ಬಿಸಿ ಬಿಸಿ ಸುದ್ದಿ

ರಂಗಂಪೇಟೆ ಕನ್ನಡ ಸಾಹಿತ್ಯ ಸಂಘ 81ನೇ ನಾಡಹಬ್ಬ

ಸುರಪುರ: ಕನ್ನಡ ನಾಡು ನುಡಿಯ ಸೇವೆಗೆ ಕನ್ನಡ ಸಾಹಿತ್ಯ ಸಂಘ ಸಲ್ಲಿಸಿರುವ ಸೇವೆ ಅಮೋಘವಾಗಿದೆ,ನಾನು ಬಂದ ಕೂಡಲೇ ಈ ಸಂಘದ ಬಗ್ಗೆ ಕೇಳಿ ತಿಳಿದುಕೊಂಡಾಗ ತುಂಬಾ ಸಂತೋಷವಾಯಿತು ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ: ಸುಶೀಲಾ ಬಿ ಮಾತನಾಡಿದರು.

ನಗರದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ 81ನೇ ನಾಡಹಬ್ಬದ ಅಂಗವಾಗಿ ನಡೆದ ನಾಲ್ಕನೇ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಉರ್ದು ಪ್ರಾಬಲ್ಯ ಇರುವ ಸಂದರ್ಭದಲ್ಲಿ ಬುದ್ಧಿವಂತ ಶೆಟ್ಟರ ನೇತೃತ್ವದಲ್ಲಿ ಸಂಘ ಇಷ್ಟೊಂದು ಕೆಲಸ ಮಾಡಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ,ಇದನ್ನು ಕೇವಲ ರಂಗಂಪೇಟೆ ಎಂದು ಕರೆಯುವ ಬದಲು ಇದನ್ನು ಕ್ನನಡ ಸಾಹಿತ್ಯ ಸಂಪದ ರಂಗಂಪೇಟೆ ಎಂದು ಕರೆದರೆ ಇನ್ನೂ ಉತ್ತಮವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷ ಮುಂದಿನ ದಿನಗಳಲ್ಲಿ ಸಂಘದಿಂದ ಇನ್ನೂ ಹೆಚ್ಚೆಚ್ಚು ಕಾರ್ಯಕ್ರಮಗಳು ನಡೆಯಲಿ ಮಹಿಳೆಯರು ಇನ್ನೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ ಎಂದು ಹಾರೈಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕಲಬುರ್ಗಿಯಿಂದ ಆಗಮಿಸಿದ್ದ ಕಾವ್ಯಶ್ರಿ ಮಹಾಗಾಂವಕರ್ ಅವರು ಮಾತನಾಡಿ,12ನೇ ಶತಮಾನದ ಬಸವಾದಿ ಶರಣರು ವಚನಗಳ ಮೂಲಕ ಸಮಸ್ತ ಸಮಾಜದ ಅಭಿವೃಧ್ಧಿಗೆ ಕೊಡುಗೆ ನೀಡಿದ್ದಾರೆ,ಬಸವಣ್ಣನವರ ಪೂರ್ವದಲ್ಲಿ ಋಷಿ ಮುನಿಗಳು ಹಣ್ಣು ಹಂಪಲು ಸೇವಿಸಿ ಗುಡ್ಡಗಾಡುಗಳಲ್ಲಿ ತಪಸ್ಸು ಮಾಡುವವರನ್ನು ಮಹಾತ್ಮ ಎನ್ನಲಾಗುತ್ತಿತ್ತು,ಆದರೆ ಬಸವಣ್ಣನವರು ಎಲ್ಲರಿಗೂ ಇಷ್ಟಲಿಂಗವನ್ನು ನೀಡಿ ಎಲ್ಲರು ಶರಣರಾಗುವ ಅವಕಾಶವನ್ನು ನೀಡಿದರು ಎಂದರು.

ಡಿವೈಎಸ್ಪಿ ಜಾವಿದ್ ಇನಾಂದಾರ್ ಮಾತನಾಡಿ,ಕನ್ನಡ ಸಾಹಿತ್ಯ ಎನ್ನುವುದು ಇತಿಹಾಸದೊಂದಿಗೆ ಬೆಳೆದು ಬಂದ ಸಾಹಿತ್ಯವಾಗಿದೆ,ಸಾಹಿತ್ಯ ತಿಳಿಯಬೇಕಾದರೆ ಇತಿಹಾಸ ತಿಳಿಯುವುದು ಅವಶ್ಯವಾಗಿದೆ,ಅದರಂತೆ ನಾನು ಸುರಪುರಕ್ಕೆ ಬಂದಾಗ ಇಲ್ಲಿಯ ಅರಸರ ಇತಿಹಾಸ ತಿಳಿದು ತುಂಬಾ ಹೆಮ್ಮೆಯಾಯಿತು,ಅದರಂತೆ ಇಲ್ಲಿಯ ಸಾಹಿತ್ಯ ಸಂಘಗಳ ಸೇವೆಯೂ ತುಂಬಾ ಅಭಿಮಾನ ಮೂಡಿಸಿತು ಎಂದರು.

ಅಲ್ಲದೆ ಇಂದು ಕನ್ನಡ ಭಾಷೆಯಲ್ಲಿಯೇ ಐಎಎಸ್,ಕೆಎಎಸ್,ಐಪಿಎಎಸ್ ಪರೀಕ್ಷೆಗಳ ಬರೆಯಲು ಅವಕಾಶವಿದೆ,ನಾನುಕೂಡ ಕನ್ನಡದಲ್ಲಿಯೇ ಪರೀಕ್ಷೆ ಬರೆದು ಪಾಸಾದವನು,ಜೊತೆಗೆ ನಾನು ಅಧಿಕಾರಿಗಳು ನಮ್ಮನ್ನು ಪರೀಕ್ಷಿಸುವಾಗ ಕನ್ನಡ ವಚನ ಹೇಳುವಂತೆ ಕೇಳಿದ್ದರು ಅದನ್ನು ಸುಶ್ರಾವ್ಯವಾಗಿ ಹಾಡಿದ್ದರಿಂದ ಎಲ್ಲ ಆಯ್ಕೆ ಸಮಿತಿಯ ಅಧಿಕಾರಿಗಳು ಖುಷಿಯಾಗಿದ್ದರು ಅಂತಹ ಶಕ್ತಿ ಕನ್ನಡ ಭಾಷೆ ವಚನ ಸಾಹಿತ್ಯಕ್ಕಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಬುದ್ಧಿವಂತ ಶೆಟ್ಟರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಭುವನೇಶ್ವರಿ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಗಮೇಶ ಹಿರೇಮಠ ಎನ್ನುವ ಮಗು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ತೋರಿಸಿದ ಎಲ್ಲ ಅಂಕೆ ಅಕ್ಷರ ಚಿತ್ರಗಳ ಗುರುತಿಸುವ ಮೂಲಕ ಎಲ್ಲರಲ್ಲಿ ಆಶ್ಚರ್ಯ ಮೂಡಿಸಿತು.ನಂತರ ವಿವಿಧ ಶಾಲಾ ಮಕ್ಕಳಿಂದ ಭರತ ನಾಟ್ಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ತಹಸೀಲ್ದಾರ್ ಕೆ.ವಿಜಯಕುಮಾರ,ಪಿ.ಐ ಆನಂದ ವಾಘಮೊಡೆ,ಸಾಹಿತಿ ಶಾಂತಪ್ಪ ಬೂದಿಹಾಳ,ಡಾ:ಸುರೇಶ ಸಜ್ಜನ್,ಶ್ರೀದೇವಿ ಕೊಟಗೆರೆ,ಪುಷ್ಪಾ ಆವಂಟಿ ಇದ್ದರು,ಮಾಧುರಿ ಕಲ್ಕುಂಡಿ ಅಧ್ಯಕ್ಷತೆ ವಹಿಸಿದ್ದರು.

emedialine

Recent Posts

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಸನ್ಮಾನ

ಕಲಬುರಗಿ: ಕಾಂಗ್ರೆಸ್ ಎ.ಐ.ಸಿ.ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಕಾಂಗ್ರೆಸ್ ಯುವ ಮುಖಂಡ…

18 mins ago

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕಲಬುರಗಿ: ಜಿಲ್ಲಾ ಸವಿತಾ ಸಮಾಜ ಸರಕಾರಿ/ಅರೆ ಸರಕಾರಿ ನೌಕರರ ಸಂಘದಿಂದ ಪ್ರತಿ ವರ್ಷದಂತೆ ಈ ವರ್ಷವು ಜುಲೈ 21 ರಂದು…

21 mins ago

ಕಲಬುರಗಿಯಲ್ಲಿ ಬಿಜೆಪಿಯಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಯತ್ನ: ಹಲವರು ಪೊಲೀಸರ ವಶಕ್ಕೆ

ಕಲಬುರಗಿ: ವಾಲ್ಮೀಕಿ ಅಭಿವೃದ್ದಿ ನಿಗಮದಲಲಲಿ ನಡೆದ 187 ಕೋಟಿ ರೂ ಹಗರಣದ ಹೊಣೆಹೊತ್ತು ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೇ ನೀಡಬೇಕೆಂದು…

25 mins ago

ಜೇವರ್ಗಿ ಆಸ್ಪತ್ರೆಯಲ್ಲಿ ಅವ್ಯವಹಾರ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಜೈ ಕನ್ನಡಿಗರ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾ ವೈದ್ಯಾಧಿಕಾರಿಗಳಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲೆಯ ಜೇವರ್ಗಿ…

42 mins ago

ಬದಲಾಗುವ ಜಗತ್ತಿನಲ್ಲಿ ಸಾಹಿತ್ಯದ ಬದಲಾವಣೆ ಬಹು ಮುಖ್ಯ : ಪೆÇ್ರ. ಬಿ. ಕೆ. ತುಲಸಿಮಾಲ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ "ಆಧುನಿಕ ಕನ್ನಡ ಕಾವ್ಯ ಧಾರೆಗಳು" ಎಂಬ…

44 mins ago

ಸಾಹಿತ್ಯ ಲೋಕದಲ್ಲಿ ಮಿಂಚಿ ಮರೆಯದಾದ ದೃವತಾರೆ ಡಾ.ಕಮಲಾ ಹಂಪನ

ಸುರಪುರ:ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ಇತ್ತೀಚಿಗೆ ಇಹಲೋಕ ತ್ಯಜಿಸಿದ ಸಾಹಿತಿಗಳಾದ ಡಾ.ಕಮಲಾ ಹಂಪನಾ,ಕಕ್ಕೇರಾದ…

55 mins ago