ಕಲಬುರಗಿ; ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 77ನೇ ಸ್ವಾತಂತ್ರ ದಿನಾಚರಣೆಯನ್ನು ಡಾ.ರಾಜಶೇಖರ ಮಾಲಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ನಂತರ ಮಾತನಾಡಿದ ಅವರು 77ನೇ ಸ್ವಾತಂತ್ರ ದಿನಾಚರಣೆಯ ಶುಭ ಕೋರುತ್ತ ಅವರು ನಾವು ಸ್ವಾತಂತ್ರವಾಗಿ ಬದಕಲು ಸಾವಿರಾರು ಸೈನಿಕರು ಪ್ರಾಣವನ್ನು ಅರ್ಪಿಸಿದರು ಹಾಗೆ ನಮ್ಮ ಆರೋಗ್ಯ ಇಲಾಖೆಯವರು ತಮ್ಮ ಪ್ರಾಣದ ಹಂಗನ್ನು ತೊರೆದು ಸಾರ್ವಜನಿಕರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಅಗಿದೆ ಅದರೆ ನಮ್ಮ ಇಲಾಖೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಮ್ಮ ಮೂಲಭೂತ ಸೌಕರ್ಯ ಇನ್ನೂ ನಮಗೆ ಮುಟ್ಟಿಲ್ಲ ಅನ್ನಿಸುತ್ತದೆ, ರಾಷ್ಟ್ರೀಯ ಹಬ್ಬ ವಾದ ಸ್ವಾತಂತ್ರ ದಿನವನ್ನು ಆಚರಿಸುತ್ತಿದ್ದೆವೆ.
ಸ್ವಾತಂತ್ರಕ್ಕಾಗಿ ಮಡಿದ ಎಲ್ಲಾ ಮಹಾನ್ ಭಾವನರು ಸ್ಮರಿಸುವ ದಿನ ಇಂತಹ ದಿನ ನಮ್ಮ ಜವಾಬ್ದಾರಿ ಕೂಡ ಸ್ವಚ್ಚತಾಭಾವದಿಂದ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ಬಗ್ಗೆ ಜನರಲ್ಲಿ ಮೂಢಿಸಬೇಕಾಗಿದೆ ಇನ್ನೂ ಹಾಗೆ ನಾವು ಕ್ಷೇತ್ರ ಭೇಟಿ ಮಾಡಿದಂತಹ ಸುತ್ತಮುತ್ತಲಿನ ಇನ್ನೂ ಗಮನಕೋಡಬೇಕಿದೆ ಒಳ್ಳೆ ಪರಿಸರ ಆರೋಗ್ಯಕ್ಕೆ ಒಳ್ಳೆಯದು ನಮ್ಮ ಇಲಾಖೆ ಸಿಬ್ಬಂದಿ ಮುಖ್ಯ ವಾಗಿ ನಿಭಾಯಿಸಬೇಕಾಗಿದೆ, ನಮ್ಮ ಆರೋಗ್ಯದ ಜೊತೆಗೆ ಸಾರ್ವಜನಿಕ ಜನರ ಆರೋಗ್ಯ ಕಡೆ ಹೆಚ್ಚಿನ ಗಮನ ಹರಿಸಲು ಕೈಜೋಡಿಸೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಕಾಂತ ನರಿಬೋಳ, ಜಿಲ್ಲಾ ಆರ್ ಸಿ ಹೆಚ್ ಓ, ಡಾ. ಶರಣಬಸಪ್ಪ. ಕ್ಯಾತನಾಳ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಬಸವರಾಜ ಗುಳಗಿ, ಜಿಲ್ಲಾ ಕಾಲರ ನಿಯಂತ್ರಣಾಧಿಕಾರಿ ಡಾ.ವಿವೇಕಾನಂದ ರೆಡ್ಡಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಜಕುಮಾರ ಕುಲಕರ್ಣಿ, ಸಹಾಯಕ ಆಡಳಿತಾಧಿಕಾರಿ ಪಿ ಪಿ ನಾಯಕ, ಜಿಲ್ಲಾ ದಂತ ವೈದ್ಯಾಧಿಕಾರಿ ಡಾ, ಸಂಧ್ಯಾ ಕಾನೇಕರ್, ಜಿಲ್ಲಾ ಸರ್ಕಾರಿ ನೌಕರರ ಸಂಘ ಕಾರ್ಯಧ್ಯಕ್ಷ ಚಂದ್ರಕಾಂತ ಏರಿ , ಜಿಲ್ಲಾ ಕ್ಷಯರೋಗ ಡಿ ಆರ್ ಟಿಸ್ ಸಮಾಲೋಚಕ ಮಂಜುನಾಥ ಕಂಬಳಿಮಠ, ಹಿರಿಯ ಆರೋಗ್ಯ ನೀರಿಕ್ಷಾಣಧಿಕಾರಿಗಳಾದ ಗುಂಡಪ್ಪ ದೊಡ್ಡಮನಿ, ರಾಜಶೇಖರ ಕುರಕೋಟಿ, ಸಂತೋಷ ಕುಡಳ್ಳಿ, ಜಿಲ್ಲಾ ಫಾರ್ಮಸಿ ಅಧಿಕಾರಿ ಅದ್ನನ್ ಕುಡ್ಳೆ ಜಿಲ್ಲಾ ಪಿಪಿಎಂ ಸಂಯೋಜಕ ಶಶಿಧರ್ ಕಮಲಪೂರ, ಎಸ್ ಟಿ ಎಲ್ ಎಸ್, ಸಂಗಮೇಶ ಪಾಟೀಲ್, ಶಿವಪುತ್ರ ಜನಕಟ್ಟಿ , ಶರಣು ಮಂಠಳೆ, ಎಸ್ ಟಿ ಎಸ್ ಗಳಾದ, ಡಾ, ಶರಣಬಸಪ್ಪ ಸಜ್ಜನಶೆಟ್ಟಿ, ಶಿವಕುಮಾರ್ ಪಾಟೀಲ್, ರಜನಿ ಟಿಳ್ಳೆ, ದಿನೇಶ ವಾಡೆಕಾರ್, ಮಹಾಂತೇಶ ಹಾವನೂರ. ಡಿವೈ ಕ್ಷೇತ್ರ ಆರೋಗ್ಯ ಶಿಕ್ಷಾಣಾಧಿಕಾರಿ ಸೋಮು ರಾಠೋಡ. ಜಿಲ್ಲಾ ಮಲೇರಿಯಾ ಸಹಾಯಕ ಘಟಕ ಅಧಿಕಾರಿಗಳು ಗಣೇಶ ಚಿನ್ನಾಕರ್ , ಆರ್ ಸಿ ಹೆಚ್ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಶಿವು ಸ್ವಾಮಿ, ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕ ಜ್ಞಾನ ನಂದ ಪಾಟೀಲ್, ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.