ಕಲಬುರಗಿ: ಸೇಡಂ ತಾಲ್ಲೂಕಿನ ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯ ಕೋರವಾರ ಗ್ರಾಮದಲ್ಲಿ ಮೂರ್ತಿ ಕಳವು ಮತ್ತು ಅಕ್ರಮ ಮಧ್ಯ ಮಾರಾಟ, ಜೂಜಾಟ, ಅನೈತಿಕ ಚಟುವಟಿಕೆಳಿಗೆ ಕಡಿವಾಣ ಹಾಕುವಂತೆ ಆಕ್ರಮಗಳಲ್ಲಿ ಶಾಮಿಲಾಗಿರುವ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶನಿವಾರ ಭಾರತಿಯ ದಲಿತ ಪ್ಯಾಂಥರ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
ಸೇಡಂ ರಸ್ತೆಯ ಸಣ್ಣೂರ ಟೋಲ್ ನಾಕಾದಿಂದ ಮಾಡಬೋಳ ಪೋಲಿಸ್ ಠಾಣೆಯ ವರೆಗೆ ಬ್ರಹತ್ ಪ್ರತಿಭಟನಾ ಮೇರೆವಣಿಗೆ ನಡೆಸಿ ಅಕ್ರಮ ಚಟುವಟಿಕೆ ನಡೆಸುತ್ತಿರುವವರ ಮೇಲೆ ಕೇಸ್ ದಾಖಲಿಸದೆ ಅವರ ಹತ್ತಿರ ಸದರಿ ಪೆÇಲೀಸ್ ಠಾಣೆಯ ಪಿ.ಎಸ್.ಐಗಳು ಹಣ ತೆಗೆದುಕೊಂಡು ಅಮಾಯಕ ಹೆಣ್ಣು ಮಗಳಿಗೆ ಕಾನೂನಿನ ಸಹಾಯ ಮಾಡಲು ಬಂದಿರುವ ಸಂಘಟನೆ ಮುಖಂಡರಿಗೆ ದರ್ಪದವರ್ತನೆ ಮಾಡಿ ಸಂಘಟನೆ ಮುಖಂಡರ ಮೇಲೆ ಕೆಸ್ ದಾಖಲಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರ ಬಗ್ಗೆ ಅವಹೇಳನಕಾರಿ ಮಾತನಾಡಿ, ದಲಿತ ಹೊರಾಟಗಾರರಿಗೆ ಕೀಳಾಗಿ ಮಾತನಾಡಿರುವ ಎ.ಎಸ್.ಐ. ಬಿಟ್, ಕ್ರೈಮ್ ಪೊಲೀಸ್ ಸೇರಿ ಅಕ್ರಮ ಚಟುವಟಿಕೆ ನಡೆಸುತ್ತಿರುವವರ ಹತ್ತಿರ (ಹಾಪ್ತಾ) ಹಣ ವಸುಲಿ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕಾನೂನಿನ ಸೂಕ್ತ ಕ್ರಮ ಕೈಗೊಳ್ಳಬೇಕು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಬಡ ಕುಟುಂಬಗಳಿಗೆ ನೆಮ್ಮದಿಯಿಂದ ಜೀವಿಸಲು ಅನುಕೂಲಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಘಟಕದ ಅಧ್ಯಕ್ಷ ರಮೇಶ್ ಡಿ, ಚಿಮಾಯಿ ಇದ್ದಾಯಿ, ಉಪಾಧ್ಯಕ್ಷ ಕಾಶಿನಾಥ ದಿವಂಟಗಿ, ಪ್ರ.ಕಾರ್ಯದರ್ಶಿ ಭಾರತ ಬುಳ್ಳಾ, ಶರಣು ಉಡಗಿ, ದಿನೇಶ ಮೋಘಾ, ಗಂಗಾಧರ ಮಾಡಬೂಳ, ಗೌತಮ್ ಪಾಳ, ಗುರುನಾಥ ದೊಡ್ಡಮನಿ, ಶರಣು ದೇಗಾಂವ, ಸೋಮು ಸಣ್ಣೂರ, ಶ್ರೀನಾಥ ತಳಕೇರಿ, ಆನಂದ ಕೆಕೆ ಸೇರಿದಂತೆ ಇತರರು ಇದ್ದರು.