ಕಲಬುರಗಿ: ಆಟ ಆಡುತ್ತಿದ್ದ ವೇಳೆ ಮನೆ ಎದುರಿನ ಚರಂಡಿಗೆ ಬಿದ್ದು 2 ವರ್ಷದ ಮಗು ಮೃತ್ಯು ಘಟನೆ ಕಲಬುರಗಿ ನಗರದ ಹಾಗರಗಾ ಪ್ರದೇಶದ ಸಪ್ನಾ ಬೇಕರಿಯ ಮುಜಾಹಿರ್ ನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಅಬ್ದುಲ್ ರಹೇಮಾನ (2) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದ್ದು, ಮೃತ ಬಾಲಕ ಸೋನಿಯಾ ಗಾಂಧಿ ಕಾಲೋನಿಯ ನಿವಾಸಿಯಾಗಿರುವ ಮೊಹ್ಮದ್ ಬುರಾನೊದ್ದೀನ್ ಅವರ ಪುತ್ರ. ಮುಜಾಹಿರ್ ನಗರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಗುರುವಾರ ಮಧ್ಯಾಹ್ನ ಮಗು ಆಟಾ ಆಡಿಕೊಂಡು ಮನೆಯ ಎದುರಿಗೆ ಇರುವ ಒಳಚರಿಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಬಡಾವಣೆಯಲ್ಲಿ ಸೂಕ್ತ ಒಳಚರಿಂಡಿ ವ್ಯವಸ್ಥೆ ಇಲ್ಲದೇ ಈ ಘಟನೆ ನಡೆದಿದೆ ಎಂದು ಸ್ಥಳೀಯ ನಿವಾಸಿಗಳು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ. ತಕ್ಷಣ ಜಿಲ್ಲಾಡಳಿತ ಎಚ್ಚತುಗೊಂಡು ಇಂತಹ ಘಟನೆಗಳು ತಡೆಯು ನಿಟ್ಟಿನಲ್ಲಿ ಕ್ರಮ ಕೈಗೊಂಡು ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ನಗರದ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.