅವರು ಮಹಿಳಾ ಕೋಡ್ ಬಿಲ್ ಮಂಡಿಸಿದರು.‌ ಆದರೂ ಇಂದು ಮಹಿಳೆಯರು ಅಸುರಕ್ಷಿತರಾಗಿರುವುದು ದುರಂತದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಬಸವಣ್ಣನವರು ಮಹಿಳೆಯರಿಗೆ ಸಾಮಾಜಿಕ ಸ್ವಾತಂತ್ರ್ಯ ಮಾತ್ರವಲ್ಲ ಧಾರ್ಮಿಕ ಸ್ವಾತಂತ್ರ್ಯ ಕೂಡ ಒದಗಿಸಿದ್ದರು. ಪರಿಶುದ್ದತೆಗೆ, ಪರಮಾತ್ಮನ ಎತ್ತರಕ್ಕೆ ಮಹಿಳೆಯನ್ನು ಕೊಂಡ್ಯೊಯ್ದರು. ಮಹಿಳೆಯನ್ನು ಎಲ್ಲ ಭವ ಬಂಧನಗಳಿಂದ ಬಿಡುಗಡೆ ಮಾಡಿದರು.

ಜ್ಞಾನ, ಗುಣ, ಸಾಧನೆಯ ಮೂಲಕ ಮಹಿಳೆಯರನ್ನು ಗುರುತಿಸುವುದನ್ನು ಕಲಿಸಿದರು. ಕಾಯಕನಿಷ್ಠೆ ಶರಣೆಯರನ್ನು ಗುರುತಿಸಿದರು.

ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಸುವರ್ಣಾ ಮೀಸೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಶರಣಬಸವೇಶ್ವರ ಸಂಸ್ಥಾನದ ಡಾ. ದಾಕ್ಷಾಯಣಿ ಎಸ್. ಅಪ್ಪ ಸಾನ್ನಿಧ್ಯ ವಹಿಸಿದ್ದರು. ಅಕ್ಕ ಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ನೇತೃತ್ವ ವಹಿಸಿದ್ದರು. ಡಾ. ಶಕುಂತಲಾ ದುರಗಿ ಅಧ್ಯಕ್ಷತೆ ವಹಿಸಿದ್ದರು.

ಇದೇವೇಳೆಯಲ್ಲಿ ಮಹಾದೇವಿ ನಂದಿಕೋಲ ಅವರನ್ನು ಸತ್ಕರಿಸಲಾಯಿತು. ಜಯಶ್ರೀ ಚಟ್ನಳ್ಳಿ, ವಿಜಯಲಕ್ಷ್ಮೀ ಪಾಟೀಲ ಬಿರಾಳ, ವಿಜಯಲಕ್ಷ್ಮೀ ನೆಪೇರಿ ಉಪಸ್ಥಿತರಿದ್ದರು.

ಡಾ. ಸುಲೇಖಾ ಮಾಲಿಪಾಟೀಲ ನಿರೂಪಿಸಿದರು. ನಳಿನಿ ಮಹಾಗಾಂವಕರ್ ಪ್ರಸ್ತಾವಿಕ ಮಾತನಾಡಿದರು. ‌ಮಾಲತಿ ರೇಶ್ಮಿ ಸ್ವಾಗತಿಸಿದರು. ದಾನೇಶ್ವರಿ ಗುಂಡಪ್ಪ ವಚನ ನೃತ್ಯ ಮಾಡಿದರು. ರೇಣುಕಾ ಗುಬ್ಬೇವಾಡ ಶರಣು ಸಮರ್ಪಿಸಿದರು.

ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದು, ಲಿಂಗಾಯತ ಧರ್ಮಕ್ಕೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಸಿಕ್ಕರೆ ಅಲ್ಪ ಸಂಖ್ಯಾತರಿಗೆ ಸಿಗುವ ಸೌಲಭ್ಯಗಳು ದೊರೆಯಲಿವೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. – ನಳಿನಿ ಮಹಾಗಾಂವಕರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here