ಸುರಪುರ: ಬೋನಾಳ ಗ್ರಾಮದ ಬಾವಿ ಸ್ವಚ್ಛತೆಗೆ ಮನವಿ

0
13

ಸುರಪುರ: ಹಸಿರು ಬಣ್ಣದ ಪಾಚಿಗಟ್ಟಿದ ಕುಡಿಯುವ ನೀರು ಗ್ರಾಮ ಪಂಚಾಯತ್ ಕನಿಷ್ಠ ಪ್ರಮಾಣದ ಭಾವಿ ಸ್ವಚ್ಛತೆ ಮಾಡದೇ ಕುಂಟು ನೆಪ ಹೇಳುವುದರ ಮೂಲಕ ಸತ್ತಸುತ್ತದೆ ಎಂದು ತಾಲೂಕು ಚಲುವಾದಿ ಸಂಘದ ಸಂಚಾಲಕ ಬಸವರಾಜ ನಾಟೇಕಾರ ಆರೋಪಿಸಿದ್ದಾರೆ.

ತಾಲೂಕಿನ ಬೋನ್ಹಾಳ ಗ್ರಾಮದ ಎಸ್ಪಿ ವಾರ್ಡ್ ಕುಡಿಯುವ ನೀರಿನ ಭಾವಿಯ ನೀರಿನಲ್ಲಿ ಹುಳು, ಕಸಕಡ್ಡಿ ಬರುವುದರಿಂದ ವಯಸ್ಸಿನ ಭೇದವಿಲ್ಲದೆ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂಬ ಆಂತಕ ಕಾಡುತ್ತಿದೆ.ಜಲ ಮೂಲದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಊರಿನಲ್ಲಿ ಕೊಳಚೆ ನೀರನ್ನ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಪಿಡಿಒ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

Contact Your\'s Advertisement; 9902492681

ಕುಡಿಯುವ ನೀರಿನ ಘಟಕಕ್ಕೆ ಸರಬರಾಜು ಮಾಡುವ ಬಾವಿಯ ಸಮೀಪದಲ್ಲಿಯೇ ತ್ಯಾಜ್ಯಗಳನ್ನು ಎಸೆದು ರಾಶಿ ರಾಶಿಯಾಗಿದ್ದು, ಇದರಿಂದ ಇಲ್ಲಿ ಜನರು ಕಾಲಿಡಲು ಕೂಡ ಹೇಸಿಗೆ ಪಡುವಂತಾಗಿದೆ. ತ್ಯಾಜ್ಯ ಪದಾರ್ಥಗಳು ಕೊಳೆತ ಸ್ಥಿತಿಯಲ್ಲಿ ಬಿದ್ದಿದ್ದು, ಹುಳುಗಳು ಸೃಷ್ಟಿಯಾಗಿವೆ. ಇದರ ಪರಿಣಾಮವಾಗಿ ಸುತ್ತಮುತ್ತಲಿನ ಜನರಿಗೆ ನೀರು ಮಲೀನವಾಗುವ ಭೀತಿ ಮತ್ತು ಮಲೀನವಾದ ಕುಡಿಯುವ ನೀರು ಸರಬರಾಜಾದಲ್ಲಿ ಜನರ ಪರಿಸ್ಥಿತಿ ಏನಾಗಲಿದೆ ಎಂಬ ಆತಂಕ ಎದುರಾಗಿದೆ.

ಮುಖ್ಯವಾಗಿ ಈ ಬಾವಿಯ ನೀರು ಊರಿನ ಎಸ್ಪಿ ವಾರ್ಡ್ ಜನರು ಕುಡಿಯುವ ನೀರು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಒಮ್ಮೊಮ್ಮೆ ಜಾನುವಾರು, ಬೀದಿನಾಯಿ ಅಲ್ಲಿಯೇ ಸತ್ತು ಬೀಳಲಿದ್ದು, ಕೊಳೆತು ಹೋದರೂ 2 ದಿನಗಳ ನಂತರವೇ ವಿಲೇವಾರಿ ಮಾಡಲಾಗುತ್ತದೆ. ಈಗಂತು ಭಾರಿ ಮಳೆಯ ಹಿನ್ನೆಲೆ ತ್ಯಾಜ್ಯದ ನೀರು ಬಾವಿಗೆ ಸೇರಲಿದ್ದು, ನೀರು ತ್ಯಾಜ್ಯಗಳ ಗುಂಡಿಯಲ್ಲಿ ತುಂಬಿಕೊಂಡು ಅಲ್ಲಿಯೇ ಇಂಗಿ ಪಕ್ಕದ ಬಾವಿಯನ್ನು ಸೇರಿಕೊಳ್ಳುತ್ತಿವೆ.ಮಲೀನ ನೀರು ಸೇವಿಸುವ ಜನರ ಆರೋಗ್ಯದ ಗತಿ ಏನು ಎಂಬುದರ ಬಗ್ಗೆ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಬಾವಿಯ ಸುತ್ತ ವರ್ಷಗಳಿಂದ ಕಸದ ರಾಶಿ: ಈ ಬಾವಿಯ ಸುತ್ತಲೂ ವರ್ಷಗಳಿಗೂ ಮೀರಿದ ಯಥೇಚ್ಛವಾದ ಕಸ ಸಂಗ್ರಹವಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಅಧಿಕಾರಿ ಬಾವಿಯ ಸುತ್ತಲಿನ ಕಸವನ್ನು ವಿಲೇವಾರಿ ಮಾಡುವ ಯತ್ನಕ್ಕೂ ಹೋಗಿಲ್ಲದಿರುವುದು ಮಾತ್ರ ವಿಪರ್ಯಾಸವೆ ಸರಿ.ಕೂಡಲೇ ಈ ಭಾವಿಯನ್ನು ಸ್ವಚ್ಛತೆ ಮಾಡಿ ಜನರ ಪ್ರಾಣವನ್ನು ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here