ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ

0
22

ಕಲಬುರಗಿ; ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮಾನವಿ ಸಲ್ಲಿಸಲಾಯಿತು.

ಈಗಾಗಲೇ ಮುಂಗಾರು ಮಳೆ ಕೈಕೊಟ್ಟ ಪ್ರಯುಕ್ತ ರೈತರು ಕಂಗಾಲಾಗಿದ್ದು, ಅದರಂತೆ ಕರ್ನಾಟಕ ಸರ್ಕಾರವು ಬರಪೀಡಿತ ಪ್ರದೇಶವೆಂದು ಈಗಾಗಲೇ ಕೆಲವು ಜಿಲ್ಲೆಗಳು ಘೋಷಣೆ ಮಾಡಿದ್ದು. ನಾಡಿನ ಜನತೆಗೆ ಗೊತ್ತಿರುವ ವಿಷಯವಾಗಿದೆ. ಈ ಪ್ರಯುಕ್ತ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಇದನ್ನು ಘೋರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಹಾಗೂ ನಮ್ಮ ಕರ್ನಾಟಕ ಗಡಿಭಾಗದ ಮೆಕೆದಾಟು ಯೋಜನೆಯನ್ನು ದೊಡ್ಡ ಆಣಿಕಟ್ಟುನ್ನು ಕಟ್ಟುವುದಕ್ಕಾಗಿ ರೂ. 90,000 ಸಾವಿರ ಕೋಟಿಗಳನ್ನು ಮಂಜೂರಾತಿಯನ್ನು ಯಾವುದೇ ಸಮಯದಲ್ಲಿ ನಾವು ನೀಡುತ್ತೇವೆ. ಆದರೆ ಸುಪ್ರಿಂ ಕೋರ್ಟ ನಿದೇಶನದ ನಂತರವೂ ಕೇಂದ್ರ ಸರಕಾರ ನಮಗೆ ಅನುಮತಿ ಕೊಡುತ್ತಿಲ್ಲ.

Contact Your\'s Advertisement; 9902492681

ಇದು ರಾಜ್ಯ ಸರ್ಕಾರಕ್ಕೆ ಸಂಕಷ್ಟವಿದ್ದು, ಮಾನ್ಯ ಮಂತ್ರಿಗಳು, ಭಾರತ ಸರಕಾರ ಕೂಡಲೇ ಅನುಮತಿ ನೀಡಿ ರಾಜ್ಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಒಕ್ಕೂಟದ ಗೌರವ ಅಧ್ಯಕ್ಷ ಜಗನ್ನಾಥ ಸುರ್ಯವಶಿ, ರಾಜ್ಯ ಸಲಹೆಗಾರ ಗುರುರಾಜ ತಿಳಗೋಳ, ಜಿಲ್ಲಾಧ್ಯಕ್ಷ ದತ್ತು ಭಾಸಗಿ, ಡಾ.ವೇದಮೂರ್ತಿ, ವಿಠ್ಠಲ ವಾಲಿಕಾರ, ರಾಮಾ ಪೂಜಾರಿ, ನೂರ ಹುಸೇನ್, ಮಲ್ಲು ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here