ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಕ್ಕೆ ಚಾಲನೆ

0
33

ಕಲಬುರಗಿ: ಅನನ್ಯ ಸ್ನಾತಕ ಮತ್ತು ಸ್ನಾತಕೋತ್ತರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಅಡಿಯಲ್ಲಿ ಅನನ್ಯಕೋಚಿಂಗ್ ಉಚಿತ ತರಬೇತಿ ಕೇಂದ್ರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದವನ್ನು ಪಿ.ಎಸ್.ಐ ಯಶೋಧಾ ಕಟಕೆ ಇವರು ಉದ್ಘಾಟಿಸಿ ಮಾತನಾಡುತ್ತಾ ಶಿಸ್ತು, ಕಾನೂನಿನ ನಿಯಮ ಪರಿಪಾಲನೆಯನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಬಲ್ಲಿದ್ ಇವರು ಮಾತನಾಡಿ ಸಮಯ ಶಿಕ್ಷಣ, ಬೋಧನಾಕಲಿಕೆಯನ್ನು ಪ್ರಾಯೋಗಿಕವಾಗಿ, ಕೌಶಲ್ಯಭರಿತವಾಗಿ ಪ್ರಯತ್ನ ಶೀಲರಾಗಿ ವ್ಯಕ್ತಿಯ ವಿಕಸನ ಮಾಡಿಕೊಳ್ಳಬೇಕಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಕ ಮಾತುಗಳನ್ನು ವ್ಯಕ್ತ ಪಡಿಸಿದರು.

Contact Your\'s Advertisement; 9902492681

 

ಮುಖ್ಯಅತಿಥಿಯಾಗಿ ಶಿವರಾಯ ಖೊಂಬಿನ್ (ಜೇಸ್ಕಾಂ) ಇವರು ವಿದ್ಯಾರ್ಥಿಗಳಲ್ಲಿ ಸಾಮಥ್ರ್ಯ, ಅರ್ಹತೆ ಶಿಕ್ಷಣದ ಮೂಲಕ ಸಾಧ್ಯವೆಂಬ ವಿಚಾರವನ್ನು ವ್ಯಕ್ತಪಡಿಸಿದರು.

ಕಾಲೇಜಿನ ಅಧ್ಯಕ್ಷೆ ಸುಷ್ಮಾವತಿಎಸ್. ಹೊನ್ನಗೆಜ್ಜಿ ಮಾತನಾಡುತ್ತಾ ಸ್ತ್ರೀ ಶಿಕ್ಷಣ, ಅವರ ಮೀಸಲಾತಿಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಶರಣು ಹೊನ್ನಗೆಜ್ಜಿ ಮಾತನಾಡಿ ಈ ತರಬೇತಿಕೇಂದ್ರದ ದಿಕ್ಸೂಚಿಯಾಗಿದ್ದು, ಬಡತನದ ನಡುವೆ ಶಿಕ್ಷಣವನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಉಚಿತಕಂಪ್ಯೂಟರ ಹಾಗೂ ಕೋಚಿಂಗ್, ಸ್ಪೊಕನ್ ಇಂಗ್ಲೀಷ ತರಬೇತಿ ಕೊಡುವುದರ ಮೂಲಕವಾಗಿ ವಿದ್ಯಾರ್ಥಿಗಳಿಗೆ ಸುವರ್ಣಅವಕಾಶವನ್ನು ಮಾಡಿಕೊಟ್ಟು ಸ್ಪೂರ್ತಿದಾಯಕ ಮಾತುಗಳಿಂದ ಪ್ರೇರಣೆಯನ್ನು ನೀಡಿದರು.
ಕಾಲೇಜಿನಎಲ್ಲಾ ಬೋದಕ ಮತ್ತು ಬೋದಕೇತರ ಸಿಬ್ಬಂದಿ ವಿದ್ಯಾರ್ಥಿ ಬಳಗ ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here