ಕಸಾಪ ಸಮಸ್ತ ಕನ್ನಡಿಗರ ಸ್ವಾಭಿಮಾನದ ಸಂಕೇತ

0
23

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದೆ ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಅಭಿಮತವ್ಯಕ್ತಪಡಿಸಿದರು.

ಅವರು ಕಲಬುರಗಿ ನಗರದ ಎಂ ಎನ್ ದೇಸಾಯಿ ಪದವಿ ಮಹಾ ವಿದ್ಯಾಲಯದಲ್ಲಿ ಕಲಬುರಗಿ ತಾಲೂಕು ಕಸಾಪ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ನಾಡು, ನುಡಿ, ಜಲಕ್ಕೆ ಸಮಸ್ಯೆಯಾದಾಗ ಹೋರಾಡುವ ಸ್ವಾಭಿಮಾನದ ಸಂಸ್ಥೆಯಾಗಿದೆ ಎಂದರು. ಕನ್ನಡ ಸಾಹಿತ್ಯ ಪರ ಚಟುವಟಿಕೆ, ಸಮ್ಮೇಳನಗಳ ಮೂಲಕ ನಾಡು, ನುಡಿ ಜಾಗೃತಿ ಮೂಡಿಸುತ್ತ ಬಂದಿರುವ ಕಸಾಪ ಸಾಧನೆ ಶ್ಲಾಘನೀಯ. ವಚನ, ದಾಸ ಸಾಹಿತ್ಯವು ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ, ಎಂಟು ಜ್ಞಾನ ಪೀಠ ಪ್ರಶಸ್ತಿ ದೊರೆತ ಶ್ರೀಮಂತ ಭಾಷೆಯಾಗಿದೆ, ವಿಶೆಷವಾಗಿ ಕಲಬುರಗಿ ಜಿಲ್ಲೆಯು ಕನ್ನಡಕ್ಕೆ ಮೊಟ್ಟ ಮೊದಲ ಪುಸ್ತಕ ನೀಡಿದ ಪುಣ್ಯ ನೆಲವಾಗಿದೆ ಎಂದರು.

Contact Your\'s Advertisement; 9902492681

ವಿಜ್ಞಾನ ಪರಿಷತ್ ರಾಜ್ಯಧ್ಯಾಕ್ಷ ಗಿರೀಶ ಕಡ್ಲೆವಾಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕನ್ನಡ ಭಾಷೆಯನ್ನು ಸಮೃದ್ಧಿ ಗೊಳಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಶ್ಲಾಘನೀಯ.

ಅಧ್ಯಕ್ಷತೆವಹಿಸಿದ್ದ ಕಲಬುರಗಿ ತಾಲೂಕು ಕಸಾಪ ಅಧ್ಯಕ್ಷ ಗುರುಬಸಪ್ಪ ಸಜ್ಜಶೆಟ್ಟಿ ಮಾತನಾಡಿ ಮುಂಬಬರುವ ದಿನಗಳಲ್ಲಿ ಪ್ರತಿ, ಶಾಲೆ, ಕಾಲೇಜಿಗೊಂದು ಉಪನ್ಯಾಸ, ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಮುಖ್ಯಅತಿಥಗಳಾಗಿ ಸಂಸ್ಥೆಯ ಅಧ್ಯಕ್ಷ ಸಂದೀಪ ದೇಸಾಯಿ, ವಿ ಎಂ ಹಿರೇಮಠ, ಕುಪೇಂದ್ರ ಬರಗಾಲಿ, ಸುನಿತಾ ಮಾಳಗಿ, ಡಿ ಪಿ ಸಜ್ಜನ ಮುಂತಾದವರಿದ್ದರು. ಮಲ್ಲಿಕಾರ್ಜುನ ಇಬ್ರಾಹಿಂಪೂರ ಪ್ರಾಸ್ತಾವಿಕ ಮಾತನಾಡಿದರು. ಕವಿತಾ ಕವಳೆ ನಿರೂಪಿಸಿದರು. ಮೋನಪ್ಪ ಬಡಿಗೇರ ಸ್ವಾಗತಿಸಿದರು. ವಿಜಯಕುಮಾರ ಹಾಬನೂರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here