ಬಸವ ಮಾರ್ಗ ಎನ್ನುವುದು ಸಮಾನತೆಯನ್ನು ಬೋಧಿಸುವ ಬೆಳಕು; ಶಿವಕುಮಾ ಶ್ರೀ

0
15

ಸುರಪುರ:ಬಸವ ಮಾರ್ಗ ಎನ್ನುವುದು ಸಮಾಜದಲ್ಲಿ ಸಮಾನತೆಯನ್ನು ತರುವಲ್ಲಿ ಎಲ್ಲಿರಿಗೂ ವಚನಗಳ ಮೂಲಕ ಬೋಧಿಸುವ ಬೆಳಕಾಗಿದೆ ಎಂದು ಕೊಡೇಕಲ್ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಸುರಪುರ ತಾಲೂಕು ಘಟಕ ದಿಂದ ನಗರದ ಸತ್ಯಂಪೇಟೆಯ ಬಸವ ಮಾರ್ಗ ಪ್ರತಿಷ್ಠಾನದ ಅರಿವಿನ ಮನೆಯ ಆವರಣದಲ್ಲಿ ನಡೆದ ಶ್ರಾವಣ ಮಾಸದ ಅಂಗವಾಗಿ ಪ್ರತಿ ಸೋಮವಾರ ಸಂಜೆ ನಡೆಯಲಿರುವ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ಭಾಗವಹಿಸಿ ಮಾತನಾಡಿ,ಬಸವ ಮಾರ್ಗ ಎನ್ನುವುದು ಕಬ್ಬಿನಂತೆ ಮೊದಲಿಗೆ ಸಿಪ್ಪೆ ಬರುತ್ತದೆ,ನಂತರ ಕಡಿಮೆ ಸಿಹಿ ಲಭಿಸುತ್ತದೆ ಹಾಗೇ ಸವಿಯುತ್ತ ಹೋದಂತೆಲ್ಲ ಸಿಹಿ ನಿರಂತರವಾಗಿ ಬಸುತ್ತದೆ,ಅಂತಹ ಬಸವ ಮಾರ್ಗವನ್ನು ಎಲ್ಲರು ಅಪ್ಪಿಕೊಳ್ಳಬೇಕು.ಈ ನಾಡಿನಲ್ಲಿ ಬಸವ ಮಾರ್ಗವನ್ನು ಜನರಿಗೆ ತಿಳಿಸುವ ಕಾರ್ಯದರ್ಲಿ ಸತ್ಯಂಪೇಟೆಯ ಕೊಡುಗೆಯೂ ಇದೆ,ಯಾಕೆಂದರೆ ಈ ಭಾಗದಲ್ಲಿ ಲಿಂಗಣ್ಣ ಸತ್ಯಂಪೇಟೆಯವರ ತಂಡ ಗುರು ಬಸವಯ್ಯ ಅಮ್ಮಾಪುರ ಸೇರಿದಂತೆ ಅನೇಕರು ಇದರಲ್ಲಿದ್ದು ನಿರಂತವಾಗಿ ವಚನ ಸಾಹಿತ್ಯವನ್ನು ಎಲ್ಲರಿಗೂ ತಿಳಿಸುವ ಕಾರ್ಯ ಮಾಡಿದ್ದಾರೆ,ಇಂತಹ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿರುವುದು ತುಂಬಾ ಸಂತೋಷ ತಂದಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಭಾಗವಹಿಸಿ ಶರಣ ಸನ್ಮಾನ ಸ್ವೀಕರಿಸಿ ಮಾತನಾಡಿ,ಕನ್ನಡ ನಾಡಿನಲ್ಲಿ ವಚನ ಸಾಹಿತ್ಯ ಎನ್ನುವುದು ಸಮಾಜವನ್ನು ತಿದ್ದುವಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡಿದೆ ಎಂದರು.

ಅಲ್ಲದೆ ತಾಲೂಕಿನಲ್ಲಿಯ ಜನರಿಗೆ ಆರೋಗ್ಯ ಇಲಾಖೆಯ ಎಲ್ಲ ರೀತಿಯ ಸೇವೆಯನ್ನು ನಿರಂತರವಾಗಿ ನೀಡಲು ಶ್ರಮಿಸುವೆ.ತಾಲೂಕು ಆಸ್ಪತ್ರೆಯಲ್ಲಿ ನೇತ್ರ ಶಸ್ತ್ರ ಚಿಕಿತ್ಸೆ,ಸಂತಾನ ಹರಣ ಚಿಕಿತ್ಸೆ ಸೇರಿದಂತೆ ಅನೇಕ ಸೌಲಭ್ಯಗಳಿದ್ದು ಜನರು ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಜಿ.ಎಸ್ ಪಾಟೀಲ್ ವಹಿಸಿ ಮಾತನಾಡಿದರು,ಪತ್ರಕರ್ತ ರಾಜು ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಭಾಗವಹಿಸಿದ್ದರು.ಚನ್ನಮಲ್ಲಿಕಾರ್ಜುನ ಗುಂಡಾನೂರ ವಚನ ಗಾಯನ ಮಾಡಿದರು,ಶಿವರುದ್ರ ಉಳ್ಳಿ ನಿರೂಪಿಸಿದರು,ಸುವರ್ಣಾ ಹಿರೇಮಠ ಸ್ವಾಗತಿಸಿದರು,ನಾಗಭೂಷಣ ಯಾಳಗಿ ವಂದಿಸಿದರು.ಕಾರ್ಯಕ್ರಮದಲ್ಲಿ ಅನೇಕ ಜನ ಮಹಿಳೆಯರು,ಮಕ್ಕಳು ಮತ್ತು ಬಸವಾಭಿಮಾನಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here