GUG ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿಯಾಗಿ ಡಾ. ಸುರೇಶ್ ಜಂಗೆ ನೇಮಕ

0
51

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ಮುಖ್ಯ ಗ್ರಂಥಪಾಲಕ ಡಾ. ಸುರೇಶ್ ಜಂಗೆ ಅವರನ್ನು ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿ ಎಂದು ನೇಮಕ ಮಾಡಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.

ಡಾ. ಸುರೇಶ ಜಂಗೆ ಅವರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಬಹು ದೊಡ್ಡ ವಾಗ್ಮಿಗಳು ಆಗಿದ್ದಾರೆ. ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ವಿಷಯ ತಜ್ಞರು ಮತ್ತು ಸಂಶೋಧಕರು ಆಗಿದ್ದಾರೆ. ಹೀಗಾಗಿ ಅವರ ಅಪಾರವಾದ ಜ್ಞಾನವನ್ನು ಗುರುತಿಸಿ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಗಿದೆ.

Contact Your\'s Advertisement; 9902492681

ಹೊಸ ಸಂಯೋಜನಾಧಿಕಾರಿಗಳಿಗೆ ಪತ್ರಿಕೋದ್ಯಮ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಜಕುಮಾರ ಎಂ. ದಣ್ಣೂರ, ಡಾ. ಅಶೋಕ ದೊಡ್ಡಮನಿ, ಡಾ. ವೆಂಕಟೇಶ, ರೀತು ತಲವಾರ ಸ್ವಾಗತ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here