ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಿಂದ ಚು.ಪ್ರಣಾಳಿಕೆ ಬಿಡುಗಡೆ

0
19
  • ಸಮಾಜಮುಖಿ ಸೇವೆಗೆ ಚಂದು ಸಂಕಲ್ಪ
  • 4 ಸಾವಿರ ಉಚಿತ ಕನ್ನಡಕ ವಿತರಣೆ
  • ಶುದ್ಧ ಕುಡಿವ ನೀರಿನ 10 ಘಟಕ ಸ್ಥಾಪನೆ
  • ದುಬೈ ಕಾಲನಿಯಲ್ಲಿ ಕೆರೆ ಅಭಿವೃದ್ಧಿ
  • 28 ಕಡೆ ಉಚಿತ ಆರೋಗ್ಯ ಶಿಬಿರ

ಕಲಬುರಗಿ;  ಉತ್ತರ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸ್ಥಳೀಯವಾಗಿ ಪ್ರಣಾಳಿಕೆ ಸಿದ್ಧಪಡಿಸಲಾಗಿದ್ದು, ಈ ಬಾರಿ ಮತದಾರರು ತಮ್ಮ ಕೈಹಿಡಿದರೆ ನೀಡಿದ ಭರವಸೆ ಪ್ರಾಮಾಣಿಕವಾಗಿ ಈಡೇರಿಸಲಾಗುವುದು ಎಂದು ಕಲಬುರಗಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದು ಪಾಟೀಲï ಹೇಳಿದರು.

ಈ ಕುರಿತು ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನದ 24 ಗಂಟೆ ನಿರಂತರ ಕುಡಿಯುವ ನೀರು ಒದಗಿಸುವುದು. ಕ್ಷೇತ್ರದ ಪ್ರತಿ ವಾರ್ಡ್‍ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಕ್ಷೇತ್ರದ ಎಲ್ಲ ರಸ್ತೆ, ಒಳಚರಂಡಿ ಹಾಗೂ ಬೀದಿ ದೀಪಗಳ ಅಳವಡಿಕೆ, ಕ್ಷೇತ್ರದಲ್ಲಿನ ಉದ್ಯಾನವನಗಳ ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎಂದರು.

Contact Your\'s Advertisement; 9902492681

ಕಳೆದ ಚುನಾವಣೆಯಲ್ಲಿ ತಾವು ಸೋಲು ಅನುಭವಿಸಿದರೂ ಕ್ಷೇತ್ರದ ಜನರ ಪ್ರತಿಯೊಂದು ಸಂಕಷ್ಟಗಳಿಗೂ ಸ್ಪಂದಿಸಲಾಗಿದೆ. ಕ್ಷೇತ್ರದಲ್ಲಿ ಜಾತಿ, ಮತ, ಪಂಥ ಮೀರಿ ಕೆಲಸ ಮಾಡಲಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷದ ಅವಧಿಯಲ್ಲಿ ತಾವು ಮಾಡಿದ ಕೆಲಸ ನೀಡಿ ಜನ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ. -ಚಂದು ಪಾಟೀಲ್, ಬಿಜೆಪಿ ಉತ್ತರ ಕ್ಷೇತ್ರದ ಅಭ್ಯರ್ಥಿ.

ಸರ್ಕಾರದ ಅನುದಾನದಡಿ 500 ಹಾಸಿಗೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶಿP್ಷÀಣ ಮತ್ತು ಉದ್ಯೋಗದಲ್ಲಿ ಸಾಕಷ್ಟು ಹಿಂದುಳಿದಿರುವ ಈ ಕ್ಷೇತ್ರವನ್ನು ಶೈP್ಷÀಣಿಕ ಕೇಂದ್ರವನ್ನಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾಗುವುದು. ಕ್ಷೇತ್ರದಲ್ಲಿರುವ ಎಲ್ಲ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಕಾಲೇಜುಗಳಲ್ಲಿ ಮೂಲಸೌಕರ್ಯ ಒದಗಿಸಿ ಶಿP್ಷÀಣದ ಗುಣಮಟ್ಟದ ಹೆಚ್ಚಿಸುವುದು. ಕಂಪ್ಯೂಟರ್, ಮೊಬೈಲï, ರಿಪೇರಿ, ಬ್ಯೂಟಿಪಾರ್ಲರ್, ಟೇಲರಿಂಗ್ ಹೀಗೆ ನಾನಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಕೇಂದ್ರಗಳನ್ನು ಆರಂಭಿಸಿ ಅವರಿಗೆ ಉದ್ಯೋಗವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಉತ್ತರ ಕ್ಷೇತ್ರದಲ್ಲಿ ಹಿಂದುಳಿದ ಮತ್ತು ಕೊಳಚೆ ಪ್ರದೇಶಗಳಲ್ಲಿರುವ ಎಲ್ಲ ಮನೆಗಳಲ್ಲಿ ಶೌಚಗೃಹ ವ್ಯವಸ್ಥೆ, ಸಾರ್ವಜನಿಕ ಶೌಚಗೃಹ ನಿರ್ಮಿಸಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಕ್ಷೇತ್ರದಲ್ಲಿ ಬರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪ್ರದೇಶಗಳಲ್ಲಿ ಪ್ರತ್ಯೇಕ ಸಮುದಾಯ ಭವನ,  ಪ್ರತಿ ವಾರ್ಡ್‍ನಲ್ಲಿ ಸುಸಜ್ಜಿತ ಡಿಜಿಟಲï ಗ್ರಂಥಾಲಯ ಸ್ಥಾಪನೆ, ಎಲ್ಲ ವಾರ್ಡ್‍ಗಳಲ್ಲಿ ಜನೌಷಧಿ ಕೇಂದ್ರ ಆರಂಭಿಸಲಾಗುವುದು ಎಂದು ವಿವರಿಸಿದರು.

ಕಳೆದ ಕೊವಿಡ್ ಕಾಲಘಟ್ಟದಲ್ಲಿ ಚಂದು ಪಾಟೀಲï ಫೌಂಡೇಷನ್‍ನಿಂದ 100 ಹಾಸಿಗೆ ಆಸ್ಪತ್ರೆ ನಿರ್ಮಿಸಿ, ಉದ್ಘಾಟನೆ ಹಂತಕ್ಕೆ ತಂದು ನಿಲ್ಲಿಸಲಾಗಿದೆ. ಕೆರೆ ಕಾಯಕಲ್ಪಕ್ಕೆ ಜೀವ ನೀಡಲಾಗಿದೆ. ಉತ್ತರ ಕ್ಷೇತ್ರದ ಅಭಿವೃದ್ಧಿಗೆ ಕ್ರೇಡಲ್‍ನ ಸಿಆರ್‍ಎಫ್ ಅನುದಾನದಡಿ 50 ಕೊಳವೆಬಾವಿ ಹಾಕಿಸಲಾಗಿದೆ. ಕೆಕೆಆರ್‍ಡಿಬಿ, ಮಹಾನಗರ ಪಾಲಿಕೆ, ತಮ್ಮ ತಂದೆ ಬಿ.ಜಿ. ಪಾಟೀಲï ಅವರ ವಿಧಾನಪರಿಷತ್ ಸದಸ್ಯರ ಅನುದಾನ ಸೇರಿ ಸುಮಾರು 100 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಉತ್ತರ ಕ್ಷೇತ್ರದ ಚುನಾವಣಾ ಉಸ್ತುವಾರಿ ಗುರುನಾಥ ಜ್ಯಾಂತಿಕರ್, ಉಪ ಮೇಯರ್ ಶಿವಾನಂದ ಪಿಸ್ತಿ, ಬಿಜೆಪಿ ನಗರಾಧ್ಯP್ಷÀ ಸಿz್ದÁಜಿ ಪಾಟೀಲï, ಉತ್ತರ ಮಂಡಲ ಅಧ್ಯಕ್ಷ ಅಶೋಕ ಮಾನಕರ್, ಮುಖಂಡ ಮಲ್ಲಿಕಾರ್ಜುನ ಓಕಳಿ ಇತರರು ಇದ್ದರು.

ಕೊವಿಡ್ ಸಂದರ್ಭದಲ್ಲಿ ಚಂದೂ ಪಾಟೀಲ್ ಪ್ರತಿಷ್ಠಾನದ ಅಡಿ 50 ಸಾವಿರ ಕಿಟ್, ಮಾಸ್ಕ್  ವಿತರಣೆ, 32 ವಾರ್ಡ್‍ಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಕ್ರೆಡಲ್‍ನಿಂದ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕ, 50 ಕೊಳವೆಬಾವಿ ಕೊರೆಯಿಸಲಾಗಿದೆ. ಪ್ರತಿವರ್ಷ ಬಡ, ಪ್ರತಿಭಾವಂತ 10 ವಿದ್ಯಾರ್ಥಿನಿಯರ ಇಂಜಿನಿಯರಿಂಗ್ ಕೋರ್ಸ್‍ನ ಖರ್ಚು ಭರಿಸಲಾಗುತ್ತಿದೆ. ವಾರ್ಡ್ ನಂ. 7ರಲ್ಲಿ 100 ಹಾಸಿಗೆ ಆಸ್ಪತ್ರೆ, ಕೆರೆ ಅಭವೃದ್ಧಿ ಜತೆಗೆ ಬೋಟಿಂಗ್‍ಗೆ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ.

ಉತ್ತರ ಮತಕ್ಷೇತ್ರದಲ್ಲಿ ಸುಸಜ್ಜಿತ ಕ್ರೀಡಾಂಗಣ ಮಾಡುವ ಯೋಜನೆ ಇದ್ದು, ಹುಮನಾಬಾದ್ ರಸ್ತೆ ಟಿವಿ ಸ್ಟೇಷನ್ ಜಾಗಾ ಖಾಲಿಯಾಗಲಿದ್ದು, ಈ ಸ್ಥಳದಲ್ಲಿ ಕ್ರೀಡಾಂಗಣ ಮಾಡುವ ಉz್ದÉೀಶವಿದೆ. ಹಾಗೊಂದು ವೇಳೆ ಈ ಸ್ಥಳ ದೊರೆಯದಿದ್ದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರದ ಜಮೀನಿನಲ್ಲಿ ಸ್ಟೇಡಿಯಂ ಮಾಡಲಾಗುವುದು. ಸರ್ಕಾರದ ಅನುದಾನ ಪಡೆದು ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ದಿಪಡಿಸಲು ಯೋಜಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here