ದಂತಗಳ ಅರೋಗ್ಯ ನಿರ್ಲಕ್ಷ್ಯ ಸಲ್ಲದು: ಪ್ರೊ. ಅಲಿ ರಜಾ ಮೂಸ್ವಿ

0
79

ಕಲಬುರಗಿ: ಆರೋಗ್ಯಕರ ದಂತಗಳು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಜನತೆ ಯಾವ ಕಾರಣಕ್ಕೂ ದಂತ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂದು ಕೆಬಿಎನ್ ವಿವಿಯ ಉಪ ಕುಲಪತಿ ಪ್ರೊ. ಅಲಿ ರಜಾ ಮೂಸ್ವಿ ಅಭಿಪ್ರಾಯಪಟ್ಟರು.

ಖಾಜಾ ಬಂದೇನವಾಜ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ವೈದ್ಯಕೀಯ ನಿಕಾಯದ ದಂತ ಶಾಸ್ತ್ರ ವಿಭಾಗದ ವತಿಯಿಂದ ಶನಿವಾರ ಏರ್ಪಡಿಸಿದ್ದ “ಮ್ಯಾಕ್ಸಿಲೊ ಮುಖದ ಶಸ್ತ್ರಚಿಕಿತ್ಸೆ- ಪ್ರಸ್ತುತ ಮತ್ತು ಭವಿಷ್ಯ” ಕುರಿತು ಮುಂದುವರಿದ ವೃತ್ತಿಪರ ಅಭಿವೃದ್ಧಿ (ಸಿಪಿಡಿ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಇತ್ತೀಚಿನ ದಿನಗಳಲ್ಲಿ ಮ್ಯಾಕ್ಸಿಲೊಫೇಶಿಯಲ್ ನಿಂದ ದಂತ, ವಸಡುಗಳ ಸಮಸ್ಯೆಗಳಿಗೆ ಪರಿಹಾರ ನೀಡುವುದಲ್ಲದೆ ಮುಖದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳುಬಹುದು ಎಂದ ಅವರು ಕೆಬಿಎನ್ ವಿವಿಯು 8 ನಿಕಾಯ ಯಗಳನ್ನು ಹೊಂದಿದ್ದು, 32 ವಿಭಾಗಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ನಾವೆಲ್ಲ ಒಟ್ಟಾಗಿ ವಿಶ್ವ ವಿದ್ಯಾಲಯದ ಪ್ರಗತಿಗಾಗಿ ಶ್ರಮಿಸೋಣ ಎಂದು ಹೇಳಿದರು.

ವಿವಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಲಸಚಿವೆ ಡಾ ರುಕ್ಸರ್ ಫಾತಿಮಾ, ಮೆಡಿಕಲ್ ಡೀನ್ ಡಾ ಸಿದ್ದೇಶ್, ಡಾ. ಸಿದ್ದಲಿಂಗ ಉಪಸ್ಥಿತರಿದ್ದರು. ಸುಮಾರು 300 ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.

ಜನಾಬ ಹಫೀಜ್ ಮೊಹಮ್ಮದ ಪ್ರಾರ್ಥಿಸಿದರು. ದಂತ ವಿಭಾಗದ ಮುಖ್ಯಸ್ಥ ಡಾ ಮೊಹಮ್ಮದ್ ಅಲಿ ಪರಿಚಯಿಸಿದರೆ, ಮೆಡಿಕಲ್ ಡೀನ್ ಡಾ ಸಿದ್ದೇಶ್ ಸ್ವಾಗತಿಸಿದರು.ಡಾ. ಜೂಹಿ ಶಬ್ಬನಮ ವಂದಿಸಿದರು. ಡಾ ಇರ್ಫಾನ ಅಲಿ ನಿರೂಪಿಸಿದರು.

ಡಾ. ನಾಗಾರ್ಜುನ್ ದಾಸ್ ಪಕ್ಷಿಗಳು ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿಯ ಕಣ್ಣಿನ ನೋಟ,
ಡಾ ನೀಲಕುಮಾರ್ ಹಲ್ಲೂರ್ TMJ ಶಸ್ತ್ರಚಿಕಿತ್ಸೆಗಳು ಆರ್ತ್ರೋಸ್ಕೊಪಿ ಮತ್ತು ಒಟ್ಟು ದವಡೆಯ ಪುನನಿರ್ಮಾಣ,
ಡಾ ಉಡುಪಿ ಕೃಷ್ಣ ಜೋಶಿ ಸಂಕೀರ್ಣ ಮಧ್ಯದ ಆಘಾತದ ನಿರ್ವಹಣೆ ನನ್ನ 25 ವರ್ಷಗಳ ಅನುಭವ, ಪ್ರೊ ಡಾ ಡೇವಿಡ್ ತಾವುರೊ ಆರ್ಥೋಗ್ನಾಥಿಕ್ ಮತ್ತು ಕ್ರಾನಿಯೊಫೇಶಿಯಲ್ ಶಸ್ತ್ರಚಿಕಿತ್ಸೆ, ಡಾ. ಗಿರೀಶ್ ಗೌಡ ಆಘಾತ ಮತ್ತು ಪ್ರಾಣಿಗಳ ದಾಳಿಯ ನಂತರ ಮೃದು ಅಂಗಾಂಶದ ಗಾಯಗಳ ನಿರ್ವಹಣೆಯಲ್ಲಿ ಸವಾಲುಗಳು, ಡಾ ಶ್ರೀನಾಥ್ ಎನ್ ಮ್ಯಾಕ್ಸಿಲೊಫೇಶಿಯಲ್ ಪ್ರದೇಶದ ಜನ್ಮಜಾತ ವೈಪರೀತ್ಯಗಳ ನಿರ್ವಹಣೆ ವಿಷಯ ಮಂಡಿಸಿದರು.

ಡಾ ಜಮಾ ಮೂಸ್ವಿ, ಡಾ ಡೇವಿಡ್ ತಾವುರೊ, ಡಾ ಶೀನಾಥ್ ಎನ್, ಡಾ ಗಿರೀಶ್ ಗೌಡ, ಡಾ ಮೊಯಿನುದ್ದಿನ್, ಡಾ ಸಚಿನ್ ಶಾಹ್, ಡಾ ಮೊಹ್ಮದ್ ಇಬ್ರಾಹಿಂ, ಡಾ ರಾಜೀವ್ ರೆಡ್ಡಿ ಒಳಗೊಂಡ ಪ್ಯಾನೆಲ್ ಚರ್ಚೆ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here