ಗುಳೆ ತಡೆಯಲು ಜನಶಕ್ತಿ ವೇದಿಕೆ ಆಗ್ರಹ

0
37

ಯಾದಗಿರಿ: ನೂತನ ಜಿಲ್ಲೆಯಾಗಿ ಯಾದಗಿರಿ ದಶಕಗಳೇ ಕಳೆದರು ಜಿಲ್ಲೆಯ ಜನರ ಗುಳೆ ತಪ್ಪಿಲ್ಲಾ ಕಡೆಚೂರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಠಿಸಬೇಕೆಂದು ಸುವರ್ಣ ಕರ್ನಾಟ ಜನಶಕ್ತಿ ವೇದಿಕೆ ಜಿಲ್ಲಾದ್ಯಕ್ಷ ರಾಜಶೇಖರ ಎದುರಮನಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ಕಲಬುರಗಿಯಿಂದ ಯಾದಗಿರಿಯನ್ನು ಬೆಪರ್ಡಸಿ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಜಿಲ್ಲೆಯ ಕಡೆಚೂರ ಗ್ರಾಮದಲ್ಲಿ ೩೩೦೦ ಎಕರೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಜಮೀನನ್ನು ವಶಪಡಿಸಿಕೊಂಡರು ಯಾವುದೇ ಕಂಪನಿಗಳು ಮುಂದೆ ಬಾರದೇ ಇರುವದರಿಂದ ಬೇರೆ ರಾಜ್ಯಗಳಿಗೆ ಗುಳೆ ಹೋಗುವದು ತಪ್ಪಿಲ್ಲಾ ಇದರಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಿದೆ. ಕೂಡಲೇ ತಾವುಗಳು ಜಿಲ್ಲೆಯಲ್ಲಿ ಕಂಪನಿಗಳನ್ನು ಸ್ಥಾಪಿಸುವದರ ಮೂಲಕ ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಠಸಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮೈಲಾರಪ್ಪ ಜಾಗಿರದಾರ ಭಾಗಪ್ಪ ಮೂಕನೋರ,ಡಿ ನಾರಾಯಣ,ಕಾಸಪ್ಪ ಗ್ಯಾಂಗ್ ಹಜ್ರತ್ ಅಲಿ ಚಿನ್ನಾಕರ ಶರಣಪ್ಪ ಅಂಗಡಿ ಮಲ್ಲಪ್ಪ ದೊಡ್ಡಪನೋರ,ಮಲ್ಲು ಮಡಿವಾಳ ರಾಘು ಬಿದರಕರ್,ಮರೆಪ್ಪ ರಾಮದಾಸ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here