ಕಲಬುರಗಿ: ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿರುವ ಸೌತ್ ಝೇನಲ್ ಸ್ಟೇಟಿಂಗ್ ಸ್ಪರ್ಧೆಗೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಪಾರಿವಾಳ ಹಾರಿಬಿಡುವ ಮೂಲಕ ಚಾಲನೆ ನಿಡಿದರು.
ಸಮಸದ ಡಾ. ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯ ಹಾಗೂ ಶಾಲೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ, ಅಂತಾರಾಷ್ಟ್ರಯ ಕ್ರೀಡಾಪಟು ಸೌಜನ್ಯ ಎಂ ಶಾಲೆಯ ಕಾರ್ಯದರ್ಶಿ ಸುರೇಶ ಬುಲಬಲೆ. ಜಂಟಿ ಕಾರ್ಯದರ್ಶಿ ಚಂದ್ರಶೇಖರ ರೆಡ್ಡಿ ಸೇರಿದಂತೆ ಮತ್ತಿತರರಿದ್ದರು.
ನಾಲ್ಕು ರಾಜ್ಯಗಳ ಸಿಬಿಎಸ್‍ಸಿ ವಿದ್ಯಾರ್ಥಿಗಳ ದಕ್ಷಿಣ ವಲಯ ಮಟ್ಟದ ಸ್ಕೇಟಿಂಗ್ ಕ್ರೀಡಾಕೂಟವನ್ನು ನಾಲ್ಕು ದಿನಗಳಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಹಾಗೂ ಕೇರಳದ ಸುಮಾರು 2800 ರಿಂದ 3000 ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು. ಕ್ರೀಡಾಕೂಟದಲ್ಲಿ 300 ಮೀ 500 ಮೀ ಹಾಗೂ 1000 ಮೀ ಸ್ಕೇಟಿಂಗ್ ಓಟಗಳು ನಡೆದವು. ಅಂಡರ್-19 ವಿದ್ಯಾರ್ಥಿಗಳು ನಾನಾ ಹಂತದ ಪಂದ್ಯಗಳಲ್ಲಿ ಪಾಲಗೋಂಡಿದರು.