ಕಲಬುರಗಿ: ಜೇವರ್ಗಿ ಕ್ಷೇತ್ರದ ಶಾಸಕ ಕೆಕೆಆರ್.ಡಿಬಿ ಅಧ್ಯಕ್ಷರಾಗಿರುವ ಡಾ. ಅಜಯಸಿಂಗ್ ಅವರ ನಿವಾಸದ ಆವರಣದಲ್ಲಿ ವ್ಯಕ್ತಿ ಒರ್ವ ಮರಕ್ಕೆ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಿಗ್ಗೆ ವರದಿಯಾಗಿದೆ.
ಕಲಬುರಗಿಯ ಶರಣ ನಗರ ಬಡಾವಣೆಯಲ್ಲಿರುವ ಶಾಸಕರ ಮೆನೆಯ ಆವರಣದಲ್ಲಿ ಪಟ್ಟಣಾ ಗ್ರಾಮದ ನಿವಾಸಿ ದೇವಪ್ಪ (33) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೂರು ವರ್ಷಗಳ ಹಿಂದೆ ದೇವಪ್ಪನ ಪತ್ನಿ ನಿಧನರಾಗಿದ್ದು, ಕಲಬುರಗಿ ನಗರದಲ್ಲಿರುವ ಶಾಸಕರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸ್ಥಳಕ್ಕೆ ಬ್ರಹ್ಮಪುರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿ ಆತ್ಮಹತ್ಯೆ ಕಾರಣ ಎನೆಂಬುದು ಪತ್ತೆ ಹಚ್ಚುತ್ತಿದ್ದಾರೆ.