ರಂಗಂಪೇಟೆ ಕನ್ನಡ ಸಾಹಿತ್ಯ ಸಂಘ 81ನೇ ನಾಡಹಬ್ಬ

0
4

ಸುರಪುರ: ಕನ್ನಡ ನಾಡು ನುಡಿಯ ಸೇವೆಗೆ ಕನ್ನಡ ಸಾಹಿತ್ಯ ಸಂಘ ಸಲ್ಲಿಸಿರುವ ಸೇವೆ ಅಮೋಘವಾಗಿದೆ,ನಾನು ಬಂದ ಕೂಡಲೇ ಈ ಸಂಘದ ಬಗ್ಗೆ ಕೇಳಿ ತಿಳಿದುಕೊಂಡಾಗ ತುಂಬಾ ಸಂತೋಷವಾಯಿತು ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ: ಸುಶೀಲಾ ಬಿ ಮಾತನಾಡಿದರು.

ನಗರದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ 81ನೇ ನಾಡಹಬ್ಬದ ಅಂಗವಾಗಿ ನಡೆದ ನಾಲ್ಕನೇ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಉರ್ದು ಪ್ರಾಬಲ್ಯ ಇರುವ ಸಂದರ್ಭದಲ್ಲಿ ಬುದ್ಧಿವಂತ ಶೆಟ್ಟರ ನೇತೃತ್ವದಲ್ಲಿ ಸಂಘ ಇಷ್ಟೊಂದು ಕೆಲಸ ಮಾಡಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ,ಇದನ್ನು ಕೇವಲ ರಂಗಂಪೇಟೆ ಎಂದು ಕರೆಯುವ ಬದಲು ಇದನ್ನು ಕ್ನನಡ ಸಾಹಿತ್ಯ ಸಂಪದ ರಂಗಂಪೇಟೆ ಎಂದು ಕರೆದರೆ ಇನ್ನೂ ಉತ್ತಮವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷ ಮುಂದಿನ ದಿನಗಳಲ್ಲಿ ಸಂಘದಿಂದ ಇನ್ನೂ ಹೆಚ್ಚೆಚ್ಚು ಕಾರ್ಯಕ್ರಮಗಳು ನಡೆಯಲಿ ಮಹಿಳೆಯರು ಇನ್ನೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ ಎಂದು ಹಾರೈಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕಲಬುರ್ಗಿಯಿಂದ ಆಗಮಿಸಿದ್ದ ಕಾವ್ಯಶ್ರಿ ಮಹಾಗಾಂವಕರ್ ಅವರು ಮಾತನಾಡಿ,12ನೇ ಶತಮಾನದ ಬಸವಾದಿ ಶರಣರು ವಚನಗಳ ಮೂಲಕ ಸಮಸ್ತ ಸಮಾಜದ ಅಭಿವೃಧ್ಧಿಗೆ ಕೊಡುಗೆ ನೀಡಿದ್ದಾರೆ,ಬಸವಣ್ಣನವರ ಪೂರ್ವದಲ್ಲಿ ಋಷಿ ಮುನಿಗಳು ಹಣ್ಣು ಹಂಪಲು ಸೇವಿಸಿ ಗುಡ್ಡಗಾಡುಗಳಲ್ಲಿ ತಪಸ್ಸು ಮಾಡುವವರನ್ನು ಮಹಾತ್ಮ ಎನ್ನಲಾಗುತ್ತಿತ್ತು,ಆದರೆ ಬಸವಣ್ಣನವರು ಎಲ್ಲರಿಗೂ ಇಷ್ಟಲಿಂಗವನ್ನು ನೀಡಿ ಎಲ್ಲರು ಶರಣರಾಗುವ ಅವಕಾಶವನ್ನು ನೀಡಿದರು ಎಂದರು.

ಡಿವೈಎಸ್ಪಿ ಜಾವಿದ್ ಇನಾಂದಾರ್ ಮಾತನಾಡಿ,ಕನ್ನಡ ಸಾಹಿತ್ಯ ಎನ್ನುವುದು ಇತಿಹಾಸದೊಂದಿಗೆ ಬೆಳೆದು ಬಂದ ಸಾಹಿತ್ಯವಾಗಿದೆ,ಸಾಹಿತ್ಯ ತಿಳಿಯಬೇಕಾದರೆ ಇತಿಹಾಸ ತಿಳಿಯುವುದು ಅವಶ್ಯವಾಗಿದೆ,ಅದರಂತೆ ನಾನು ಸುರಪುರಕ್ಕೆ ಬಂದಾಗ ಇಲ್ಲಿಯ ಅರಸರ ಇತಿಹಾಸ ತಿಳಿದು ತುಂಬಾ ಹೆಮ್ಮೆಯಾಯಿತು,ಅದರಂತೆ ಇಲ್ಲಿಯ ಸಾಹಿತ್ಯ ಸಂಘಗಳ ಸೇವೆಯೂ ತುಂಬಾ ಅಭಿಮಾನ ಮೂಡಿಸಿತು ಎಂದರು.

ಅಲ್ಲದೆ ಇಂದು ಕನ್ನಡ ಭಾಷೆಯಲ್ಲಿಯೇ ಐಎಎಸ್,ಕೆಎಎಸ್,ಐಪಿಎಎಸ್ ಪರೀಕ್ಷೆಗಳ ಬರೆಯಲು ಅವಕಾಶವಿದೆ,ನಾನುಕೂಡ ಕನ್ನಡದಲ್ಲಿಯೇ ಪರೀಕ್ಷೆ ಬರೆದು ಪಾಸಾದವನು,ಜೊತೆಗೆ ನಾನು ಅಧಿಕಾರಿಗಳು ನಮ್ಮನ್ನು ಪರೀಕ್ಷಿಸುವಾಗ ಕನ್ನಡ ವಚನ ಹೇಳುವಂತೆ ಕೇಳಿದ್ದರು ಅದನ್ನು ಸುಶ್ರಾವ್ಯವಾಗಿ ಹಾಡಿದ್ದರಿಂದ ಎಲ್ಲ ಆಯ್ಕೆ ಸಮಿತಿಯ ಅಧಿಕಾರಿಗಳು ಖುಷಿಯಾಗಿದ್ದರು ಅಂತಹ ಶಕ್ತಿ ಕನ್ನಡ ಭಾಷೆ ವಚನ ಸಾಹಿತ್ಯಕ್ಕಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಬುದ್ಧಿವಂತ ಶೆಟ್ಟರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಭುವನೇಶ್ವರಿ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಗಮೇಶ ಹಿರೇಮಠ ಎನ್ನುವ ಮಗು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ತೋರಿಸಿದ ಎಲ್ಲ ಅಂಕೆ ಅಕ್ಷರ ಚಿತ್ರಗಳ ಗುರುತಿಸುವ ಮೂಲಕ ಎಲ್ಲರಲ್ಲಿ ಆಶ್ಚರ್ಯ ಮೂಡಿಸಿತು.ನಂತರ ವಿವಿಧ ಶಾಲಾ ಮಕ್ಕಳಿಂದ ಭರತ ನಾಟ್ಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ತಹಸೀಲ್ದಾರ್ ಕೆ.ವಿಜಯಕುಮಾರ,ಪಿ.ಐ ಆನಂದ ವಾಘಮೊಡೆ,ಸಾಹಿತಿ ಶಾಂತಪ್ಪ ಬೂದಿಹಾಳ,ಡಾ:ಸುರೇಶ ಸಜ್ಜನ್,ಶ್ರೀದೇವಿ ಕೊಟಗೆರೆ,ಪುಷ್ಪಾ ಆವಂಟಿ ಇದ್ದರು,ಮಾಧುರಿ ಕಲ್ಕುಂಡಿ ಅಧ್ಯಕ್ಷತೆ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here