ಹಟ್ಟಿ: ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಿದ್ಯಾರ್ಹತೆಗೆ ತಕ್ಕಂತೆ ಗ್ರೇಡ್ ನೀಡಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಆಫ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಲಿಂಗಸ್ಗೂರು ತಾಲೂಕು ಸಮಿತಿಯಿಂದ ಹಟ್ಟಿ ಚಿನ್ನದ ಗಣಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಬುಧವಾರದಂದು ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಅವರ ಪಿಎ ಮೇರಿ ಅವರಿಗೆ ಸಲ್ಲಿಸಿದರು.
ಜಿ-12 ದರ್ಜೆಯಲ್ಲಿ ಸಾಮಾನ್ಯ ಕೆಲಸಗಾರಗಾಗಿ ಕಾರ್ಯನಿರ್ವಹಿಸುತ್ತಿದ್ದೆವೆ. ಆನುಕಂಪದ ಆಧಾರದ ಮೇಲೆ ಸುಮಾರು 7 ರಿಂದ 8 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಈ ಮೊದಲು ಹಟ್ಟಿ ಚಿನ್ನದ ಗಣಿಯಲ್ಲಿ, ಆ ಕಂಪದ ಆಧಾರದ ಮೇಲೆ ಕಾರ್ಮಿಕರಿಗೆ 2013-14 ರಲ್ಲಿ ನೇಮಕಾತಿ ಮಾಡಿಕೊಂಡಿರುವ ಕೆಲಸಗಾರರನ್ನು ವಿದ್ಯಾರ್ಹತೆಗನುಗುಣವಾಗಿ ಹುದ್ದೆಯನ್ನು ಕೊಟ್ಟಿರುತ್ತಾರೆ. ಆದರೆ ಚಿನ್ನದ ಗಣಿ ನಿರ್ದೇಶಕ ಮಂಡಳಿಯಲ್ಲಿ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನೀಡಬೇಕೆಂಬ ನಿಯಮವಿದ್ದರೂ ಇದನ್ನು ಪರಿಗಣಿಸದೆ, ನಿಯಮಗಳನ್ನು ಗಾಳಿಗೆ ತೂರಿ ಹೊಸದಾಗಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಯಿತು.
ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೀವೆ. ನಮಗೆ ಗಣಿಯ ಕೆಲಸದಲ್ಲಿ ಅನುಭವವಿದೆ. ಕಂಪನಿಯಲ್ಲಿ ಪಧವೀದರರು, ಎಂ. ಎ., ಎಂ.ಕಾಂ, ಬಿ ಕಾಮ್. ಎಮ್.ಎಸ್.ಡಬ್ಲ್ಯೂ, ಡಿಪ್ಲೋಮಾ, ಡಿಪ್ಲೋಮಾ ನರ್ಸಿಂಗ್, ಬಿಎಸ್ಸಿ ಸರ್ಸಿಂಗ್, ಓಟಿ ಟೆಕ್ನಿಸಿಯನ್, ಲ್ಯಾಬ್ ಟೆಕ್ನಿಷಿಯನ್, ಐಟಿಐ ಹಾಗೂ ಇನ್ನಿತರ ಕೋರ್ಸುಗಳನ್ನು ಮುಗಿಸಿದವರು ಇದ್ದಾರೆ. ಕಂಪನಿಯಲ್ಲಿ ಸೇವೆಗೆ ಸೇರಿಕೊಳ್ಳುವಾಗಲೇ ನಮ್ಮ ಸರ್ಟಿಫಿಕೇಟ್ಗಳನ್ನು ನೀಡಿರುತ್ತೇವೆ. ಅದಕ್ಕಾಗಿ ನಮ್ಮನ್ನು ಖಾಲಿ ಇರುವ ಸ್ಥಾನಗಳಿಗೆ ಭರ್ತಿ ಮಾಡಿ ಉಳಿದ ಸ್ಥಾನಗಳಿಗೆ ನೇರ ನೇಮಕಾತಿ ಪ್ರಕಟಣೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಸಹ ಕಾರ್ಯದರ್ಶಿ ಮಹಮ್ಮದ್ ಹನೀಫ್, ಮುಖಂಡರಾದ ರಮೇಶ್ ವೀರಾಪೂರು, ಅಲ್ಲಾಭಕ್ಷ, ರಾಜರತ್ನಂ, ಸುದೀರ್ ಕುಮಾರ, ಅರುಣ್ ವಿ. ಉಪಸ್ಥಿತರಿದ್ದರು.