ಸುರಪುರ:ಬೈಕ್ ಟ್ಯಾಂಕ್ ಕವರಲ್ಲಿದ್ದ 1.50 ಲಕ್ಷ ಹಣ ಎಗರಿಸಿದ ಕಳ್ಳರು

0
11

ಸುರಪುರ: ನಗರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ದೇವಾಪುರ ಗ್ರಾಮದ ಪ್ರಕಾಶ ಕನಗೊಂಡ ಎನ್ನುವ ವ್ಯಕ್ತಿ 1.50 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ತನ್ನ ಬೈಕ್‍ನ ಟ್ಯಾಂಕ್ ಕವರಲ್ಲಿಟ್ಟುಕೊಂಡು ಮರಳಿ ಗ್ರಾಮಕ್ಕೆ ಹೋಗುವಾದ ದಾರಿಯಲ್ಲಿ ಮೊಬೈಲ್‍ಗೆ ಪದೆ ಪದೆ ಮೆಸೆಜ್‍ಗಳು ಬಂದಿದ್ದರಿಂದ ನೋಡಲು ಜೇಬಲ್ಲಿದ್ದ ಮೊಬೈಲ್ ಹೊರಕ್ಕೆ ತೆಗೆಯುವಾಗ ಅದೇ ಜೇಬಲ್ಲಿದ್ದ ಮತ್ತೊಂದು ಚಿಕ್ಕ ಮೊಬೈಲ್ ಕೆಳಗೆ ಬಿದ್ದಿದ್ದು,ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಬೈಕ್ ನಿಲ್ಲಿಸಿ ಹೋದಾಗ ಬೈಕ್ ಟ್ಯಾಂಕ್ ಕವರಲ್ಲಿದ್ದ ಹಣದ ಚೀಲ ಎಗರಿಸಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.ನಂತರ ಹಣಕ್ಕಾಗಿ ಬ್ಯಾಂಕ್ ಶಾಖೆಗೆ ಬಂದು ಮತ್ತಿತರೆ ಕಡೆಗಳಲ್ಲಿ ಹುಡುಕಾಡಿ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರಿಗಾಗಿ ಶೋಧ ಆರಂಭಿಸಿದ್ದಾರೆ.

ಒಂದು ವಾರದಲ್ಲಿ ಎರಡು ಕಳ್ಳತನ ಪ್ರಕರಣ:ಕಳೆದ ಜೂನ್ 12ನೇ ತಾರಿಖು ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದ ಬಳಿಯ ಬೇಕರಿಯಲ್ಲಿ ಮುಷ್ಠಳ್ಳಿ ಗ್ರಾಮದ ಕೃಷ್ಣಾರಡ್ಡಿ ಎನ್ನುವ ವ್ಯಕ್ತಿ ಬೈಕ್‍ನ ಸೈಡ್ ಬಾಕ್ಸ್‍ಲ್ಲಿ ಬ್ಯಾಂಕ್‍ನಿಂದ ಹಣ ಮತ್ತು ನಗದು ಡ್ರಾ ಮಾಡಿಕೊಂಡು ಇಟ್ಟಿದ್ದ 6 ತೊಲ ಬಂಗಾರ ಮತ್ತು 2 ಲಕ್ಷ ರೂಪಾಯಿಯನ್ನು ಕಳ್ಳರು ಕದ್ದಿದ್ದರು,ಈ ಘಟನೆ ಸಿ.ಸಿ ಟಿ.ವಿಯಲ್ಲಿ ಸೆರೆಯಾಗಿತ್ತು.ಈ ಘಟನೆ ನಡೆದು ಒಂದು ಒಂದೆ ವಾರದಲ್ಲಿ ಈಗ ಮತ್ತೊಂದು ಪ್ರಕರಣ ನಡೆದಿದೆ.

Contact Your\'s Advertisement; 9902492681

ಪೊಲೀಸರಿಂದ ನಗರದಲ್ಲಿ ಜಾಗೃತಿ ಅಭಿಯಾನ:ಪದೆ ಪದೆ ಬೈಕ್‍ಲ್ಲಿನ ಹಣ ಕಳ್ಳತನ ಪ್ರಕರಣಗಳು ಸಂಭವಿಸುತ್ತಿರುವುದರಿಂದ ಎಚ್ಚೆತ್ತ ಪೊಲೀಸರು ನಗರದಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.ನಗರದ ಎಲ್ಲಾ ಬ್ಯಾಂಕ್ ಶಾಖೆಗಳ ಮುಂದೆ ಆಟೋದಲ್ಲಿ ಧ್ವನಿ ವರ್ಧಕ ಅಳವಡಿಸಿಕೊಂಡು ಪಿಎಸ್‍ಯ ಸಿದ್ರಾಮಪ್ಪ ಮತ್ತಿತರೆ ಸಿಬ್ಬಂದಿಗಳು ಭಾಗವಹಿಸಿ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.ನಗರದಲ್ಲಿ ಪದೆ ಪದೆ ಕಳ್ಳತನ ಪ್ರಕರಣಗಳು ಜರುಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಕಳ್ಳರ ಬಗ್ಗೆ ಆತಂಕ ಹೆಚ್ಚಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here