ಪ್ರಗತಿಪರ ಶಿಕ್ಷಕರ ವೇದಿಕೆ ವತಿಯಿಂದ ಲೇಖನ ಸಾಮಗ್ರಿಗಳ ವಿತರಣೆ

0
32

ಹಗರಿಬೊಮ್ಮನಹಳ್ಳಿ: ತಾಲೂಕಿನ ಪ್ರಗತಿಪರ ಶಿಕ್ಷಕರ ವೇದಿಕೆ ವತಿಯಿಂದ ಮರಬ್ಬಿಹಾಳು ವಲಯದ ಸ.ಕಿ.ಪ್ರಾ ಶಾಲೆ ಹೊಸ ಆನಂದ ದೇವನಹಳ್ಳಿ ಶಾಲೆಯ ಮಕ್ಕಳಿಗೆ ಲೇಖನ ಸಾಮಗ್ರಿಗಳಾದ ಮಗ್ಗಿ ಪುಸ್ತಕ, ನೋಟ್ ಪುಸ್ತಕ, ಪೆನ್ನು ,ಪೆನ್ಸಿಲ್ ಗಳನ್ನು ವಿತರಿಸಲಾಯಿತು.

ಪ್ರಗತಿಪರ ಶಿಕ್ಷಕರ ವೇದಿಕೆಯ ಮುಖಂಡರಾದ ಕೆ.ಹುಸೇನ್ ಸಾಬ್ ಪ್ರಸ್ತಾವಿಕವಾಗಿ ಮಾತನಾಡಿ ಪ್ರಗತಿಪರ ಶಿಕ್ಷಕರ ವೇದಿಕೆಯಿಂದ ಈ ವರ್ಷ ತಾಲೂಕಿನ 13 ವಲಯಲ್ಲಿ ಬರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಲೇಖನ ಸಾಮಗ್ರಿಗಳನ್ನ ವಿತರಿಸುವಂತಹ ಕೆಲಸವನ್ನು ಪ್ರಗತಿಪರ ಶಿಕ್ಷಕರ ವೇದಿಕೆ ಮಾಡುತ್ತದೆ ಎಂದು ತಿಳಿಸಿದರು.

Contact Your\'s Advertisement; 9902492681

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಸಿ ಆನಂದ್ ಮಾತನಾಡಿ ಪ್ರಗತಿಪರ ಶಿಕ್ಷಕರ ವೇದಿಕೆ ಸರ್ಕಾರಿ ಶಾಲೆಗಳಿಗೆ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಇದರಿಂದ ಸರ್ಕಾರಿ ಶಾಲೆಗಳ ಸಬಲೀಕರಣವಾಗುತ್ತದೆ. ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ , ಪೆನ್, ಪೆನ್ಸಿಲ್ ಹಾಗೂ ವಿತರಿಸುವುದರಿಂದ ಓದಿನಲ್ಲಿ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವುದಕ್ಕೆ ಸಹಾಯವಾಗುತ್ತದೆ ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಎಂ. ಎಸ್ ಪ್ರಭಾಕರ್ ಅವರು ಮಾತಾನಾಡಿ ಸರಕಾರಿ ಶಾಲೆಗಳಲ್ಲಿ ಬಡವರ, ರೈತರ ,ಕೂಲಿ ಕಾರ್ಮಿಕರ, ಹಾಗೂ ಮಧ್ಯಮ ವರ್ಗದವರ ಮಕ್ಕಳೇ ಕಲಿಯುವುದರಿಂದ ವಿದ್ಯಾರ್ಥಿಗಳಿಗೆ ಬೇಕಾಗುವ ನೋಟ್ ಪುಸ್ತಕ ಸೇರಿ ಇತರೆ ಪೂರಕ ವಸ್ತುಗಳನ್ನು ಪೂರೈಸಿದರೆ ಶಾಲಾ ಅಭಿವೃದ್ಧಿಗೆ ಕೈ ಜೋಡಿಸಂತಾಗುತ್ತದೆ ಎಂದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಎಲ್.ಡಿ ರವಿನಾಯ್ಕ ಅವರು ಮಾತಾನಾಡಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ಅವು ಬದುಕನ್ನೇ ಬೆಳಗುತ್ತವೆ ಪುಸ್ತಕಗಳ ಬಳಕೆ ಹಾಗೂ ರಕ್ಷಣೆ ಅತಿ ಮುಖ್ಯವಾಗಿದೆ ಎಂದರು ದೈಹಿಕ ಶಿಕ್ಷಣ ಪರೀವೀಕ್ಷಕರಾದ ಕೊಟ್ರೇಶ್ , ಎ.ಸೋಮನಗೌಡ ಮಾತಾನಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಜೆ. ಹನುಮರೆಡ್ಡಿ , ಸಿ.ರವಿ ಮಾತಾನಾಡಿದರು. ಹೊಸ ಆನಂದ ದೇವನಹಳ್ಳಿ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಶಾಂತಮ್ಮ ಶಿಕ್ಷಕಿಯಾದ ಶಿಲ್ಪಾ , ಬಿ ಆರ್ ಪಿ ಮಂಜುನಾಥ , ಸಿಆರ್ಪಿ ಗುರುರಾಜರಾವ್, ಪ್ರಗತಿಪರ ಶಿಕ್ಷಕರ ವೇದಿಕೆ ಮುಖಂಡರಾದ ಕೆ .ಮಲ್ಲಿಕಾರ್ಜುನ, ಬಿ. ಚಂದ್ರಪ್ಪ , ಹೇಮಂತ್, ಸಿ. ಹನುಮಕ್ಕ ,ಹೆಚ್ ಕೊಟ್ರಪ್ಪ, ಮಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ನಾಗರಾಜ ತಂಬ್ರಹಳ್ಳಿ, ದಲಿತ ವಿದ್ಯಾರ್ಥಿ ಪರಿಷತ್ನ ಅಧ್ಯಕ್ಷರಾದ ಗೌತಮ್ ಹಾಜರಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿದರು. ಟಿ. ಸೋಮಶೇಖರ ಸ್ವಾಗತಿಸಿದರು ಶ್ರೀನಾಥ್ ಆಚಾರ್ ನಿರೂಪಿಸಿದರು. ಎಲ್. ನೇಮ್ಯಾನಾಯ್ಕ ವಂದಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here