ಲಿಂಗಸ್ಗೂರು: ಪಟ್ಟಣದ ಬಸ್ ನಿಲ್ದಾಣದಲ್ಲಿ ಹಟ್ಟಿ ಮಾರ್ಗದ ಹಾಗೂ ಹಟ್ಟಿ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಬಸ್ಸುಗಳು ಇಲ್ಲದೆ ಸುಮಾರು 300 ಪ್ರಯಾಣಿಕರು ಮೂರು ತಾಸು ಕಾಯ್ದು ಹೈರಾಣಾಗಿ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಗೇಟ್ ಬಂದು ಮಾಡಿ ಬೇರೆ ಮಾರ್ಗದ ಬಸ್ಸುಗಳು ಹೊರಹೋಗದಂತೆ ನಿಲ್ಲಿಸಿ ಆಕ್ರೋಶ ಹೊರ ಹಾಕಿದ ಘಟನೆ ಇಂದು ರಾತ್ರಿ 9:00 ಗಂಟೆ ಸುಮಾರಿಗೆ ನಡೆದಿದೆ. ನ
ಈ ಕುರಿತು ಕಂಟ್ರೋಲರ್ ಗಳಿಗೆ ಹೇಳಿದಾಗಲೂ ಬಸ್ಸುಗಳು ಕೆಟ್ಟು ನಿಂತಿವೆ ರಿಪೇರಿ ಆದಮೇಲೆ ಬರುತ್ತದೆ ಎಂದು ಸಬೂ ಹೇಳುತ್ತಾ ಕಾಲ ಹರಣ ಮಾಡಿ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಉಂಟು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಹಾಗೂ ನಗರ ಘಟಕದ ಮುಖಂಡ ವಿಶ್ವ ಅಂಗಡಿ ಮಧ್ಯಪ್ರವೇಶ ಮಾಡಿ ಡಿಪೋ ಮ್ಯಾನೇಜರ್ ಅವರಿಗೆ ಫೋನ್ ಕಾಲ್ ಮೂಲಕ ತರಾಟೆಗೆ ತೆಗೆದುಕೊಂಡರು. ಆಗ ಒತ್ತಡಕ್ಕೆ ಮಣಿದ ಡಿಪೋ ಮ್ಯಾನೇಜರ್ ಗುಡದನಾಳ ಮಾರ್ಗವಾಗಿ ಹಾಗೂ ಯರಡೋಣ ಮಾರ್ಗವಾಗಿ ಎರಡು ಬಸ್ ಬಿಟ್ಟರು. ಕಾದು ಕಾದು ಸುಸ್ತಾಗಿದ್ದ ಪ್ರಯಾಣಿಕರು ಬಸ್ ಹತ್ತಿ ನಿಟ್ಟುಸಿರು ಬಿಟ್ಟರು. ವಿಕೋಪಕ್ಕೆ ತಿರುಗುತ್ತಿದ್ದ ಪರಿಸ್ಥಿತಿ ತಿಳಿಗೊಳಿಸಲಾಯಿತು. ಮೂರು ನಾಲ್ಕು ಗಂಟೆ ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಲಿಸುವ ಪರಿಸ್ಥಿತಿಗೆ ಕಾರಣವಾದ ಕೆಎಸ್ ಆರ್ ಟಿಸಿ ಇಲಾಖೆ ಹಾಗೂ ಜನಪ್ರತಿನಿಧಿಗಳ ಜನವಿರೋಧಿ ನೀತಿಗೆ ಹಿಡಿ ಶಾಪ ಹಾಕಿದರು.
ತಾಲೂಕಿನಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುತ್ತಿದ್ದು, ಇತ್ತೀಚೆಗೆ ನಾನು ಜನರ ಪರ ದುಡಿಯುತ್ತೇನೆ ಎಂದು ಬೀಗಿ ಶಾಸಕರಾದ ಮಾನಪ್ಪ ವಜ್ಜಲ್ ಮೌನಕ್ಕೆ ಶರಣಾಗಿದ್ದು, ಶಾಸಕರ ಈ ಜನವಿರೋಧಿ ನೀತಿಯನ್ನು ಎಸ್ಎಫ್ಐ ಖಂಡಿಸುತ್ತದೆ. ಶಾಸಕರು ಕ್ಷೇತ್ರದಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆಗೆ ಮುಂದಾಗದಿದ್ದರೆ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ನಡೆದಲಾಗುವುದು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಎಚ್ಚರಿಸಿದರು.