ನಾನು ಶಾಸಕನಾಗಲು ಡಿ.ದೇವರಾಜ ಅರಸು ಕಾರಣ; ಶಾಸಕ ಆರ್.ವಿ.ನಾಯಕ

0
10

ಸುರಪುರ: ರಾಜ್ಯದಲ್ಲಿನ ದೀನ ದಲಿತರ ಶೋಷಿತರ ಏಳಿಗೆಯ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ನಾನು ಶಾಸಕನಾಗಲು ಕಾರಣರಾಗಿದ್ದಾರೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿದರು.

ತಾಲೂಕು ಆಡಳಿತ ದಿಂದ ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 108ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಗ್ರಾಮೀಣ ಭಾಗದಲ್ಲಿ ಗೌಡ ಕುಲಕರ್ಣಿ ಎನ್ನುವ ಉಳ್ಳವರು ನೂರಾರು ಎಕರೆ ಭೂಮಿಯನ್ನು ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಡಿ.ದೇವರಾಜ ಅರಸು ಅವರು ಉಳುವವನೆ ಭೂ ಒಡೆಯ ಎನ್ನುವ ಕಾನೂನಿನ ಮೂಲಕ ಸಣ್ಣ ರೈತರಿಗೆ ಜಮೀನು ದೊರೆಯುವಂತೆ ಮಾಡಿದರು.ಹಿಂದುಳಿದ ವರ್ಗಗಳ ಹರಿಕಾರ ಎಂದೇ ಅರಸು ಅವರನ್ನು ಕರೆಯಲಾಗುತ್ತದೆ.1978ರಲ್ಲಿ ಅವರು ಮುಖ್ಯಮಂತ್ರಿಯಾಗಿರುವುದನ್ನು ನಾನು ಕೂಡ ಕಂಡಿದ್ದೇನೆ,ಅಲ್ಲದೆ ನಮ್ಮ ತಂದೆ ರಾಜಾ ಕುಮಾರ ನಾಯಕ ಅವರುಕೂಡ ಶಾಸಕರಾಗಲು ಒಂದು ರೀತಿಯಲ್ಲಿ ದೇವರಾಜ ಅರಸು ಕಾರಣರಾಗಿದ್ದರು ಎಂದರು.

Contact Your\'s Advertisement; 9902492681

ಹಿಂದೆ ಡಿ.ದೇವರಾಜ ಅರಸು ಅವರು ಆಡಳಿತ ನೀಡಿದಂತೆ ಇಂದು ನಮ್ಮ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ಐದು ಜನಪರವಾದ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಇಂದಿನ ಡಿ.ದೇವರಾಜ ಅರಸು ಆಗಿದ್ದಾರೆ ಎಂದು ಅಭಿಮಾನ ದಿಂದ ನುಡಿದರು.ಅಲ್ಲದೆ ನಾನುಕೂಡ ಈ ಹಿಂದೆ ಮೂರು ಬಾರಿ ಶಾಸಕನಾಗಿ ಉತ್ತಮವಾಗಿ ಕೆಲಸ ಮಾಡಿದ್ದೇನೆ,ಮುಂದೆಯೂ ಉತ್ತಮವಾಗಿ ಕೆಲಸ ಮಾಡುವೆ ತಾವೆಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ರವಿಚಂದ್ರ ಠಾಣಾಗುಂದಿ ಡಿ.ದೇವರಾಜ ಅರಸು ಅವರ ಕುರಿತು ಉಪನ್ಯಾಸ ನೀಡಿ ನಮ್ಮ ಸುರಪುರದ ಡಿ.ದೇವರಾಜ ಅರಸು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕರಾಗಿದ್ದಾರೆ ಎಂದರು.ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರಡ್ಡಿ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಬಿಸಿಎಂ ಹಾಸ್ಟೆಲ್‍ಗಳಲ್ಲಿದ್ದು ಎಸ್.ಎಸ್.ಎಲ್.ಸಿ,ಪಿಯುಸಿ ತರಗತಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಬಿಸಿಎಮ್ ಹಾಸ್ಟೆಲ್‍ಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳ ತಂಡಕ್ಕೆ ಬಹುಮಾನ ವಿತರಣೆ ಮಾಡಲಾಯಿತು.

ತಹಸೀಲ್ದಾರ್ ಕೆ.ವಿಜಯಕುಮಾರ ಅಧ್ಯಕ್ಷತೆ ವಹಿಸಿದ್ದರು,ವೇದಿಕೆ ಮೇಲೆ ಡಿವೈಎಸ್ಪಿ ಜಾವಿದ್ ಇನಾಂದಾರ್,ಟಿಹೆಚ್‍ಓ ಡಾ:ಆರ್.ವಿ ನಾಯಕ,ಬಿಇಓ ಯಲ್ಲಪ್ಪ ಕಾಡ್ಲೂರ,ತಾ.ಪಂ ಇಓ ಬಸವರಾಜ ಸಜ್ಜನ್,ಪಿ.ಐ ಆನಂದ ವಾಘಮೊಡೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here