ಕಲಬುರಗಿ ಕಸಾಪ: `ವಿದ್ಯಾರ್ಥಿಗಳಿಗೆ ವಿವೇಕ ದರ್ಶನ’ ವಿಶೇಷ ಕಾರ್ಯಕ್ರಮ

0
57

ಕಲಬುರಗಿ: ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಪಡೆಡುಕೊಳ್ಳಬೇಕಾದರೆ ಕಠಿಣವಾದ ಪರಿಶ್ರಮ ಹಾಗೂ ಆತ್ಮವಿಶ್ವಾಸ ಬಹಳ ಮುಖ್ಯವಾಗಿದೆ. ಪ್ರತಿಭೆಗೆ ನಗರ ಮತ್ತು ಹಳ್ಳಿ ಎಂಬು ಯಾವುದು ವ್ಯತ್ಯಾಸ ಇರುವುದಿಲ್ಲ. ಅತೀ ಹೆಚ್ಚು ಪ್ರತಿಭಾನ್ವಿತರು ಇರುವುದು ಗ್ರಾಮೀಣ ಪ್ರದೇಶದಲ್ಲಿಯೇ ಎಂದು ಹಾಸ್ಯ ಕಲಾವಿದ ಗುಂಡಣ್ಣಾ ಡಿಗ್ಗಿ ಅಭಿಪ್ರಾಯಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ `ವಿದ್ಯಾರ್ಥಿಗಳಿಗೆ ವಿವೇಕ ದರ್ಶನ’ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜತೆಗೆ ಸಹ ಪಠ್ಯ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಶ್ರೇಯಸ್ಸನ್ನು ಕಾಣುವಂತಾಗಬೇಕು ಎಂದರು. ತಮ್ಮ ದೈನಂದಿನ ವಿದ್ಯಾಭ್ಯಾಸದ ಜತೆಗೆ ಸಾಹಿತ್ಯಾಸ್ಕತಿಯೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಎಸ್ ಸಜ್ಜನಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಿ ಬರಹದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪರಿಷತ್ತು ಉತ್ತೇಜನ ಕೊಡುವ ಕಾರ್ಯ ಇಂಥ ಕಾರ್ಯಕ್ರಮಗಳ ಮೂಲಕ ಮಾಡಲಾಗುತ್ತಿದೆ ಎಂದರು.

ಹೊನ್ನಕಿರಣಗಿಯ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಬಿರಾದಾರ, ಜಿಲ್ಲಾ ಕಸಾಪ ದ ಸಹ ಕಾರ್ಯದರ್ಶಿ ರಾಜೇಂದ್ರ ಮಾಡಬೂಳ, ಗ್ರಂಥಾಲಯ ಇಲಾಖೆಯ ಪದ್ಮಾವತಿ ನಾಯಕ, ಬಸ್ವಂತರಾಯ ಕೋಳಕೂರ, ಹೆಚ್.ಎಸ್.ಬರಗಾಲಿ ವೇದಿಕೆ ಮೇಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here