ಬಿಸಿ ಬಿಸಿ ಸುದ್ದಿ

ಕಲಬುರಗಿ ರಸ್ತೆಗೆ ಇಳಿದ ಎಲೆಕ್ಟ್ರಿಕ್ ಇಟೆಕ್-9.0; ಶಾಸಕ ಅಲ್ಲಮಪ್ರಭು ಪಾಟೀಲ, ಬಿ.ಜಿ. ಪಾಟೀಲ ಬಿಡುಗಡೆ

ಕಲಬುರಗಿ: ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಜನಸಂಚಾರ ಮಾತ್ರವಲ್ಲದೇ ಆರ್ಥಿಕ ಅಭಿವೃದ್ಧಿಗೆ ಎಲೆಕ್ಟ್ರಿಕ್ ಇಟೆಕ್-9.0 ವಾಹನಗಳು ಕೊಡುಗೆ ನೀಡಲಿವೆ ಎಂದು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಅಭಿಪ್ರಾಯಪಟ್ಟರು.

ಕಲಬುರಗಿಯ ಸಿದ್ದೇಶ್ವರ ಕಲ್ಯಾಣ ಮಂಟದಲ್ಲಿ ನಡೆದ ಎಲೆಕ್ಟ್ರಿಕ್ ಇಟೆಕ್-9.0 ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾತನಾಡಿದರು.

ಕಳೆದ ಹದಿಮೂರು ವರ್ಷಗಳಿಂದ ಶ್ರೀಕಲ್ಯಾಣ್ ಬಜಾಜ್ ಸಂಸ್ಥೆ ಜನ ಸಂಚಾರ ಸುಗಮಗೊಳಿಸಲು ಹಾಗೂ ಪರಿಸರಕ್ಕೆ ?ಪೂರಕವಾಗಿರುವ ಆಟೊಗಳನ್ನು ಮಾರುಕಟ್ಟೆಗೆ ನೀಡುತ್ತಲೇ ಬಂದಿದೆ. ಈಗ ಅದರ ಇವಿ ಆವೃತ್ತಿ ಜನರಿಗೆ ಕಡಿಮೆ ದರಲ್ಲಿ ಸೇವೆ ನೀಡಲು ಅನುವಾಗಲಿದೆ ಎಂದರು.

ಪರಿಸರಕ್ಕೆ ಹಾನಿ ಮಾಡದ ವಾಹನಗಳು ಕಲ್ಯಾಣ ಕರ್ನಾಟಕಕ್ಕೆ ಇನ್ನಷ್ಟು ಬೇಕಾಗಿದೆ. ಮಾಲಿನ್ಯ ಕಾಪಾಡಲು ಎಲ್ಲರೂ ಸಹಕರಿಸಬೇಕು. ಇದು ಎಲ್ಲರ ಧೈಯವಾಗಬೇಕು ಎಂದು ತಿಳಿಸಿದರು.

ನಂತರ ಮಾತನಾಡಿದ ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಅವರು, ನಗರದ ಜನಸಂಚಾರ ಸುಗಮಗೊಳಿಸುವ ಯಾವುದೇ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಬಲ ನೀಡುತ್ತಲೇ ಬಂದಿವೆ. ಕಡಿಮೆ ಖರ್ಚಿನಲ್ಲಿ ಜನರು ಸಂಚಾರ ಮಾಡಲು ಇವಿ ಆಟೋಗಳು ಸಹಕಾರಿಯಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಯೋಜನೆ ದಿನೇ ದಿನೇ ಸಾಕಾರಗೊಳ್ಳುತ್ತಿರುವುದು ಸಂತಸವಾಗುತ್ತದೆ ಎಂದರು.

ಬಜಾಜ್ ಸಂಸ್ಥೆ ವಿಶ್ವದ 70 ದೇಶಗಳಲ್ಲಿ ತನ್ನ ಆಟೋ ಸೇವೆಗಳನ್ನು ಒದಗಿಸುತ್ತದೆ. ಕೇವಲ 3 ಗಂಟೆ ಚಾರ್ಚ್ ಮಾಡಿದರೆ ಬರೋಬ್ಬರಿ 178 ಕಿ. ಮೀಟರ್ ಸಾಗುವ ಈ ಆಟೋಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಆರ್ಥಿಕ ಉಳಿತಾಯ ಸಾಧ್ಯವಾಗುವುದಲ್ಲದೇ ಜನರ ಹಾಗೂ ಆಟೊ ಮಾಲೀಕರ ಜೀವನ ಮಟ್ಟ ಸುಧಾರಣೆಯಾಗುವುದರಲ್ಲಿ ಎರಡು ಮಾತಿಲ್ಲ ಎಂದರೂ ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶ್ರೀಕಲ್ಯಾಣ್ ಬಜಾಜ್ ಸಂಸ್ಥೆಯ ಪಾಲುದಾರರಾದ ಅರುಣ್ ಭಟ್, ಸತ್ಯನಾಥ್ ಶೆಟ್ಟಿ ಹಾಗೂ ವಿದ್ಯಾಧರ್ ಭಟ್ ಇದ್ದರು. ಮಾರುಕಟ್ಟೆ ವಿಭಾಗದ ಪ್ರಾದೇಶಿಕ ಮ್ಯಾನೇಜರ್ ಎ.ರಾಘವೇಂದ್ರ, ಸರ್ವೀಸ್ ವಿಭಾಗದ ಪ್ರಾದೇಶಿಕ ಮ್ಯಾನೇಜರ್ ಅನಂತಪದ್ಮನಾಭ್, ಏರಿಯಾ ಸೇಲ್ಸ್ ಮ್ಯಾನೇಜರ್‍ಗಳಾದ ವೆಂಕಟೇಶ್ ಎಂ.ಎ, ಹಾಗೂ ವಿಶ್ವನಾಥ್ ಹಾನಗಲ್ ಅವರು ಇದ್ದರು.

emedialine

Recent Posts

ನಿಧನ ವಾರ್ತೆ: ಹಣಮಂತರಾವ್ ನಾಟೀಕಾರ

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಆಲೂರು ನಿವಾಸಿ ಹಾಗೂ ಕಲಬುರಗಿ ಡಯಟ್ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಹಣಮಂತರಾವ್ ನಾಟೀಕಾರ(53)…

5 hours ago

ಕರ್ನಾಟಕ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಕೋರಿ ಕೇಂದ್ರಕ್ಕೆ ಪತ್ರ ಬರೆದ ಸಚಿವ ಶರಣಪ್ರಕಾಶ್ ಪಾಟೀಲ್

ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರಿಗೆ ಪತ್ರ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು ಎನ್ ಆರ್ ಐ ಕೋಟಾ ಕೊಡಿ 508…

7 hours ago

ಆಂದೋಲಾ ಸ್ವಾಮೀಜಿಗೆ ಘತ್ತರಗಾ ಗ್ರಾಮಸ್ಥರ ಸವಾಲು

ಭಾಗ್ಯ ವಂತಿ ದೇವಸ್ಥಾನ ಅಭಿವೃದ್ಧಿ ಘತ್ತರಗಾಕ್ಕೆ ಬಂದು ಕಣ್ತೆರೆದು ನೋಡಲಿ ಕಲಬುರಗಿ: ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಹಿಂದಿನ‌ ಕಲಬುರಗಿ…

7 hours ago

ಉಪ ಕಾರಾಗೃಹಕ್ಕೆ ಜಿಲ್ಲಾ ನ್ಯಾಯಾಧೀಶರ ಧಿಡೀರ್ ಭೇಟಿ; ಪರಿಶೀಲನೆ

ಸುರಪುರ:ಪಟ್ಟಣದ ಉಪ ಕಾರಾಗೃಹಕ್ಕೆ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪ…

7 hours ago

ರಂಗಭೂಮಿಗೆ ಸಿ.ಜಿ.ಕೆ ಕೊಡುಗೆ ಅಪಾರ; ಸಿಜಿಕೆ ಪ್ರಶಸ್ತಿ ಪ್ರದಾನ ಸಮಾರಂಭ

ಸುರಪುರ:ಕರ್ನಾಟಕ ರಂಗಕ್ಷೇತ್ರಕ್ಕೆ ಹಿರಿಯ ನಾಟಕಕಾರರಾಗಿದ್ದ ಸಿ.ಜಿ.ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ…

7 hours ago

ಕನ್ನಡ ಸಾಹಿತ್ಯ ಸಂಘ ಸಾಹಿತಿ ದಿ.ಡಾ.ಕಮಲಾ ಹಂಪನಾಗೆ ಶ್ರದ್ಧಾಂಜಲಿ

ಸುರಪುರ: ಮೇರು ಸಾಹಿತಿ ಡಾ.ಕಮಲಾಹಂಪನಾ ಅವರ ಕೃತಿಗಳನ್ನು ಓದುವದು ಹಾಗೂ ಆ ಕೃತಿಗಳು ಸಾಮಾನ್ಯ ಜನರಿಗೆ ಸಿಗುವಂತೆ ಮಾಡುವದು ಇಂದಿನ…

7 hours ago