ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೂರು ದಿವಸಗಳ ತರಬೇತಿ

0
196

ಕಲಬುರಗಿ: ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ರಾಯಚೂರು, ಐಸಿಎಆರ್-‌ಕೃಷಿ ವಿಜ್ಞಾನ ಕೇಂದ್ರ -೧ ಮತ್ತು ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ ಹೈದರಾಬಾದ ಇವರ ಸಂಯುಕ್ತ ಆಶ್ರಯದಲ್ಲಿ ರೈತ ಉತ್ಪಾದಕ ಸಂಸ್ಥೆಗಳ CEO, Accountants ಮತ್ತು ನಿರ್ದೇಶಕರ ಮಂಡಳಿ ಅವರಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಸಲುವಾಗಿ ಮೂರು ದಿವಸಗಳ ತರಬೇತಿಯನ್ನು ಅಕ್ಟೊಬರ್‌ 9 ರಿಂದ 11 ರವರೆಗೆ ಆಯೋಜಿಸಲಾಗಿದೆ.

ಡಾ. ಎಸ್.‌ ಬಿ. ಗೌಡಪ್ಪಾ, ವಿಸ್ತರಣಾ ನಿರ್ದೆಶಕರು, ರಾಯಚೂರು ವಿಶ್ವವಿದ್ಯಾಲಯ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಿ ಎಫ್.ಪಿ.ಓ ಮೂಲಕ ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.

Contact Your\'s Advertisement; 9902492681

ಡಾ. ಎಮ್‌ ಧನೋಜಿ, ಡಿನ್‌ ಕೃಷಿ ಮಹಾವಿದ್ಯಾಲಯ ಕಲಬುರಗಿ ಅವರು ಜನಗಳ ಮನಸ್ಥಿತಿಯನ್ನು ತಿಳಿದುಕೊಂಡು ಅವರಿಗೆ ಬೇಕಾಗಿರುವ ಉತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ತರುವುದರ ಬಗ್ಗೆ ಮಾತನಾಡಿದರು.

ಡಾ. ಬಿ. ಎಮ್‌ ದೊಡ್ಡಮನಿ, ಸಹಾಯಕ ಸಂಶೋಧನಾ ನಿರ್ದೆಶಕರು ಸಿರಿಧಾನ್ಯ ಬೆಳೆ ಮತ್ತು ಸಂಸ್ಕರಣೆ ಬಗ್ಗೆ ಮಾಹಿತಿ ನಿಡಿದರು. ಡಾ. ಬಿ. ಎಸ್.‌ ರೆಡ್ಡಿ, ಹಿರಿಯ ಕ್ಷೇತ್ರ ಅಧಿಕ್ಷಕರು, ZಂಖS ಕಲಬುರಗಿ ಅವರು ಈPಔ ನಿರ್ವಹಣೆ ಯಲ್ಲಿ ಅಇಔ ಮತ್ತು ನಿರ್ದೆಶಕರ ಮಂಡಳಿಯವರ ಪಾತ್ರದ ಬಗ್ಗೆ ಮಾತನಾಡಿದರು.

ಡಾ. ವಾಸುದೆವ ನಾಯಕ, ತೋಟಗಾರಿಕೆ ವಿಜ್ಞಾನಿ, ಕೆವಿಕೆ ಕಲಬುರಗಿ ಅವರು ಸಿರಿಧಾನ್ಯಗಳಿಂದ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಬಗ್ಗೆ ಮಾಹಿತಿ ನಿಡಿದರು. 12 ಈPಔ ಗಳಿಂದ 30 ರೈತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಯ ಸಂಯೋಜಕರಾದ ಅಬ್ಬುಸೆಟ್‌ ಅವರು ಸ್ವಾಗತ ಭಾಷಣ ಮಾಡಿದರು, ಕೈಲಾಶ ಕೊರಿಶೆಟ್ಟಿ ಪ್ರಾಸ್ತವಿಕ ಭಾಷಣ ಮಾಡಿದರು, ಅಶೋಕ ಸಜ್ಜನ್‌ ಅವರು ನಿರುಪಣೆ ಮಾಡಿದರು ಮತ್ತು ವೈಶಾಲಿ ಎಮ್‌ ಅವರು ಸಂಯೋಜನೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here