ನಿಮ್ಮ ಮೊಬೈಲ್ ನಲ್ಲಿ ಕಂಪನ ಸಂದೇಶ ರವಾನೆ: ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಯೋಗ

0
242

ಕಲಬುರಗಿ: ಭಾರತದ ದೂರ ಸಂಪರ್ಕ ಇಲಾಖೆ (ಡಿಒಟಿ), ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಹಯೋಗ ದೊಂದಿಗೆ ವಿಪತ್ತು ಸಂದರ್ಭದಲ್ಲಿ ಜನರಿಗೆ ನೀಡಲಾಗುವ ಎಚ್ಚಿಕೆಯ ಸೂಚನೆಯ ಬಗ್ಗೆ ಅ.12ರಂದು ಪ್ರಾಯೋಗಿಕ ಪರೀಕ್ಷೆ ನಡೆಸಲಿದೆ.

ಈ ಸಂದರ್ಭದಲ್ಲಿ ಧ್ವನಿ ಮತ್ತು ಕಂಪನ ದೊಂದಿಗೆ ನಿಮ್ಮ ಮೊಬೈಲ್‌ ಫೋನ್‌ಗೆ ಫ್ಲಾಸ್ ಮೆಸೆಜ್ ಕಳುಹಿಸಿ ಎಚ್ಚರಿಕೆಯ ಸಂದೇಶ ನೀಡುವ ಮೂಲಕ ಪರೀಕ್ಷೆ ನಡೆಸಲಿದೆ ಎಂದು (ಡಿಒಟಿ) ತಿಳಿಸಿದೆ.

Contact Your\'s Advertisement; 9902492681

ಈ ಎಚ್ಚರಿಕೆಗಳು ವಿಪತ್ತು ಸಂದರ್ಭದಲ್ಲಿ ಜನರನ್ನು ಎಚ್ಚರಿಸುವ ಯೋಜಿತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದೆ. ಯಾರೂ ಕೂಡಾ ಈ ಎಚ್ಚರಿಕೆಯ ಹಿನ್ನೆಲೆಯಲ್ಲಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಭಾರತದ ದೂರಸಂಪರ್ಕ ಇಲಾಖೆ (ಡಿಒಟಿ) ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here