ಕಲಬುರಗಿ : ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶ ಬಿಸಿಲಿಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಇಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ, ಪ್ರವಾಹ ಪರಿಸ್ಥಿತಿ ಉಂಟಾಗುತ್ತಿರುವುದರಿಂದ ಬಿಸಿಲು ಮತ್ತು ಮಳೆ ಸಮತೋಲನವಾಗಿ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡ ಬೆಳಸಬೇಕು ಎಂದು ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಖನಿಜ್ ಫಾತಿಮಾ ಅವರು ಕರೆ ನೀಡಿದರು.
ಗುರುವಾರ ಕಲಬುರಗಿ ನಗರದ ಮನ್ನೂರ ಆಸ್ಪತ್ರೆಯ ಮುಂಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮನ್ನೂರ ಆಸ್ಪತ್ರೆ ಹಾಗೂ ರೆಡ್ ಏಫ್ ಎಮ್ 93.5 ಸಹಯೋಗದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ ಅದೇ ರೀತಿ ಗಿಡ ನೆಟ್ಟ ಸಸಿಯ ಸಂರಕ್ಷಿಸುವತ್ತಲು ಕಾಳಜಿ ವಹಿಸಬೇಕು ಪರಿಸರ ಸಂಕರ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ಪೋಸ್ಟ್ ಮಾಡುವ ಬದಲು ಗಿಡ ನೆಟ್ಟು ಅದರ ಫೋಟೊಗಳನ್ನು ಹೆಮ್ಮೆಯಿಂದ ಪೋಸ್ಟ್ ಮಾಡಿ ಪರಿಸರ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.
ಮನ್ನೂರ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮನ್ನೂರ ಮಾತನಾಡಿ ಭೂಮಿ ಆಸ್ತಿ, ನೀರು ಸಂಪತ್ತು ಇದ್ದಂತೆ. ಇದರ ಸಂರಕ್ಷಣೆಗೆ ಗಿಡ ಮರಗಳನ್ನು ಬೆಳೆಸಬೇಕು ಪ್ರತಿಯೊಬ್ಬರು ಗಿಡ-ಮರಗಳನ್ನು ಬೆಳೆಸುವ ಮನೋಭಾವ ಹೊಂದಬೇಕು. ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸುತ್ತಮುತ್ತಲ್ಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ತ್ಯಾಜ್ಯ, ವಾಯು ಮಾಲಿನ್ಯವು ಮಾನವನ ವಿವಿಧ ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಭವಾನಿಸಿಂಗ ಠಾಕೂರ್,ಡಿ .ಶಿವಲಿಂಗಪ್ಪ,ಫರಾಜುಲ ಇಸ್ಲಾಂ, ಮಹಾನಗರ ಪಾಲಿಕೆ ಅಧಿಕಾರಿ ಬಾಬುರಾವ ,ಆರ್ ಜೆ ವಾಣಿಶ್ರೀ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇತ್ತೀಚೆಗೆ ಸಾರ್ವಜನಿಕರು ಹುಟ್ಟು ಹಬ್ಬ ಆಚರಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಹೀಗಾಗಿ ಜನ್ಮ ದಿನದಂದು ಗಿಡ ನೆಡೆಯುವ ಮೂಲಕ ಈ ಭಾಗದಲ್ಲಿ ಬಿಸಿಲಿನ ಪ್ರಮಾಣ ತಗ್ಗಿಸಬಹುದಾಗಿದೆ. -ಡಾ. ಫಾರುಕ್ ಮನ್ನೂರ, ಮನ್ನೂರ ಆಸ್ಪತ್ರೆಯ ಮುಖ್ಯಸ್ಥ.