ನಿಮ್ಮ ಗೌರವಕ್ಕೆ ಕುಂದು ತರುವ ಕೆಲಸ ಮಾಡಿಲ್ಲ; ಪ್ರಿಯಾಂಕ್ ಖರ್ಗೆ ಪ್ರತಿಪಾದನೆ

0
15

ಶಹಾಬಾದ: ನನಗೆ ನೀವು ಎರಡು ಸಲ ಆಶೀರ್ವಾದ ಮಾಡಿದ್ದೀರಿ. ಅದರಂತೆ ನಾನು ಕೂಡಾ ಪ್ರಾಮಾಣಿಕವಾಗಿ ನಿಮ್ಮ ಮನೆಯ ಮಗನಂತೆ ಕೆಲಸ ಮಾಡಿದ್ದೇನೆ. ನಿಮ್ಮ ಗೌರವಕ್ಕೆ ಕುಂದು ತರದಂತೆ ಹಾಗೂ ನಿಮ್ಮ ಮತಕ್ಕೆ ಅಗೌರವ ತರುವಂತ ಕೆಲಸ ಮಾಡಿಲ್ಲ. ಹಾಗಾಗಿ ನಾನು ಈಗ ಮತ್ತೆ ಮತ ಕೇಳಲು ಬಂದಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಅವರು ರವಿವಾರ ವಿಧಾನಸಭೆ ಚುನಾವಣೆ ನಿಮಿತ್ತ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ನಾನು ಸುಳ್ಳು ಹೇಳಿ ಹೋಗುವಂತ ವ್ಯಕ್ತಿಯಲ್ಲ. ನಾನು ನಾಳೆ ಮತ್ತೆ ಈ ಊರಿಗೆ ಬರಬೇಕಲ್ಲ. ನಾನು ಭಾμÉ ಕೊಟ್ಟಂತೆ ನಡೆದುಕೊಂಡಿದ್ದೇನೆ ಹಾಗೆ ಅಭಿವೃದ್ದಿ ಕೂಡಾ ಮಾಡಿದ್ದೇನೆ. ನನ್ನ ಶಕ್ತಿ ಮೀರಿ ಅನುದಾನ ತಂದು ಅಷ್ಟೂ ಅನುದಾನವನ್ನು ಬಳಕೆ ಮಾಡಿದ್ದೇನೆ. ಈ ಗ್ರಾಮದ ಜನರ ಬೇಡಿಕೆಯಂತೆ ಅಂಬಿಗರ ಚೌಡಯ್ಯ ಭವನ ಹಾಗೂ ರಾಮಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನನ್ನನ್ನು ಹಾಗೂ ಬಿಜೆಪಿ ಅಭ್ಯರ್ಥಿ ಯನ್ನು ಹೋಲಿಕೆ ಮಾಡಿ ನೋಡಿ. ಅವನು ನ್ಯಾಯಬೆಲೆ ಅಂಗಡಿಯಿಂದ ಸಾರ್ವಜನಿಕರಿಗೆ ಹಂಚಲು ಸರಬರಾಜು ಮಾಡಿದ್ದ ಅಕ್ಕಿ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕೊಡಲು ತಂದ ಹಾಲಿನಪುಡಿಯನ್ನು ಕದ್ದು ಅಕ್ರಮ ಕಳ್ಳ ಸಾಗಾಣಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎರಡು ವರ್ಷ ಜೈಲು ಶಿಕ್ಷೆಯಾಗಿದೆ ಅಂತವನನ್ನು ಬಿಜೆಪಿ ಶಾಸಕನನ್ನಾಗಿ ಮಾಡಹೊರಟಿದೆ. ಆದರೆ ಅವರ ಕನಸು ನನಸಾಗುವುದಿಲ್ಲ ಯಾಕೆಂದರೆ ಚಿತ್ತಾಪುರದ ಸ್ವಾಭಿಮಾನಿ ಮತದಾರರು ಅಂತಹ ವ್ಯಕ್ತಿಗೆ ಮನ್ನಣೆ ನೀಡುವುದಿಲ್ಲ ಎಂದರು.ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಡುಗೆ ಅನಿಲ ಹಾಗೂ ಇತರೆ ಧಾನ್ಯಗಳ ಬೆಲೆ ಗಗನಕ್ಕೇರಿದೆ. ಅದಕ್ಕಾಗಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಲು ಕಾಂಗ್ರೆಸ್ ಪಕ್ಷ ಐದು ಪ್ರಮುಖ ಬದುಕುಕಟ್ಟುವ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಖಾತ್ರಿಗೆ ಪಕ್ಷ ಗ್ಯಾರೆಂಟಿ ಕಾರ್ಡ್ ಕೊಡುತ್ತಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, 10 ಕೆಜಿ ಅಕ್ಕಿ ಉಚಿತ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್ ಪ್ರಯಾಣ ಉಚಿತಗೊಳಿಸುತ್ತಿದ್ದೇವೆ ಎಂದರು.

ನನಗೆ ನೀವು ಹೆಚ್ಚಿನ ಮತವಳಿಂದ ಗೆಲ್ಲಿಸಿದರೆ ಚಿತ್ತಾಪುರ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಅನುದಾನ ತಂದು ಅಭಿವೃದ್ದಿ ಗೊಳಿಸಲಿದ್ದೇನೆ. ಈಗಾಗಲೇ ಸಾಕಷ್ಟು ಸಮುದಾಯ ಭವನ, ಶಾಲೆ, ಹಾಸ್ಟೆಲ್, ವಸತಿಶಾಲೆಗಳನ್ನು ನಿರ್ಮಾಣ ಮಾಡಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ದಿಗೆ ಕ್ರಮಕೈಗೊಂಡಿದ್ದೇನೆ. ನೀವು ನನಗೆ ಮತ್ತೆ ಆಶೀರ್ವಾದ ಮಾಡಿ ಶಾಸಕನನ್ನಾಗಿ ಮಾಡಿದರೆ ಮತ್ತಷ್ಟು ಅಭಿವೃದ್ದಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ವೇದಿಕೆಯ ಮೇಲೆ ಭೀಮಣ್ಣ ಸಾಲಿ, ಶಿವಾನಂದ ಪಾಟೀಲ, ನಾಗರೆಡ್ಡಿ ಗೌಡ ಪಾಟೀಲ, ಸಿದ್ದುಗೌಡ ಅಫಜಲ್ಪುರಕರ್,ಪ್ರಕಾಶ ಜೈನ್, ಮಲ್ಲಣ್ಣ ಮಾಲಗತ್ತಿ ಸೇರಿದಂತೆ ಹಲವರಿದ್ದರು.

ಎಸ್‍ಯುಸಿಐ ಪ್ರಚಾರ: ಹನುಮಾನ £ಗರದಲ್ಲಿ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಗಣಪತರಾವ.ಕೆ.ಮಾನೆ ಚುನಾವಣಾ ಪ್ರಚಾರ ಕೈಗೊಂಡರು.ರಾಘವೇಂದ್ರ ಎಮ್.ಜಿ. ಜಗನ್ನಾಥ್ ಎಸ್. ಎಚ್., ರಾಜೇಂದ್ರ ಆತ್ನೂರ್. ಗುಂಡಮ್ಮ ಮಡಿವಾಳ, ಸಿದ್ದು ಚೌಧರಿ, ತುಳಜರಾಮ, ಕೀರ್ತಿ ಎಸ್ ಎಮ್ ಸದಸ್ಯರಾದ ಮಹಾದೇವಿ ಮಾನೆ, ರಘು ಪವಾರ, ಕಿರಣ ಮಾನೆ, ರಮೇಶ ದೇವಕರ್, ಅಜಯ ಗುರಜಾಲಕರ್, ಆನಂದ, ಸಾಕ್ಷಿ ಮಾನೆ, ರಾಧಿಕ ಚೌಧರಿ, ಮಹಾದೇವಿ ಆತ್ನೂರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here