ಕಲಬುರಗಿ: ಬೀದರ್ ಜಿಲ್ಲೆಯ ಹುಮನಾಬಾದ ನಗರದ ಮಾಣಿಕ ನಗರದಲ್ಲಿ ಸಿದ್ದರಾಜ ಮಹಾರಾಜ ಟೂರ್ನಿಮೆಂಟ್ ನಲ್ಲಿ ಅಭೂತ್ವಪೂರ್ವ ಕ್ರಿಕೇಟ್ ಆಟ ಆಡುವ ಮೂಲಕ ಸಾಧನೆ ಮಾಡಿರುವ ಸನ್ನಯ್ ಡಾ. ಅಂಬರಾಯ ರುದ್ರವಾಡಿಗೆ ಗ್ಯಾಲೇಕ್ಸಿ ಕ್ರಿಕೇಟ್ ಕ್ಲಬ್ ಅಭಿನಂದನೆ ವ್ಯಕ್ತಪಡಿಸಿದೆ.
ಟೂರ್ನಮೆಂಟ್ ನಲ್ಲಿ ಸನ್ನಯ್ ರುದ್ರವಾಡಿ ಎಮ್.ಎಸ್.ಎ-11 ಕ್ರಿಕೇಟರ್ಸ್ ತಂಡದ ವಿರುದ್ಧ 160 ಎಸೆತಗಳಲ್ಲಿ 37 ಬೌಂಡ್ರಿಗಳು 7ಸಿಕ್ಸರ್ಗಳು ಸೇರಿ 268 ರನ್ ಗಳಿಸಿರುವುದು ವಿಶೇಷವಾಗಿದೆ ಎಂದು ಗ್ಯಾಲೇಕ್ಸಿ ಕ್ರಿಕೇಟ್ ಕ್ಲಬ್ ನ ಅಧ್ಯಕ್ಷ ಪ್ರಕಾಶ್ ಅಯ್ಯಾಳಕರ್, ಉಪಾಧ್ಯಕ್ಷ ಅನಿಲ್ ಕುಮಾರ್ ಕಟಕೆ, ಗೋವಿಂದ್ ಪಿ ಕುಲಕರ್ಣಿ, ಕಾರ್ಯದರ್ಶಿ ನಾರಾಯಣ್ ದೇಸಾಯಿ, ಶರಣಬಸಪ್ಪ ಪಾಟೀಲ್, ಗಜೇಂದ್ರ ಮಡ್ಯಯಳಕರ್, ದತ್ತಾತ್ರೇಯ ಎಮ್. ಜಾಧವ್, ಸತೀಶ್ ದೇಶಮುಖ, ಅನಿಲ್ ದೇಶಮುಖ, ಪ್ರಹಲಾದ್ ಚೌವ್ಹಾಣ್, ಶಾಂಭವ ಮೂರ್ತಿ ತಂಟಾರಿ, ಸಿದ್ದಣ್ಣ ಜಿ ಕನ್ನೂರ, ವೆಂಕಟೇಶ್ ಎ ಪಾಟೀಲ್, ಮಿಲಿಂದ್ ವಿ ದೇಶಪಾಂಡೆ, ನೀಲಾಹೊಟಿ ಕುಲಕರ್ಣಿ, ರವಿ ಬಿ ಲಾತೂರಕರ್, ಗೌತಮ್ ಅಲಿಪುರ, ನರೇಂದ್ರ ಕಲಬೇನೂರ್, ಅಝರ್ ಹುಸೈನ್, ಮೊಹ್ಮದ್ ನೋರ್ ಶೈಫೂದ್ದೀನ್ ಸೇರಿದಂತೆ ಸದಸ್ಯರು ಕ್ರೀಡಾಪಡುಗಳು ಅಭಿನಂದಿಸಿದ್ದಾರೆ.