ಕಲಬುರಗಿ: ಕಮರವಾಡಿ ಗ್ರಾಮದ ಶರಣಬಸವೇಶ್ವರರ ದೇವಸ್ಥಾನದ ಅಡಿಯಲ್ಲಿನ ಬಸವ ಭವನ ನಿರ್ಮಾಣದ ಅನುದಾನಕ್ಕಾಗಿ ಲೋಕಸಭಾ ಸದಸ್ಯ ಡಾ ಉಮೇಶ ಜಾಧವ ಅವರಿಗೆ ಶರಣಬಸವೇಶ್ವರರ ದೇವಸ್ಥಾನ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.
ಕಮರವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೂಲಹಳ್ಳಿ,ಆಲೂರ,ಬೊಮ್ಮನಹಳ್ಳಿ ಗ್ರಾಮಗಳು,ಮೂಳಿ ತಾಂಡ,ದೇವಪುರ ತಾಂಡ ಹಾಗೂ ರಾಮನಗರ ತಾಂಡಗಳು ಒಂಳಗೊಂಡಿದ್ದು ಈ ಭಾಗದವರಿಗೆ ಎಲ್ಲರಿಗೂ ಅನುಕೂಲ ವಾಗಲಿದೆ.
ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ ಸಾರಿದ ಮಹಾನ್ ಮಾನವತವಾದಿ ಬಸವೇಶ್ವರ ಭವನ ವನ್ನು ಕಮರವಾಡಿ ಗ್ರಾಮದಲ್ಲಿನ ನಿರ್ಮಾಣದಿಂದ ಜನಮಾನಸದಲ್ಲಿ ಬಸವ ತತ್ವ ಸಾಕಾರಕ್ಕೆ ತಾವು ಅನುವು ಮಾಡಿಕೊಡಬೇಕು ಎಂದರು.
ಸಮಿತಿ ಅಧ್ಯಕ್ಷರಾದ ಅಣ್ಣಾರಾವ ಗೌಡ ಪಾಟೀಲ, ದೇವೇಂದ್ರಪ್ಪ ಗೌಡ ಪಾಟೀಲ,ಗುರುಬಸಪ್ಪ ಯರ್ಗಲ,ವೀರಣ್ಣ ಯಾರಿ, ಸಿದ್ರಾಮ ಕರದಳ್ಳಿ,
ಭೀಮಾಶಂಕರ ಇಂದೂರ,ಬಸವರಾಜ ಸುಲೇಪೆಟ,ಬಾಪುರಾವ ಕಾಶೆಟ್ಟಿ, ಶರಣು ಕುಸನೂರ ಸೇರಿದಂತೆ ಇತರರು ಇದ್ದರು