ಸತ್ಯಂ ಪಿಯು ಕಾಲೇಜಿನಲ್ಲಿ ರಾಜ್ಯೋತ್ಸವ

0
51

ಕಲಬುರಗಿ: ನಗರದ ಸತ್ಯಂ ಪಿಯು ಕಾಲೇಜಿನಲ್ಲಿ ಇಂದು ಕನ್ನಡ ರಾಜ್ಯೋತ್ಸವ ವಿಜ್ರಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ವಿಜಯಕುಮಾರ್ ಪರುತೆಅವರು ಕನ್ನಡ ನಾಡು ನುಡಿ ಜಲ ದ ಬಗ್ಗೆ ಪ್ರತಿಯೊಬ್ಬ ಕನ್ನಡಿಗ ಅಭಿಮಾನ ಅಂದಲೇಬೇಕು ಎಂದು ಹೇಳಿದರು ಕನ್ನಡ ಭಾಷೆ ಸುಮಾರು 2000 ವರ್ಷಗಳ ಇತಿಹಾಸ ಹೊಂದಿದೆ ಕನ್ನಡ ಭಾಷೆ ಬೆಳವಣಿಗೆಗಾಗಿ ಅನೇಕ ಸಾಹಿತಿಗಳು ಚಿಂತಕರು ಶ್ರಮಿಸಿದ್ದಾರೆ ನಾವುಗಳು ಕನ್ನಡ ಭಾಷೆಯನ್ನು ಉಳಿಸಿಕೊಂಡು ಮುಂದುವರಿಸಿಕೊಂಡು ಹೋಗುವದೇ ನಮ್ಮ ಸ್ವಾಭಿಮಾನ ಎಂದು ವಿಜಯಕುಮಾರ್ ಪರುತೆ ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಬಿ ಎಚ್ ನಿರಗುಡಿ ಮಾತನಾಡಿ ಕನ್ನಡ ಭಾಷೆ ಅತ್ಯಂತ ಶ್ರೇಷ್ಠ ಭಾಷೆ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನ ದೊರಕಿದೆ ಕನ್ನಡ ಭಾಷೆ ಅಂದದ ಭಾಷೆ ಚಂದದ ಭಾಷೆ ಪ್ರೀತಿಯ ಭಾಷೆ ಹಾಗಾಗಿ ನಾವು ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆ ಬಳಸುವುದರ ಮೂಲಕ ಕನ್ನಡಕ್ಕೆ ಗೌರವ ನೀಡಬೇಕಾಗಿ ಜೊತೆಗೆ ಕನ್ನಡವನ್ನು ಉಳಿಸಿಕೊಂಡು ಬೆಳೆಸಿಕೊಂಡು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುವಂತೆ ಕನ್ನಡಿಗರು ನಾಡಿಗೆ ಯುವಕರು ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಶ್ರೇಣಿಗೆ ಶ್ರಮ ವಹಿಸಲಿ ಎಂದು ಮಾತನಾಡಿದರು.

ಕಾರ್ಯಕ್ರಮದಲ್ಲಿ ಟ್ರಸ್ಟಿ ಅಮರೇಶ ಹಾಲವಿ ನಾಗರಾಜ್ ಕುಮಸಿಉಪನ್ಯಾಸಕರಾದ ಮಹೇಶ್ ಗಡಗಿ, ಮಂಜುನಾಥ ಕಲಾಲ್, ರೂಪಾ ಕುಲಕರ್ಣಿ ನಿರ್ಮಲಾಕಣ್ಮುಚೆ ಸುಚೇತಾ ಸುತಾರ್ ಭಾಗವಹಿಸಿದರು ಅನೇಕ ವಿದ್ಯಾರ್ಥಿಗಳು ರಾಜ್ಯೋತ್ಸವ ಕುರಿತು ಭಾಷಣ ಮಾಡಿದರು.

ರಸಪ್ರಶ್ನೆ ಪ್ರಬಂಧ ಸ್ಪರ್ಧೆ ಭಾಷಣ ಸ್ಪರ್ಧೆ ಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಕಾಣಿಕೆಯನ್ನು ನೀಡಲಾಯಿತು. ಮಹೇಶ್ವರಿ ಸಾಕ್ಷಿ, ಭಾಗ್ಯಶ್ರೀ, ಗಂಗೂಬಾಯಿ ಪರಶುರಾಮ್, ಸುನಿಲ್ ರೆಡ್ಡಿ ಕುಮಾರ್ ,ನಾಗಶ್ರೀ ,ಅಶ್ವಿನಿ ಅಂಬಿಕಾ, ಶಶಿಕಲಾ ಬಹುಮಾನಗಳನ್ನು ಪಡೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here