ಕಲಬುರಗಿ: ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ 76ನೇ ಸ್ವತಂತ್ರ ದಿನಾಚರಣೆ ನಿಮಿತ್ಯ ಅಂದು ಎಲ್ಲಾ ಸ್ವತಂತ್ರ ಹೋರಾಟಗಾರರ ಭಾವಚಿತ್ರ ಅಳವಡಿಸಿ ಆಚರಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ಆದರೆ ಹೈಕೋರ್ಟ್ ಆದೇಶ ಶ್ರೀನಿವಾಸ ಸರಡಗಿ ಮುಖ್ಯ ಗುರುಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಮುಖ್ಯ ಗುರುಗಳು ಡಾ ಬಿ ಆರ ಅಂಬೇಡ್ಕರ್ ಅವರಿಗೆ ಅಗೌರವ ತೋರಿ ಅವಮಾನ ಮಾಡಿದ್ದಾರೆ ಎಂದು ದೂರಿದರು.
ನಾವು ಅವರನ್ನು ಹೋಗಿ ಕೇಳಿದರೆ,ಏನು ಮಾಡುತ್ತೀರಿ ಮಾಡಿಕೊಳ್ಳಿ ಎಲ್ಲಿಗಿ ಹೋಗುತ್ತಿರಿ ಹೋಗಿ ಎಂದು ಧಮಕಿ ಹಾಕುತ್ತಿದ್ದಾರೆ ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾದ್ಯಕ್ಷ ಮಲ್ಲಿಕಾರ್ಜುನ ಎಸ್ ಕಿಳ್ಳಿ ಅವರು ಆರೋಪಿಸಿದರು.
ಈ ವಿಷಯದ ಕುರಿತು ಮುಖ್ಯ ಗುರುಗಳ ವಿರುದ್ಧ ಒಂದು ವೇಳೆ ಕ್ರಮಕೈಗೊಳ್ಳದೇ ಹೋದರೆ ಕಲಬುರಗಿ-ಸೇಡಂ ಮುಖ್ಯ ರಸ್ತೆ ಬಂದ ಮಾಡಿ ಉಗ್ರರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಅನೀಲ ಕಿಳ್ಳಿ,ಶಿವುಕುಮಾರ ಮೀಸಿ, ಶಿವಶಂಕರ ಹಾಗೂ ನಾಗಪ್ಪ ಕಂಠಿಕರ ಸೇರಿದಂತೆ ಇತರರು ಇದ್ದರು.